ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇತ್ತೀಚೆಗೆ ಉಡಾವಣೆಯಾದ ಇ.ಒ.ಎಸ್.-06 ಉಪಗ್ರಹದಿಂದ ಪಡೆಯಲಾದ ಅಚ್ಚರಿದಾಯಕ ಚಿತ್ರಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಾರೆ. “ಬಾಹ್ಯಾಕಾಶ ತಂತ್ರಜ್ಞಾನದ ಜಗತ್ತಿನಲ್ಲಿನ ಈ ಪ್ರಗತಿ, ಚಂಡಮಾರುತಗಳನ್ನು ಉತ್ತಮವಾಗಿ ಗ್ರಹಿಸಲು ಮತ್ತು ಕರಾವಳಿ ತೀರದ ಆರ್ಥಿಕತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ಪ್ರಧಾನಮಂತ್ರಿಯವರು ಈ ರೀತಿ ಟ್ವೀಟ್ ಮಾಡಿದ್ದಾರೆ;
“ಇತ್ತೀಚೆಗೆ ಉಡಾವಣೆಯಾದ ಇ.ಒ.ಎಸ್.-06 ಉಪಗ್ರಹದಿಂದ ನೀವು ಅಚ್ಚರಿದಾಯಕ ಚಿತ್ರಗಳನ್ನು ನೋಡಿದ್ದೀರಾ? ಗುಜರಾತ್ ನ ಕೆಲವು ಸುಂದರ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಬಾಹ್ಯಾಕಾಶ ತಂತ್ರಜ್ಞಾನದ ಜಗತ್ತಿನಲ್ಲಿನ ಈ ಪ್ರಗತಿ, ಚಂಡಮಾರುತಗಳನ್ನು ಉತ್ತಮವಾಗಿ ಗ್ರಹಿಸಲು ಮತ್ತು ನಮ್ಮ ಕರಾವಳಿ ತೀರದ ಆರ್ಥಿಕತೆಯನ್ನು ಉತ್ತೇಜಿಸಲು ನಮಗೆ ಸಹಾಯವಾಗುತ್ತವೆ.”
I pay my tributes to HH Pramukh Swami Maharaj Ji on his Jayanti. I consider myself blessed that I got the opportunity to interact with him on multiple occasions and also got a lot of affection from him. He is globally admired for his pioneering service to society. https://t.co/BvaO4pSr90
— Narendra Modi (@narendramodi) December 1, 2022