ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ ರತ್ನ ನಾನಾಜಿ ದೇಶ್ ಮುಖ್ ಅವರ ಜಯಂತಿ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದರು. ದೇಶ್ ಮುಖ್ ಅವರು ಗ್ರಾಮಗಳು ಮತ್ತು ದೇಶದ ಬುಡಕಟ್ಟುವಾಸಿಗಳ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡಿಪಾಗಿದ್ದರು ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.  ಅವರ ತ್ಯಾಗ ಮತ್ತು ಸೇವೆಯ ಮನೋಭಾವವು ಪ್ರತಿಯೊಂದು  ಪೀಳಿಗೆಗೆ ಸ್ಫೂರ್ತಿಯ ಸೆಲೆಯಾಗಿ ಉಳಿಯುತ್ತದೆ ಎಂದು ಶ್ರೀ ನರೇಂದ್ರ ಮೋದಿ ತಿಳಿಸಿದ್ದಾರೆ.

ಪ್ರಧಾನಿ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ನಲ್ಲಿ ಹೀಗೆ ಹೇಳಿದ್ದಾರೆ.

“भारत रत्न नानाजी देशमुख को उनकी जन्म-जयंती पर मेरी आदरपूर्ण श्रद्धांजलि। उन्होंने देश के गांवों और जनजातीय क्षेत्रों के विकास के लिए अपना जीवन समर्पित कर दिया। उनका त्याग और सेवा भाव हर पीढ़ी के लिए प्रेरणास्रोत बना रहेगा।”