ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಯಾಮ್ ಜೀ ಕೃಷ್ಣ ವರ್ಮಾ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. 2003ರಲ್ಲಿ ಶ್ಯಾಮ್ ಜೀ ಕೃಷ್ಣ ವರ್ಮಾ ಅವರ ಚಿತಾಭಸ್ಮವನ್ನು ಸ್ವಿಟ್ಜರ್ಲೆಂಡ್ನಿಂದ ಭಾರತಕ್ಕೆ ಮರಳಿ ತಂದದ್ದನ್ನು 2015 ರಲ್ಲಿ ಬ್ರಿಟನ್ನಿಂದ ಮರುನೇಮಕ ಪ್ರಮಾಣಪತ್ರವನ್ನು ಪಡೆದದ್ದನ್ನು ಪ್ರಧಾನಿ ಸ್ಮರಿಸಿದ್ದಾರೆ.
ಈ ಬಗ್ಗೆ ಪ್ರಧಾನಿ ಹೀಗೆ ಸರಣಿ ಟ್ವೀಟ್ ಮಾಡಿದ್ದಾರೆ.
“ಮಹಾನ್ ಕ್ರಾಂತಿಕಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಶ್ಯಾಮ್ ಜೀ ಕೃಷ್ಣ ವರ್ಮಾ ಅವರ ಜನ್ಮ ದಿನದಂದು ಅವರಿಗೆ ಗೌರವ ನಮನಗಳು. ದೇಶವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆಯನ್ನು ದೇಶವು ಎಂದಿಗೂ ಮರೆಯುವುದಿಲ್ಲ.”
“ಶ್ಯಾಮ್ ಜಿ ಕೃಷ್ಣ ವರ್ಮಾ ಅವರ ಜಯಂತಿಯಂದು ಅವರಿಗೆ ಗೌರವ ನಮನಗಳು”.
“2003ರಲ್ಲಿ ಶ್ಯಾಮ್ ಜಿ ಕೃಷ್ಣ ವರ್ಮಾ ಅವರ ಚಿತಾಭಸ್ಮವನ್ನು ಸ್ವಿಟ್ಜರ್ಲೆಂಡ್ನಿಂದ ಮರಳಿ ಭಾರತಕ್ಕೆ ತರಲು ಮತ್ತು 2015ರಲ್ಲಿ ನನ್ನ ಬ್ರಿಟನ್ ಭೇಟಿಯ ಸಮಯದಲ್ಲಿ ಅವರ ಮರುನೇಮಕ ಪ್ರಮಾಣಪತ್ರವನ್ನು ಸ್ವೀಕರಿಸಲು ಅವಕಾಶ ಸಿಕ್ಕಿದ್ದು ನನ್ನ ಸುದೈವ ಎಂದು ನಾನು ಭಾವಿಸುತ್ತೇನೆ. ಅವರ ಧೈರ್ಯ ಮತ್ತು ಶ್ರೇಷ್ಠತೆಯ ಬಗ್ಗೆ ಯುವ ಭಾರತ ಹೆಚ್ಚಾಗಿ ತಿಳಿಯಬೇಕಿದೆ.”
महान क्रांतिकारी और स्वतंत्रता सेनानी श्यामजी कृष्ण वर्मा को उनकी जयंती पर श्रद्धांजलि। देश को गुलामी से मुक्त कराने के लिए उन्होंने अपना जीवन समर्पित कर दिया। कृतज्ञ राष्ट्र आजादी की लड़ाई में उनके योगदान को कभी भुला नहीं पाएगा।
— Narendra Modi (@narendramodi) October 4, 2021
Tributes to Shyamji Krishna Varma on his Jayanti.
I consider myself blessed to have got the opportunity to bring back the ashes of Shyamji Krishna Varma back from Switzerland in 2003 and receive his reinstatement certificate during my UK visit in 2015. It is important that young India knows more about his courage and greatness. pic.twitter.com/WDoMN0BFmD
— Narendra Modi (@narendramodi) October 4, 2021