ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ದಿನವಾದ ಇಂದು ಶಿವಾಜಿ ಮಹಾರಾಜ್ ಅವರಿಗೆ ಗೌರವ ಸಲ್ಲಿಸಿದರು.
“ಭಾರತ ಮಾತೆಯ ಶ್ರೇಷ್ಟ ಪುತ್ರ ಛತ್ರಪತಿ ಶಿವಾಜಿ ಮಹಾರಾಜ್, ಧೈರ್ಯ, ಶೌರ್ಯ, ಅನುಕಂಪ ಮತ್ತು ಉತ್ತಮ ಆಡಳಿತಗಾರರಾಗಿದ್ದ ಅವರಿಗೆ ನಮಿಸುತ್ತೇನೆ. ಅವರ ಜೀವನ ಲಕ್ಷಾಂತರ ಜನರಿಗೆ ಸ್ಪೂರ್ತಿ” ಎಂದು ಪ್ರಧಾನ ಮಂತ್ರಿ ಅವರು ಹೇಳಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರು ಶೌರ್ಯವಂತ ಯೋಧರಾಗಿ ಮತ್ತು ಅತ್ಯುತ್ತಮ ಆಡಳಿತಗಾರರಾಗಿ ತಮ್ಮದೇ ಛಾಪನ್ನು ಮೂಡಿಸಿದವರು. ಬಲಿಷ್ಟ ನೌಕಾದಳವನ್ನು ಕಟ್ಟುವುದರಿಂದ ಹಿಡಿದು ಹಲವಾರು ಜನಪರ ನೀತಿಗಳನ್ನು ಅನುಷ್ಟಾನಿಸಿದ ಅವರು ಎಲ್ಲಾ ರಂಗಗಳಲ್ಲೂ ಅತ್ಯುತ್ತಮ ಸಾಧನೆ ಮಾಡಿದ್ದರು. ಅನ್ಯಾಯ ಮತ್ತು ದೌರ್ಜನ್ಯದ ವಿರುದ್ದ ಹೋರಾಡಿದ ಅವರನ್ನು ಸದಾ ಸ್ಮರಿಸಲಾಗುತ್ತದೆ” ಎಂದು ಪ್ರಧಾನ ಮಂತ್ರಿ ಹೇಳಿದ್ದಾರೆ.
Chhatrapati Shivaji Maharaj made a mark as a valorous warrior and an outstanding administrator. From building a strong navy to ushering several pro-people policies, he was outstanding in all spheres. He will always be remembered for his opposition to injustice and intimidation.
— Narendra Modi (@narendramodi) February 19, 2020
महान छत्रपती शिवाजी महाराज यांच्या जयंती दिनी त्यांना नमन!
— Narendra Modi (@narendramodi) February 19, 2020
Bowing to one of the greatest sons of Mother India, the embodiment of courage, compassion and good governance, the exceptional Chhatrapati Shivaji Maharaj on his Jayanti. His life continues to motivate millions. pic.twitter.com/zrnpT5D5oI