ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರಾಖಂಡದ ಪಿಥೋರಗಢದ ಪಾರ್ವತಿ ಕುಂಡದಲ್ಲಿ ದೇವರ ದರ್ಶನ ಮಾಡಿ, ವಿಶೇಷ ಪೂಜೆ ನೆರವೇರಿಸಿದರು.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ, ಆದಿ ಕೈಲಾಸನ ದರ್ಶನ ಪಡೆಯಲು ಸಾಧ್ಯವಾಗಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿದ್ದಾರೆ. ಎಲ್ಲಾ ದೇಶವಾಸಿಗಳಿಗೆ ಕಲ್ಯಾಣವಾಗಲಿ, ಒಳಿತು ಉಂಟಾಗಲಿ ಮತ್ತು ಸಂತಸದ ಜೀವನ ಎಲ್ಲರದಾಗಲಿ ಎಂದು ಅವರು ಪ್ರಾರ್ಥಿಸಿದರು.
"ಉತ್ತರಾಖಂಡದ ಪಿಥೋರಗಢದ ಪವಿತ್ರ ಪಾರ್ವತಿ ಕುಂಡದಲ್ಲಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ನೆರವೇರಿಸಿ ನಾನು ಪುಳಕಿತನಾಗಿದ್ದೇನೆ. ಇಲ್ಲಿ ಆದಿ ಕೈಲಾಸನ ದರ್ಶನ ಪಡೆದು ನಾನು ಸಂತೋಷಗೊಂಡಿದ್ದೇನೆ. ಪ್ರಕೃತಿಯ ಮಡಿಲಲ್ಲಿ ಆಧ್ಯಾತ್ಮ ಮತ್ತು ಸಂಸ್ಕೃತಿ ಮೇಳೈಸಿರುವ ಈ ಪುಣ್ಯ ನೆಲೆಯಲ್ಲಿ ನಾನು ಸಂತೋಷವನ್ನು ಬಯಸುತ್ತೇನೆ. ನನ್ನ ದೇಶದ ಎಲ್ಲಾ ಕುಟುಂಬ ಸದಸ್ಯರಿಗೆ ಜೀವನ ಸಮೃದ್ಧವಾಗಿರಲಿ ಎಂದು ಪ್ರಾರ್ಥಿಸಿದ್ದೇನೆ" ಎಂದರು.
उत्तराखंड में पिथौरागढ़ के पवित्र पार्वती कुंड में दर्शन और पूजन से अभिभूत हूं। यहां से आदि कैलाश के दर्शन से भी मन आह्लादित है। प्रकृति की गोद में बसी अध्यात्म और संस्कृति की इस स्थली से अपने देश के सभी परिवारजनों के सुखमय जीवन की कामना की। pic.twitter.com/iIEpO0Cta0
— Narendra Modi (@narendramodi) October 12, 2023
ಪ್ರಧಾನಿ ಅವರು ಪಾರ್ವತಿ ಕುಂಡದಿಂದ ಇನ್ನೂ ಕೆಲವು ನೋಟಗಳನ್ನು ಹಂಚಿಕೊಂಡಿದ್ದಾರೆ.
Sharing some more glimpses from Parvati Kund. pic.twitter.com/knqEzDpa6U
— Narendra Modi (@narendramodi) October 12, 2023
ಪ್ರಧಾನ ಮಂತ್ರಿ ಕಾರ್ಯಾಲಯ ಈ ಕುರಿತು ಪೋಸ್ಟ್ ಮಾಡಿದೆ:
"ಪಾರ್ವತಿ ಕುಂಡದ ನೋಟಗಳು, ಅಲ್ಲಿ PM @narendramodi ಪ್ರಾರ್ಥನೆ ಸಲ್ಲಿಸಿ, ಪೂಜೆಯಲ್ಲಿ ಭಾಗವಹಿಸಿದರು."
Glimpses from Parvati Kund, where PM @narendramodi prayed and took part in the Pooja. pic.twitter.com/gff2kHOeQw
— PMO India (@PMOIndia) October 12, 2023