ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಭಾಷಣ ಮಾಡಿ, ತಮ್ಮ 140 ಕೋಟಿ 'ಪರಿವಾರಜನ'ರಿಗೆ (ಕುಟುಂಬ ಸದಸ್ಯರು) ಶುಭ ಕೋರಿದರು ಮತ್ತು ದೇಶದ ಮೇಲಿನ ನಂಬಿಕೆ ಸಾರ್ವಕಾಲಿಕ ಅತ್ಯುನ್ನತ ಮಟ್ಟದಲ್ಲಿದೆ ಎಂದರು.
— PMO India (@PMOIndia) August 15, 2023
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಮಹಾನ್ ವ್ಯಕ್ತಿಗೆ ಶ್ರೀ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದರು. ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ನಡೆದ ಅಸಹಕಾರ ಚಳವಳಿ ಮತ್ತು ಸತ್ಯಾಗ್ರಹ ಚಳವಳಿ ಮತ್ತು ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಮತ್ತು ಅಸಂಖ್ಯಾತ ಧೈರ್ಯಶಾಲಿಗಳ ತ್ಯಾಗವನ್ನು ಸ್ಮರಿಸಿದ ಅವರು, ಆ ಪೀಳಿಗೆಯ ಬಹುತೇಕ ಎಲ್ಲರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು ಎಂದರು.
ಈ ಮಹತ್ವದ ವರ್ಷದಲ್ಲಿ ನಡೆಯುತ್ತಿರುವ ಪ್ರಮುಖ ವಾರ್ಷಿಕೋತ್ಸವಗಳನ್ನು ಅವರು ಒತ್ತಿ ಹೇಳಿದರು. ಇಂದು ಮಹಾನ್ ಕ್ರಾಂತಿಕಾರಿ ಮತ್ತು ಆಧ್ಯಾತ್ಮಿಕ ದಿಗ್ಗಜ ಶ್ರೀ ಅರಬಿಂದೋ ಅವರ 150 ನೇ ಜಯಂತಿ ವರ್ಷದ ಮುಕ್ತಾಯವನ್ನುಸೂಚಿಸುತ್ತದೆ. ಸ್ವಾಮಿ ದಯಾನಂದರ ಜಯಂತಿಯ 150 ನೇ ವರ್ಷ, ರಾಣಿ ದುರ್ಗಾವತಿ ಅವರ 500 ನೇ ಜನ್ಮ ದಿನಾಚರಣೆಯನ್ನು ಬಹಳ ಉತ್ಸಾಹದಿಂದ ಆಚರಿಸಲಾಗುವುದು ಎಂದು ಅವರು ಉಲ್ಲೇಖಿಸಿದರು. ಭಕ್ತಿ ಯೋಗ ಸಂತ ಮೀರಾ ಬಾಯಿ ಅವರ 525ನೇ ವರ್ಷಾಚರಣೆಯನ್ನೂ ಅವರು ಉಲ್ಲೇಖಿಸಿದರು. ಮುಂದಿನ ಗಣರಾಜ್ಯೋತ್ಸವವೂ 75ನೇ ಗಣರಾಜ್ಯೋತ್ಸವವಾಗಲಿದೆ. "ಅನೇಕ ವಿಧಗಳಲ್ಲಿ, ಅನೇಕ ಅವಕಾಶಗಳು, ಅನೇಕ ಸಾಧ್ಯತೆಗಳು, ಪ್ರತಿ ಕ್ಷಣ ಹೊಸ ಸ್ಫೂರ್ತಿ, ಕ್ಷಣದಿಂದ ಕ್ಷಣಕ್ಕೆ ಹೊಸ ಪ್ರಜ್ಞೆ, ಪ್ರತಿ ಕ್ಷಣದ ಕನಸುಗಳು, ಕ್ಷಣದಿಂದ ಕ್ಷಣದ ಸಂಕಲ್ಪ, ಬಹುಶಃ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ಇದಕ್ಕಿಂತ ದೊಡ್ಡ ಅವಕಾಶವಿಲ್ಲ" ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
— PMO India (@PMOIndia) August 15, 2023