ಸ್ವಾತಂತ್ರ್ಯ ಆಂದೋಲನದ ಎಲ್ಲಾ ಚಳವಳಿಗಳು, ದಂಗೆ, ಹೋರಾಟ ಮತ್ತು ಹೋರಾಟಗಾರರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದ ಯಶೋಗಾಥೆಯಲ್ಲಿ ಸರಿಯಾಗಿ ಗುರುತಿಸಲಾಗದ ಚಳವಳಿ, ಹೋರಾಟಗಳು ಮತ್ತು ವ್ಯಕ್ತಿತ್ವಗಳಿಗೆ ಅವರು ವಿಶೇಷ ಗೌರವ ಸಲ್ಲಿಸಿದರು. ಅಹಮದಾಬಾದ್ ನ ಸಾಬರಮತಿ ಆಶ್ರಮದಲ್ಲಿಂದು “ ಸ್ವಾತಂತ್ರ್ಯದ ಅಮೃತ ಮಹೋತ್ಸವ “ಭಾರತ@75” ಉದ್ಘಾಟಿಸಿ ಅವರು ಮಾತನಾಡಿದರು.
ಕಡಿಮೆ ಪರಿಚಿತ ಚಳವಳಿಗಳು ಮತ್ತು ಹೋರಾಟದ ಕೊಡುಗೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಅವರು, ಪ್ರತಿಯೊಂದು ಸಂಘರ್ಷ ಮತ್ತು ಹೋರಾಟಗಳು ಸುಳ್ಳಿನ ಶಕ್ತಿಗಳ ವಿರುದ್ಧ ಭಾರತದ ಬಲವಾದ ಸತ್ಯದ ಘೋಷಣೆಯಾಗಿದೆ. ಇದು ಭಾರತದ ಸ್ವಾತಂತ್ರ್ಯ ಮನೋಧರ್ಮಕ್ಕೆ ಸಾಕ್ಷಿಯಾಗಿದೆ. ಈ ಹೋರಾಟಗಳು ರಾಮ, ಮಹಾಭಾತದ ಕುರುಕ್ಷೇತ್ರ, ಹಲ್ದಿಘಾಟಿ ಮತ್ತು ಶಿವಾಜಿಯ ವೀರ ಘರ್ಜನೆಯ ದಿನಗಳಿಂದಲೂ ಸ್ಪಷ್ಟವಾದ ಅದೇ ಪ್ರಜ್ಞೆ ಮತ್ತು ಶೌರ್ಯವನ್ನು ಪ್ರತಿನಿಧಿಸುತ್ತದೆ ಎಂದರು.
ಪ್ರಧಾನಮಂತ್ರಿ ಅವರು, ಕೋಲ್, ಖಾಸಿ, ಸಂತಲ್, ನಾಗ, ಭಿಲ್, ಮುಂಡ, ಸನ್ಯಾಸಿ, ರಾಮೋಶಿ, ಕಿತ್ತೂರು ಆಂದೋಲನ, ಟ್ರವಂಕೋರ್ ಚಳವಳಿ, ಬರ್ದೋಳಿ ಸತ್ಯಾಗ್ರಹ, ಚಂಪಾರಣ್ ಸತ್ಯಾಗ್ರಹ, ಸಂಬಲ್ಪುರ್, ಚುವರ್, ಬುಂಡೇಲ್ ಹಾಗು ಕುಕ ದಂಗೆಗಳು ಮತ್ತು ಚಳವಳಿಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.
ಇಂತಹ ಅನೇಕ ಹೋರಾಟಗಳು ದೇಶದ ಪ್ರತಿಯೊಂದು ಪ್ರದೇಶ ಮತ್ತು ಸಮಯದಲ್ಲೂ ಸ್ವಾತಂತ್ರ್ಯದ ಜ್ವಾಲೆಯನ್ನು ಬೆಳಗಿಸುತ್ತಿವೆ. ಸಿಖ್ ಗುರು ಅವರ ಸಂಪ್ರದಾಯ ದೇಶದಲ್ಲಿ ಸಂಸ್ಕೃತಿ ಮತ್ತು ಸಂಪ್ರದಾಯಗಳ ರಕ್ಷಣೆಯಲ್ಲಿ ಶಕ್ತಿಯುತವಾಗಿ ಚೈತನ್ಯಗೊಳಿಸಿತು ಎಂದು ಹೇಳಿದರು.
ಸ್ವಾತಂತ್ರ್ಯದ ಜ್ವಾಲೆಯನ್ನು ನಮ್ಮ ಸಂತರು, ಮಹಾಂತರು ಮತ್ತು ಆಚಾರ್ಯರು ದೇಶದ ಪ್ರತಿಯೊಂದು ಭಾಗದಲ್ಲೂ ಪಟ್ಟುಬಿಡದೇ ಪ್ರಕಾಶಮಾನವಾಗಿ ಪ್ರಜ್ವಲಿಸುವಂತೆ ಮಾಡಿದ್ದಾರೆ ಎಂಬುದನ್ನು ನಾವು ಯಾವಾಗಲೂ ನೆನಪಿನಲ್ಲಿಡಬೇಕು. ಇದು ರಾಷ್ಟ್ರವ್ಯಾಪಿ ಸ್ವಾತಂತ್ರ್ಯ ಹೋರಾಟದ ಅಡಿಪಾಯವನ್ನು ಸೃಷ್ಟಿಸಿತು.
ಪೂರ್ವ ಭಾಗದಲ್ಲಿ ಚೈತನ್ಯ ಮಹಾಪ್ರಭು ಮತ್ತು ಶ‍್ರೀಮಂತ ಶಂಕರ ದೇವ್ ರಂತಹ ಸಂತರು ಸಮಾಜಕ್ಕೆ ಸೂಕ್ತ ನಿರ್ದೇಶನ ನೀಡಿದರು ಮತ್ತು ತಮ್ಮ ಗುರಿಯೆಡೆಗೆ ಕೇಂದ್ರೀಕರಿಸುವಂತೆ ಮಾಡಿದರು. ಪೂರ್ವ ಭಾಗದಲ್ಲಿ ಮೀರಾಭಾಯಿ. ಏಕ್ ನಾಥ್, ತುಕಾರಾಂ, ರಾಮದಾಸ್ ಮತ್ತು ಸರ್ಸಿ ಮೆಹ್ತಾ, ಉತ್ತರದಲ್ಲಿ ಸಂತರಾದ ರಮಾನಂದ್, ಕಬೀರ್ ದಾಸ್, ಗೋಸ್ವಾಮಿ ತುಳಸಿದಾಸ್, ಸೂರ್ದಾಸ್, ಗುರು ನಾನಕ್ ದೇವ್, ಸಂತ ರೈದಾಸ್, ದಕ್ಷಿಣದಲ್ಲಿ ಮಧ್ವಾಚಾರ್ಯರು, ನಿಂಬರ್ಕಚಾರ್ಯ, ವಲ್ಲಭಚಾರ್ಯ ಮತ್ತು ರಾಮಾನುಜಚಾರ್ಯ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.
ಭಕ್ತಿ ಯುಗದಲ್ಲಿ ಮಲಿಕ್ ಮೊಹಮ್ಮದ್ ಜಯಸಿ, ರಾಸ್ಕನ್, ಸೂರ್ದಾಸ್, ಕೇಶವದಾಸ್ ಮತ್ತು ವಿದ್ಯಾಪತಿಯಂತಹ ವ್ಯಕ್ತಿಗಳು ಸಮಾಜದ ದೋಷಗಳನ್ನು ಸುಧಾರಿಸಲು ಪ್ರೇರೇಪಿಸಿದರು. ಈ ವ್ಯಕ್ತಿಗಳು ಪ್ಯಾನ್ ಇಂಡಿಯಾ ಸ್ವರೂಪಕ್ಕೆ ಕಾರಣೀಕರ್ತರಾಗಿದ್ದಾರೆ. ಈ ನಾಯಕರು ಮತ್ತು ನಾಯಕಿಯರ ಜೀವನ ಚರಿತ್ರೆಯನ್ನು ಜನರ ಬಳಿಗೆ ಕೊಂಡೊಯ್ಯುವ ಅಗತ್ಯವನ್ನು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಈ ಸ್ಫೂರ್ತಿದಾಯಕ ಕಥೆಗಳು ಹೊಸ ಪೀಳಿಗೆಗೆ ಏಕತೆ ಮತ್ತು ಗುರಿಗಳನ್ನು ಸಾಧಿಸುವ ಇಚ್ಛಾಶಕ್ತಿಯ ಬಗ್ಗೆ ಅಮೂಲ್ಯವಾದ ಪಾಠಗಳನ್ನು ಕಲಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.