ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಪಿಂಗಲಿ ವೆಂಕಯ್ಯನವರ ಜನ್ಮ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದರು. ನಮ್ಮ ರಾಷ್ಟ್ರಕ್ಕೆ ತ್ರಿವರ್ಣ ಧ್ವಜವನ್ನು ನೀಡುವಲ್ಲಿ ಪಿಂಗಲಿ ವೆಂಕಯ್ಯನವರ ಪರಿಶ್ರಮವನ್ನು ಪ್ರಧಾನಮಂತ್ರಿ ಮೋದಿಯವರು ಸ್ಮರಿಸಿದ್ದಾರೆ. ಆಗಸ್ಟ್ 9 ಮತ್ತು 15 ರ ನಡುವೆ ತ್ರಿವರ್ಣ ಧ್ವಜವನ್ನು ಹಾರಿಸಿ, https://harghartiranga.com ನಲ್ಲಿ ತಮ್ಮ ಸೆಲ್ಫಿಗಳನ್ನು ಹಂಚಿಕೊಳ್ಳುವ ಮೂಲಕ 'ಹರ್ ಘರ್ ತಿರಂಗಾ' ಆಂದೋಲನವನ್ನು ಬೆಂಬಲಿಸುವಂತೆ ಶ್ರೀ ಮೋದಿಯವರು ನಾಗರಿಕರನ್ನು ಆಗ್ರಹಿಸಿದ್ದಾರೆ.
ಪ್ರಧಾನಮಂತ್ರಿಯವರು X ನಲ್ಲಿ ಪೋಸ್ಟ್ ಮಾಡಿ:
"ಪಿಂಗಲಿ ವೆಂಕಯ್ಯನವರನ್ನು ಅವರ ಜನ್ಮದಿನದಂದು ಸ್ಮರಿಸುತ್ತೇನೆ.
ನಮಗೆ ತ್ರಿವರ್ಣ ಧ್ವಜವನ್ನು ನೀಡುವಲ್ಲಿ ಅವರ ಪ್ರಯತ್ನ ಅಪಾರವಾದದ್ದು, ಸದಾ ನೆನಪಿನಲ್ಲಿ ಉಳಿಯುವಂತಹದು."
'ಹರ್ ಘರ್ ತಿರಂಗಾ' ಚಳವಳಿಯನ್ನು ಬೆಂಬಲಿಸಿ, ಆಗಸ್ಟ್ 9 ಮತ್ತು 15ರ ನಡುವೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ! ನಿಮ್ಮ ಸೆಲ್ಫಿಯನ್ನು https://harghartiranga.com ನಲ್ಲಿ ಹಂಚಿಕೊಳ್ಳಲು ಮರೆಯದಿರಿ" ಎಂದು ತಿಳಿಸಿದ್ದಾರೆ.
Remembering Pingali Venkayya Ji on his birth anniversary. His effort in giving us the Tricolour will always be remembered.
— Narendra Modi (@narendramodi) August 2, 2024
Do support the #HarGharTiranga movement and unfurl the Tricolour between 9th and 15th August! Don’t forget to share your selfie on https://t.co/84MOUwgRyA