ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಭಾರತ ಮತ್ತು ಭೂತಾನಿನ ಜರ್ಮನ್ ದೇಶದ ರಾಯಭಾರಿ ಡಾ ಫಿಲಿಪ್ ಅಕರ್ಮನ್ ಅವರು ಹಂಚಿಕೊಂಡ ವೀಡಿಯೊವನ್ನು ಶ್ಲಾಘಿಸಿದರು, ಅಲ್ಲಿ ಅವರು ಮತ್ತು ರಾಯಭಾರ ಕಚೇರಿಯ ಸದಸ್ಯರು ನಾಟು ನಾಟು ಹಾಡಿನ ಆಸ್ಕರ್ ಯಶಸ್ಸನ್ನು ಆಚರಿಸಿದರು. ವಿಡಿಯೋವನ್ನು ಹಳೆ ದೆಹಲಿಯಲ್ಲಿ ಚಿತ್ರೀಕರಿಸಲಾಗಿದೆ .
ಫೆಬ್ರವರಿಯಲ್ಲಿ, ಭಾರತದಲ್ಲಿನ ಕೊರಿಯನ್ ರಾಯಭಾರ ಕಚೇರಿಯು ಹಾಡನ್ನು ಆಚರಿಸುವ ವೀಡಿಯೊದೊಂದಿಗೆ ಹೊರತಂದಿತ್ತು
ಜರ್ಮನ್ ರಾಯಭಾರಿಯವರ ಟ್ವೀಟ್ಗೆ ಉತ್ತರಿಸಿದ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:
"ಭಾರತದ ಬಣ್ಣಗಳು ಮತ್ತು ವೈಶಿಷ್ಟ್ಯಗಳು! ಜರ್ಮನ್ನರು ಖಂಡಿತವಾಗಿಯೂ ನೃತ್ಯ ಮಾಡಬಲ್ಲರು ಮತ್ತು ಚೆನ್ನಾಗಿ ನೃತ್ಯ ಮಾಡುವರು!"
The colours and flavours of India! Germans can surely dance and dance well! https://t.co/NpiROYJPUy
— Narendra Modi (@narendramodi) March 20, 2023