ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಶ್ರೀ ನರೇಂದ್ರ ಮೋದಿ ಅವರು ಡಾ. ಕಲಾಂ ಅವರ ಸಭ್ಯ ಮನೋಭಾವ ಮತ್ತು ವೈಜ್ಞಾನಿಕ ಪ್ರತಿಭೆಯನ್ನು ಸ್ಮರಿಸಿದರು. ಡಾ. ಕಲಾಂ ಅವರು ದೇಶಕ್ಕೆ ನೀಡಿದ ಸಾಟಿಯಿಲ್ಲದ ಕೊಡುಗೆಯನ್ನು ಎಂದೆಂದಿಗೂ ಸ್ಮರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶ್ರೀ ನರೇಂದ್ರ ಮೋದಿ ಅವರು ಎಕ್ಸ್ ಖಾತೆಯಲ್ಲಿ ಈ ಸಂಬಂಧ ಹಂಚಿಕೊಂಡಿದ್ದಾರೆ:
"ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮ ದಿನಾಚರಣೆಯಂದು ನಾನು ಅವರಿಗೆ ನಮಿಸುತ್ತೇನೆ. ರಾಷ್ಟ್ರ ನಿರ್ಮಾಣಕ್ಕೆ ಅವರ ಸಾಟಿಯಿಲ್ಲದ ಕೊಡುಗೆಯನ್ನು ಸದಾ ಪೂಜ್ಯಭಾವದಿಂದ ನೆನಪಿಸಿಕೊಳ್ಳಲಾಗುತ್ತದೆ," ಎಂದಿದ್ದಾರೆ.
अपने विनम्र व्यवहार और विशिष्ट वैज्ञानिक प्रतिभा को लेकर जन-जन के चहेते रहे पूर्व राष्ट्रपति डॉ. एपीजे अब्दुल कलाम जी को उनकी जयंती पर कोटि-कोटि नमन। राष्ट्र निर्माण में उनके अतुलनीय योगदान को सदैव श्रद्धापूर्वक स्मरण किया जाएगा।
— Narendra Modi (@narendramodi) October 15, 2023