ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಬುಡಕಟ್ಟು ನಾಯಕರಾದ ಶ್ರೀ ಕಾರ್ತಿಕ್ ಒರಾನ್ ಅವರ ಜನ್ಮ ಶತಮಾನೋತ್ಸವದಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಬುಡಕಟ್ಟು ಸಮುದಾಯದ ಹಕ್ಕುಗಳು ಮತ್ತು ಬುಡಕಟ್ಟು ಜನಾಂಗದ ಆತ್ಮಗೌರವಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಮಹಾನ್ ನಾಯಕ ಮತ್ತು ಬುಡಕಟ್ಟು ಸಂಸ್ಕೃತಿ ಹಾಗೂ ಅಸ್ಮಿತೆಯನ್ನು ರಕ್ಷಿಸಲು ಬುಡಕಟ್ಟು ಸಮಾಜದ ಧ್ವನಿಯಾಗಿದ್ದರು ಎಂದು ಶ್ರೀ ಮೋದಿಯವರು ಶ್ರೀ ಕಾರ್ತಿಕ್ ಒರಾನ್ ಅವರನ್ನು ಶ್ಲಾಘಿಸಿದ್ದಾರೆ.
Xನ ಪೋಸ್ಟ್ ನಲ್ಲಿ ಶ್ರೀ ಮೋದಿಯವರು:
"ಬುಡಕಟ್ಟು ಸಮುದಾಯದ ಹಕ್ಕುಗಳು ಮತ್ತು ಸ್ವಾಭಿಮಾನಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ದೇಶದ ಮಹಾನ್ ನಾಯಕ ಕಾರ್ತಿಕ್ ಒರಾನ್ ಜಿಯವರಿಗೆ ಅವರ ಜನ್ಮ ಶತಮಾನೋತ್ಸವದಂದು ನನ್ನ ಗೌರವಪೂರ್ವಕ ನಮನಗಳು. ಅವರು ಬುಡಕಟ್ಟು ಸಮಾಜದ ಬಹಿರಂಗ ಧ್ವನಿಯಾಗಿದ್ದರು. ಬುಡಕಟ್ಟು ಸಂಸ್ಕೃತಿ ಮತ್ತು ಅಸ್ಮಿತೆಯನ್ನು ರಕ್ಷಿಸಲು ನಿರಂತರವಾಗಿ ಅವರು ಹೋರಾಡಿದರು. ದೀನದಲಿತರ ಕಲ್ಯಾಣಕ್ಕಾಗಿ ಅವರ ಸಾಟಿಯಿಲ್ಲದ ಈ ನಿಸ್ವಾರ್ಥ ಮನೋಭಾವವು ಸದಾ ದೇಶವಾಸಿಗಳಿಗೆ ಸ್ಫೂರ್ತಿ ನೀಡುತ್ತದೆ" ಎಂದು ಬರೆದಿದ್ದಾರೆ.
आदिवासी समुदाय के अधिकार और आत्मसम्मान के लिए जीवनपर्यंत समर्पित रहे देश के महान नेता कार्तिक उरांव जी को उनकी जन्म-शताब्दी पर आदरपूर्ण श्रद्धांजलि। वे जनजातीय समाज के एक मुखर प्रवक्ता थे, जो आदिवासी संस्कृति और अस्मिता की रक्षा के लिए निरंतर संघर्षरत रहे। वंचितों के कल्याण के…
— Narendra Modi (@narendramodi) October 29, 2024