ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ಮೊಧೇರಾದಲ್ಲಿರುವ ಮೋಧೇಶ್ವರಿ ಮಾತಾ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಮತ್ತು ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರನ್ನು ಸನ್ಮಾನಿಸಲಾಯಿತು. ಶ್ರೀ ನರೇದ್ರ ಮೋದಿ ಅವರು ಕೈಮುಗಿದು ದೇವರ ಆಶೀರ್ವಾದವನ್ನು ಪಡೆದರು ಮತ್ತು ಗರ್ಭಗುಡಿಯಲ್ಲಿರುವ ಮೋಧೇಶ್ವರಿ ಮಾತಾ ಅವರ ವಿಗ್ರಹದ ಮುಂದೆ ತಲೆಬಾಗಿ ನಮಸ್ಕರಿಸಿದರು.
ಪ್ರಧಾನಮಂತ್ರಿಯವರೊಂದಿಗೆ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಮತ್ತು ಸಂಸತ್ ಸದಸ್ಯ ಶ್ರೀ ಸಿ.ಆರ್.ಪಾಟೀಲ್ ಕೂಡ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಪ್ರಧಾನಮಂತ್ರಿ ಅವರು ಇಂದು ಗುಜರಾತ್‌ನ ಮೆಹ್ಸಾನಾದ ಮೊಧೇರಾದಲ್ಲಿ 3900 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಜತೆಗೆ ಲೋಕಾರ್ಪಣೆ ಮಾಡಿದರು. ಮೊಧೇರಾವನ್ನು ಭಾರತದ ಮೊದಲ 24x7 ಸೌರಶಕ್ತಿ ಚಾಲಿತ ಗ್ರಾಮವೆಂದು ಪ್ರಧಾನಮಂತ್ರಿ ಅವರು ಘೋಷಿಸಿದರು.