ಒಲಿಂಪಿಕ್ಸ್ ನಲ್ಲಿ ಗೋಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರ ಕೌಶಲ್ಯಪೂರ್ಣ ಮತ್ತು ದೃಢಸಂಕಲ್ಪದ ಮನಸೆಳೆಯುವ ಆಟಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ
ಟ್ವೀಟೊಂದರಲ್ಲಿ ಪ್ರಧಾನ ಮಂತ್ರಿ ಅವರು
“@aditigolf ಉತ್ತಮವಾಗಿ ಆಡಿದ್ದೀರಿ! ನೀವು ಬಹಳ ಅದ್ಭುತವಾದ ಕೌಶಲ್ಯವನ್ನು ಮತ್ತು ದೃಢ ಸಂಕಲ್ಪವನ್ನು #Tokyo2020 ರಲ್ಲಿ ತೋರ್ಪಡಿಸಿದ್ದೀರಿ. ಬಹಳ ಸಣ್ಣ ಅಂತರದಲ್ಲಿ ಪದಕವನ್ನು ಕಳೆದುಕೊಂಡಿರುವಿರಿ, ಆದರೆ ನೀವು ಯಾವುದೇ ಭಾರತೀಯ ಸಾಗಬಹುದಾದುದಕ್ಕಿಂತ ದೂರ ಸಾಗಿದ್ದೀರಿ ಮತ್ತು ಪ್ರಜ್ವಲಿಸಿದ್ದೀರಿ. ನಿಮ್ಮ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಕೆಗಳು” ಎಂದಿದ್ದಾರೆ.
Well played @aditigolf! You have shown tremendous skill and resolve during #Tokyo2020. A medal was narrowly missed but you’ve gone farther than any Indian and blazed a trail. Best wishes for your future endeavours.
— Narendra Modi (@narendramodi) August 7, 2021