ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಮಾತಾ ಜಿಜಾವು ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ ಮತ್ತು ಛತ್ರಪತಿ ಶಿವಾಜಿ ಮಹಾರಾಜ ಅವರಂತಹ ಮಹಾನ್ ವ್ಯಕ್ತಿಗೆ ಮಾರ್ಗದರ್ಶನ ನೀಡಿರುವುದಕ್ಕಾಗಿ ಅವರ ಹೆಸರು ಸದಾ ನಮ್ಮ ಇತಿಹಾಸದ ಒಂದು ಭಾಗವಾಗಿರುತ್ತದೆ ಎಂದು ಅವರು ಹೇಳಿದರು.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಅವರು,
‘‘ರಾಜಮಾತಾ ಜಿಜಾವು ತಾಳ್ಮೆಯ ಮತ್ತೊಂದು ಹೆಸರಾಗಿದೆ. ಜಿಜಾವು ಅವರನ್ನು ಮಹಿಳಾ ಶಕ್ತಿಯ ಪ್ರತಿಕವಾಗಿ ನೋಡಲಾಗುತ್ತದೆ. ಛತ್ರಪತಿ ಶಿವಾಜಿ ಮಹಾರಾಜರಂತಹವರಿಗೆ ಮಾರ್ಗದರ್ಶಕರಾಗಿದ್ದ ಕಾರಣ ಅವರು ಸದಾ ನಮ್ಮ ಇತಿಹಾಸದ ಭಾಗವಾಗಿದ್ದಾರೆ. ಅವರು ಯಾವಾಗಲೂ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಿದರು. ಅವರ ಜನ್ಮದಿನದಂದು ಅವರಿಗೆ ಶುಭಾಶಯಗಳು,’’ ಎಂದು ಹೇಳಿದ್ದಾರೆ.
राजमाता जिजाऊ म्हणजे धैर्याचे दुसरे नाव. नारी शक्तीचे दर्शन जिजाऊंमधून होते. छत्रपती शिवाजी महाराजांना घडवणाऱ्या मार्गदर्शक म्हणून त्यांचे नाव आपल्या इतिहासात नेहमीच जोडले जाईल. त्यांनी कायमच लोकांच्या कल्याणासाठी काम केले. त्यांच्या जयंतीनिमित्त त्यांना अभिवादन.
— Narendra Modi (@narendramodi) January 12, 2023