ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜೈಪುರದ ಧನಕ್ಯದಲ್ಲಿರುವ ದೀನ್ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಸ್ಮಾರಕದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರಿಗೆ ಗೌರವ ನಮನ ಸಲ್ಲಿಸಿದರು. "ಅಂತ್ಯೋದಯ ತತ್ವವನ್ನು ಅನುಸರಿಸುವ ಮೂಲಕ ದೇಶದ ಕಡು ಬಡವರ ಜೀವನವನ್ನು ಸುಲಭಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಪೋಸ್ಟ್ ನಲ್ಲಿ:
"ನಾನು ಇಂದು ಜೈಪುರದ ಧನಕ್ಯದಲ್ಲಿರುವ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ್ದೇನೆ. ಅವರ ಜನ್ಮದಿನದಂದು, ಅವರ ಜೀವನಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ನೋಡಿ ಹೊಸ ಚೈತನ್ಯವನ್ನು ಅನುಭವಿಸಿದೆ. ಅವರ ಅಂತ್ಯೋದಯ ತತ್ವವನ್ನು ಅನುಸರಿಸುವ ಮೂಲಕ ದೇಶದ ಕಡು ಬಡವರ ಜೀವನವನ್ನು ಸುಲಭಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ, " ಎಂದಿದ್ದಾರೆ.
जयपुर के धानक्या में आज पंडित दीनदयाल उपाध्याय राष्ट्रीय स्मारक जाकर उन्हें पुष्पांजलि अर्पित की। उनकी जन्म-जयंती पर यहां उनके जीवन से जुड़े अलग-अलग पहलुओं को देखकर एक नई ऊर्जा का अनुभव हुआ। हमारी सरकार उनके अंत्योदय के सिद्धांत पर चलकर देश के गरीब से गरीब का जीवन आसान बनाने के… pic.twitter.com/Bu5NdIJnGJ
— Narendra Modi (@narendramodi) September 25, 2023