ಏಷ್ಯನ್ ಗೇಮ್ಸ್ನಲ್ಲಿ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಕಂಚಿನ ಪದಕವನ್ನು ಗಳಿಸಿದ ಪ್ರಣಯ್ ಎಚ್ಎಸ್ ಅವರ ಗಮನಾರ್ಹ ಸಾಧನೆಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ X ನಲ್ಲಿ ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ.
“ಏಷ್ಯನ್ ಗೇಮ್ಸ್ನಲ್ಲಿ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಕಂಚಿನ ಪದಕವನ್ನು ಗಳಿಸಿದ ಎಚ್.ಎಸ್. ಪ್ರಣಯ್ ಅವರ ಗಮನಾರ್ಹ ಸಾಧನೆಗೆ ರೋಮಾಂಚನಗೊಂಡಿದೆ! ಅವರ ಅಚಲ ಸಂಕಲ್ಪ ಮತ್ತು ಸಂಪೂರ್ಣ ದೃಢತೆ ಮಹತ್ವಾಕಾಂಕ್ಷಿ ಕ್ರೀಡಾಪಟುಗಳಿಗೆ ಪಾಠವಾಗಿದೆ. ಬ್ರಾವೋ, ಪ್ರಣಯ್! ರಾಷ್ಟ್ರವು ಈ ಯಶಸ್ಸನ್ನು ಆಚರಿಸುತ್ತದೆ” ಎಂದು ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ.
Thrilled by @PRANNOYHSPRI's remarkable achievement, securing the Bronze in Men's Badminton Singles at the Asian Games! His unwavering resolve and sheer tenacity are lessons for aspiring athletes.
— Narendra Modi (@narendramodi) October 6, 2023
Bravo, Prannoy! The nation celebrates this success. pic.twitter.com/5AUxyGvE4d