QuoteRam belongs to everyone; Ram is within everyone: PM Modi in Ayodhya
QuoteThere were efforts to eradicate Bhagwaan Ram’s existence, but He still lives in our hearts, he is the basis of our culture: PM
QuoteA grand Ram Temple will become a symbol of our heritage, our unwavering faith: PM Modi

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಯೋಧ್ಯೆಯಲ್ಲಿ 'ಶ್ರೀ ರಾಮ ಜನ್ಮಭೂಮಿ ಮಂದಿರ'ದ ಭೂಮಿ ಪೂಜೆ ನೆರವೇರಿಸಿದರು.

ಭಾರತಕ್ಕೆ ವೈಭವದ ಅಧ್ಯಾಯ

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು, ಪವಿತ್ರ ಸಂದರ್ಭದಲ್ಲಿ ದೇಶವಾಸಿಗಳು ಹಾಗೂ ವಿಶ್ವದಾದ್ಯಂತದ ರಾಮ ಭಕ್ತರಿಗೆ ಅಭಿನಂದನೆ ತಿಳಿಸಿದರು. ಇದೊಂದು ಐತಿಹಾಸಿಕ ದಿನ ಎಂದು ಬಣ್ಣಿಸಿದ ಅವರು, ಭಾರತವು ಇಂದು ವೈಭವದ ಅಧ್ಯಾಯವೊಂದನ್ನು ಆರಂಭಿಸುತ್ತಿದೆ, ದೇಶಾದ್ಯಂತ ಜನರು ಶತಮಾನಗಳಿಂದ ಉತ್ಸಾಹದಿಂದ ಮತ್ತು ಭಾವನಾತ್ಮಕವಾಗಿ ಕಾಯುತ್ತಿದ್ದದ್ದನ್ನು ಅಂತಿಮವಾಗಿ ಸಾಧಿಸಿದ್ದಕ್ಕಾಗಿ ಸಂಭ್ರಮ ಪಡುತ್ತಿದ್ದಾರೆ. ಅವರಲ್ಲಿ ಅನೇಕರಿಕೆ ತಮ್ಮ ಜೀವಿತಾವಧಿಯಲ್ಲಿ ಈ ದಿನಕ್ಕೆ ಸಾಕ್ಷಿಯಾಗಿದ್ದೇವೆಂದು ನಂಬಲು ಸಾಧ್ಯವಾಗುತ್ತಿಲ್ಲ. ರಾಮ ಜನ್ಮಭೂಮಿಯು ಒಡೆಯುವ ಮತ್ತು ಮತ್ತೆ ಕಟ್ಟುವ ಆವರ್ತನದಿಂದ ವಿಮೋಚನೆಗೊಂಡಿದೆ ಮತ್ತು ಈಗ ಡೇರೆಯಲ್ಲಿರುವ ರಾಮ್‌ಲಲ್ಲಾಗೆ ಭವ್ಯವಾದ ಮಂದಿರವನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

ಆಗಸ್ಟ್ 15, ಸ್ವಾತಂತ್ರ್ಯ ಹೋರಾಟಕ್ಕಾಗಿ ದೇಶಾದ್ಯಂತ ಜನರು ಮಾಡಿದ ತ್ಯಾಗದ ಪ್ರತೀಕವಾಗಿರುವಂತೆ, ಈ ದಿನವು ರಾಮ ಮಂದಿರಕ್ಕಾಗಿ ತಲೆಮಾರುಗಳಿಂದ ನಡೆದ ಅಪಾರ ಸಮರ್ಪಣೆ ಮತ್ತು ನಿರಂತರ ಹೋರಾಟವನ್ನು ಸೂಚಿಸುತ್ತದೆ ಎಂದು ಪ್ರಧಾನಿ ಹೇಳಿದರು. ರಾಮ ಮಂದಿರದ ಕನಸು ನನಸಾಗಲು ಹೋರಾಟ ನಡೆಸಿದವರನ್ನು ಸ್ಮರಿಸಿದ ಪ್ರಧಾನಿಯವರು ಅವರಿಗೆ ವಂದನೆ ಸಲ್ಲಿಸಿದರು.

|

 

|

 

|

 

|

 

|

 

|

ಶ್ರೀ ರಾಮ – ನಮ್ಮ ಸಂಸ್ಕೃತಿಯ ಬುನಾದಿ

ಶ್ರೀರಾಮನ ಅಸ್ತಿತ್ವವನ್ನು ಅಳಿಸಿಹಾಕಲು ಹಲವಾರು ಪ್ರಯತ್ನಗಳು ನಡೆದರೂ, ಶ್ರೀ ರಾಮ ನಮ್ಮ ಸಂಸ್ಕೃತಿಯ ಬುನಾದಿಯಾಗಿ ಮುಂದುವರೆದಿದ್ದಾರೆ ಎಂದು ಪ್ರಧಾನಿ ಹೇಳಿದರು. ರಾಮ ಮಂದಿರವು ನಮ್ಮ ಸಂಸ್ಕೃತಿ, ಚಿರಂತನ ನಂಬಿಕೆ, ರಾಷ್ಟ್ರೀಯ ಮನೋಭಾವ ಮತ್ತು ಸಾಮೂಹಿಕ ಇಚ್ಛಾಶಕ್ತಿಯ ಆಧುನಿಕ ಸಂಕೇತವಾಗಲಿದ್ದು, ಇದು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದರು. ಮಂದಿರ ನಿರ್ಮಾಣವು ಅನೇಕ ಕ್ಷೇತ್ರಗಳಲ್ಲಿ ಹಲವಾರು ಅವಕಾಶಗಳನ್ನು ತೆರೆಯುತ್ತದೆ ಮತ್ತು ಈ ಪ್ರದೇಶದ ಆರ್ಥಿಕತೆಯನ್ನು ಬದಲಾಯಿಸುತ್ತದೆ ಎಂದು ತಿಳಿಸಿದರು.

ಕೋಟ್ಯಂತರ ರಾಮಭಕ್ತರ ನಂಬಿಕೆ ಮತ್ತು ಸಂಕಲ್ಪಕ್ಕೆ ಈ ದಿನ ಸಾಕ್ಷಿಯಾಗಿದೆ ಎಂದು ಪ್ರಧಾನಿ ಹೇಳಿದರು. ಕಳೆದ ವರ್ಷ ಗೌರವಾನ್ವಿತ ಸುಪ್ರೀಂ ಕೋರ್ಟ್ ತೀರ್ಪು ನೀಡಿದಾಗ, ಎಲ್ಲರ ಭಾವನೆಗಳನ್ನು ಗೌರವಿಸಿ ನಮ್ಮ ದೇಶವಾಸಿಗಳು ತೋರಿದ ಘನತೆ ಮತ್ತು ಸಂಯಮವನ್ನು ಅವರು ಶ್ಲಾಘಿಸಿದರು ಮತ್ತು ಅದೇ ರೀತಿಯ ಘನತೆ ಮತ್ತು ಸಂಯಮ ಇಂದೂ ಗೋಚರಿಸುತ್ತಿದೆ ಎಂದರು.

ಬಡವರು, ಹಿಂದುಳಿದವರು, ದಲಿತರು, ಬುಡಕಟ್ಟು ಸಮುದಾಯದವರು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರು ಶ್ರೀ ರಾಮನ ಗೆಲುವು, ಶ್ರೀ ಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿದ್ದು, ಛತ್ರಪತಿ ಶಿವಾಜಿಯಿಂದ ಸ್ವರಾಜ್ಯ ಸ್ಥಾಪನೆ, ಗಾಂಧೀಜಿಯವರ ಸ್ವಾತಂತ್ರ್ಯ ಚಳವಳಿಯ ನೇತೃತ್ವ ಮುಂತಾದ ಹಲವಾರು ಅದ್ಭುತಗಳನ್ನು ಹೇಗೆ ಆಚರಿಸುತ್ತಾರೆ ಎಂಬುದನ್ನು ಪ್ರಧಾನಿ ನೆನಪಿಸಿಕೊಂಡರು. ಜನಸಾಮಾನ್ಯರ ನೆರವು ಮತ್ತು ಕೊಡುಗೆಯಿಂದ ರಾಮ ಮಂದಿರ ನಿರ್ಮಾಣ ಪ್ರಾರಂಭವಾಗಿದೆ ಎಂದು ಅವರು ಹೇಳಿದರು.

ಶ್ರೀ ರಾಮನ ವಿಶಿಷ್ಟ ಗುಣಲಕ್ಷಣಗಳನ್ನು ವಿವರಿಸಿದ ಪ್ರಧಾನಿಯವರು, ಶ್ರೀ ರಾಮ ಯಾವಾಗಲೂ ಸತ್ಯಕ್ಕೆ ಅಂಟಿಕೊಂಡಿದ್ದವನು ಮತ್ತು ಸಾಮಾಜಿಕ ಸಾಮರಸ್ಯವನ್ನು ತನ್ನ ಆಡಳಿತದ ಮೂಲಾಧಾರವನ್ನಾಗಿ ಮಾಡಿದ್ದವನು ಎಂದರು. ಅವನು ತನ್ನ ಪ್ರಜೆಗಳನ್ನು ಸಮಾನವಾಗಿ ಪ್ರೀತಿಸುತ್ತಿದ್ದನು, ಆದರೆ ಬಡವರು ಮತ್ತು ನಿರ್ಗತಿಕರ ಬಗ್ಗೆ ವಿಶೇಷ ದಯೆ ಹೊಂದಿದ್ದನು. ಜೀವನದಲ್ಲಿ ಶ್ರೀ ರಾಮನು ಸ್ಫೂರ್ತಿಯಾಗಿಲ್ಲದ ಯಾವುದೇ ಅಂಶಗಳಿಲ್ಲ, ಅವನ ಪ್ರಭಾವವು ದೇಶದ ಸಂಸ್ಕೃತಿ, ತತ್ವ, ನಂಬಿಕೆ ಮತ್ತು ಸಂಪ್ರದಾಯದ ಹಲವಾರು ಅಂಶಗಳಲ್ಲಿ ಗೋಚರಿಸುತ್ತದೆ ಎಂದರು.

|

ಶ್ರೀ ರಾಮ – ವೈವಿಧ್ಯತೆಯಲ್ಲಿ ಏಕತೆಯ ಸಂಕೇತ

ಪ್ರಾಚೀನ ಕಾಲದಲ್ಲಿ ವಾಲ್ಮೀಕಿ ರಾಮಾಯಣದ ಮೂಲಕ, ಮಧ್ಯಯುಗದಲ್ಲಿ ತುಳಸಿದಾಸ, ಕಬೀರ ಮತ್ತು ಗುರುನಾನಕ್ ಮೂಲಕ ಶ್ರೀ ರಾಮ ಜನರಿಗೆ ಮಾರ್ಗದರ್ಶಕ ಬೆಳಕಾಗಿದ್ದಾನೆ. ಅಹಿಂಸೆ ಮತ್ತು ಸತ್ಯಾಗ್ರಹದ ಶಕ್ತಿಯ ಮೂಲವಾಗಿ ಮಹಾತ್ಮ ಗಾಂಧಿಯವರ ಭಜನೆಗಳಲ್ಲಿ ಶ್ರೀ ರಾಮ ಇದ್ದನು ಎಂದು ಪ್ರಧಾನಿ ಹೇಳಿದರು. ಭಗವಾನ್ ಬುದ್ಧನು ಶ್ರೀ ರಾಮನೊಂದಿಗೆ ಸಂಬಂಧ ಹೊಂದಿದ್ದಾನೆ ಮತ್ತು ಅಯೋಧ್ಯೆ ನಗರವು ಶತಮಾನಗಳಿಂದ ಜೈನರ ಶದ್ಧಾ ಕೇಂದ್ರವಾಗಿದೆ ಎಂದು ಅವರು ಹೇಳಿದರು. ವಿವಿಧ ಭಾಷೆಗಳಲ್ಲಿ ಬರೆದಿರುವ ವಿಭಿನ್ನ ರಾಮಾಯಣಗಳನ್ನು ವಿವರಿಸಿದ ಪ್ರಧಾನಿಯವರು, ಶ್ರೀ ರಾಮ ದೇಶದಲ್ಲಿನ ವೈವಿಧ್ಯತೆಯಲ್ಲಿ ಏಕತೆಯ ಸಂಕೇತ ಎಂದರು.

|

ಶ್ರೀ ರಾಮನನ್ನು ಹಲವಾರು ದೇಶಗಳಲ್ಲಿ ಪೂಜಿಸಲಾಗುತ್ತದೆ ಎಂದು ಪ್ರಧಾನಿ ಹೇಳಿದರು. ಗರಿಷ್ಠ ಮುಸ್ಲಿಂ ಜನಸಂಖ್ಯೆ ಹೊಂದಿರುವ ಇಂಡೋನೇಷ್ಯಾ, ಕಾಂಬೋಡಿಯಾ, ಲಾವೋಸ್, ಮಲೇಷ್ಯಾ, ಥೈಲ್ಯಾಂಡ್, ಶ್ರೀಲಂಕಾ, ನೇಪಾಳ ಮುಂತಾದ ದೇಶಗಳಲ್ಲಿ ಜನಪ್ರಿಯವಾಗಿರುವ ರಾಮಾಯಣಗಳನ್ನು ಅವರು ಪಟ್ಟಿ ಮಾಡಿದರು. ಇರಾನ್ ಮತ್ತು ಚೀನಾದಲ್ಲಿ ಶ್ರೀ ರಾಮನ ಉಲ್ಲೇಖಗಳಿವೆ ಮತ್ತು ಹಲವಾರು ದೇಶಗಳಲ್ಲಿ ರಾಮ ಕಥೆಗಳು ಜನಪ್ರಿಯವಾಗಿವೆ ಎಂದು ಹೇಳಿದರು. ರಾಮ ಮಂದಿರ ನಿರ್ಮಾಣದ ಪ್ರಾರಂಭದೊಂದಿಗೆ ಈ ಎಲ್ಲ ದೇಶಗಳ ಜನರು ಇಂದು ಸಂತೋಷಪಟ್ಟಿದ್ದಾರೆ ಎಂದು ಅವರು ಹೇಳಿದರು.

|

ಮನುಕುಲಕ್ಕೆ ಸ್ಫೂರ್ತಿ

ಈ ಮಂದಿರವು ಯುಗ ಯುಗಳವರೆಗೂ ಇಡೀ ಮನುಕುಲಕ್ಕೆ ಸ್ಫೂರ್ತಿಯಾಗಿರುತ್ತದೆ ಎಂದು ಪ್ರಧಾನಿ ಭರವಸೆ ವ್ಯಕ್ತಪಡಿಸಿದರು. ಶ್ರೀ ರಾಮ, ರಾಮ ಮಂದಿರ ಮತ್ತು ನಮ್ಮ ಪ್ರಾಚೀನ ಸಂಪ್ರದಾಯದ ಸಂದೇಶವು ಇಡೀ ಜಗತ್ತಿಗೆ ತಲುಪುವುದು ಮುಖ್ಯ. ಇದನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿ ರಾಮ ಪರಿಧಿ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.

ರಾಮ ರಾಜ್ಯ

ಮಹಾತ್ಮ ಗಾಂಧಿಯವರು ಕಂಡ ರಾಮ ರಾಜ್ಯದ ಕನಸುಗಳ ಬಗ್ಗೆ ಪ್ರಧಾನಿ ವಿವರಿಸಿದರು. ಶ್ರೀ ರಾಮನ ಬೋಧನೆಗಳು ದೇಶಕ್ಕೆ ಮಾರ್ಗದರ್ಶನ ನೀಡುವುದನ್ನು ಮುಂದುವರೆಸುತ್ತವೆ. ಯಾರೂ ಬಡವರಿರಬಾರದು ಅಥವಾ ಅತೃಪ್ತರಿರಬಾರದು; ಪುರುಷರು ಮತ್ತು ಮಹಿಳೆಯರು ಸಮಾನವಾಗಿ ಸಂತೋಷವಾಗಿರಬೇಕು; ರೈತರು ಮತ್ತು ಪಶು ಪಾಲಕರು ಯಾವಾಗಲೂ ಸಂತೋಷವಾಗಿರಬೇಕು; ಹಿರಿಯರು, ಮಕ್ಕಳು ಮತ್ತು ವೈದ್ಯರನ್ನು ಯಾವಾಗಲೂ ರಕ್ಷಿಸಬೇಕು; ಆಶ್ರಯ ಬಯಸಿ ಬಂದವರನ್ನು ರಕ್ಷಿಸುವುದು ಎಲ್ಲರ ಕರ್ತವ್ಯ; ತಾಯ್ನಾಡು ಸ್ವರ್ಗಕ್ಕಿಂತ ಮಿಗಿಲು ಮತ್ತು ಹೆಚ್ಚು ಶಕ್ತಿಯನ್ನು ಹೊಂದಿರುವ ಒಂದು ರಾಷ್ಟ್ರವು ಶಾಂತಿಯನ್ನು ಮತ್ತಷ್ಟು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಇವು ಶ್ರೀ ರಾಮನ ಬೋಧನೆಗಳಲ್ಲಿ ಸೇರಿವೆ. ಶ್ರೀ ರಾಮ ಆಧುನಿಕತೆ ಮತ್ತು ಬದಲಾವಣೆಯ ಪ್ರತೀಕ. ಶ್ರೀ ರಾಮನ ಈ ಆದರ್ಶಗಳನ್ನು ಅನುಸರಿಸಿ ದೇಶ ಪ್ರಗತಿಯಲ್ಲಿದೆ ಎಂದು ಪ್ರಧಾನಿ ಹೇಳಿದರು.

|

ಪರಸ್ಪರ ಪ್ರೀತಿ ಮತ್ತು ಭ್ರಾತೃತ್ವದ  ಬುನಾದಿ

ಪರಸ್ಪರ ಪ್ರೀತಿ ಮತ್ತು ಭ್ರಾತೃತ್ವದ ಬುನಾದಿಯ ಮೇಲೆ ಮಂದಿರವನ್ನು ನಿರ್ಮಿಸಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು. ‘ಸಬ್ಕಾ ಸಾಥ್’ಮೂಲಕ ‘ಸಬ್ಕಾ ವಿಶ್ವಾಸ್’ಗಳಿಸಿ ನಾವು ‘ಸಬ್ಕಾ ವಿಕಾಸ್’ಸಾಧಿಸಬೇಕು. ಆತ್ಮವಿಶ್ವಾಸ ಮತ್ತು ಆತ್ಮನಿರ್ಭರ ಭಾರತ ನಿರ್ಮಿಸಬೇಕು ಎಂದು ಹೇಳಿದರು. ಯಾವುದೇ ವಿಳಂಬ ಮಾಡದೇ, ನಾವು ಮುಂದೆ ಸಾಗಬೇಕು ಎಂಬ ಶ್ರೀ ರಾಮನ ಬೋಧನೆಯು ದೇಶವು ಅನುಸರಿಸಬೇಕಾದ ಸಂದೇಶವಾಗಿದೆ ಎಂದು ಅವರು ತಿಳಿಸಿದರು.

ಕೋವಿಡ್ ಸಂದರ್ಭದಲ್ಲಿ ‘ಮರ್ಯಾದಾ

ಕೋವಿಡ್ ಹಿನ್ನೆಲೆಯಲ್ಲಿ ಶ್ರೀ ರಾಮನ ‘ಮರ್ಯಾದಾ’ಮಾರ್ಗದ ಮಹತ್ವವನ್ನು ನೆನಪಿಸಿಕೊಳ್ಳುವ ಮೂಲಕ ಪ್ರಧಾನಿಯವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು. ಪ್ರಸ್ತುತ ಪರಿಸ್ಥಿತಿಯು ‘ದೋ ಗಜ್ ಕಿ ದೂರಿ – ಮಾಸ್ಕ್ ಹೈ ಜರೂರಿ’ ಎಂಬ ಮರ್ಯಾದಾ ನಡವಳಿಕೆಯನ್ನು ಬಯಸುತ್ತದೆ ಮತ್ತು ಎಲ್ಲರೂ ಇದನ್ನು ಅನುಸರಿಸಬೇಕು ಎಂದು ತಿಳಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Bharat Tex showcases India's cultural diversity through traditional garments: PM Modi

Media Coverage

Bharat Tex showcases India's cultural diversity through traditional garments: PM Modi
NM on the go

Nm on the go

Always be the first to hear from the PM. Get the App Now!
...
Prime Minister welcomes Amir of Qatar H.H. Sheikh Tamim Bin Hamad Al Thani to India
February 17, 2025

The Prime Minister, Shri Narendra Modi extended a warm welcome to the Amir of Qatar, H.H. Sheikh Tamim Bin Hamad Al Thani, upon his arrival in India.

|

The Prime Minister said in X post;

“Went to the airport to welcome my brother, Amir of Qatar H.H. Sheikh Tamim Bin Hamad Al Thani. Wishing him a fruitful stay in India and looking forward to our meeting tomorrow.

|

@TamimBinHamad”