ಪೋಲೆಂಡ್ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾರ್ಸಾದಲ್ಲಿರುವ ಡೋಬ್ರಿ ಮಹಾರಾಜ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಿದರು.
ವಾರ್ಸಾದ ಗುಡ್ ಮಹಾರಾಜರ ಚೌಕದಲ್ಲಿರುವ ಈ ಸ್ಮಾರಕವು, [ಆಧುನಿಕ ಗುಜರಾತ್‌ನ ಜಾಮ್‌ನಗರದ] ನವನಗರದ ದಿಗ್ವಿಜಯಸಿಂಹ ರಂಜಿತ್ ಸಿಂಹ ಜಡೇಜಾ ಅವರ ಬಗ್ಗೆ ಪೋಲೆಂಡ್ ಸರ್ಕಾರ ಮತ್ತು ಅಲ್ಲಿನ ಜನರು ಹೊಂದಿರುವ ಅಪಾರ ಗೌರವ ಮತ್ತು ಕೃತಜ್ಞತೆಯನ್ನು ಸಾರುವ ಸ್ಮರಣಾರ್ಥವಾಗಿದೆ.
ವಿಶ್ವದ ಎರಡನೆಯ ಮಹಾಯುದ್ಧದ ಸಮಯದಲ್ಲಿ, ಜಾಮ್ ಸಾಹೇಬ್ ಅವರು ಸಾವಿರಾರು ಅನಾಥ ಮಕ್ಕಳಿಗೆ ಆಶ್ರಯ ನೀಡಿದ್ದರು. ಇಂದು ಪೋಲೆಂಡ್‌ನಲ್ಲಿ ಡೋಬ್ರಿ ಅಂದರೆ ಉತ್ತಮ ಮಹಾರಾಜ ಎಂದು ಅವರನ್ನು ಜನರು ನೆನಪಿಸಿಕೊಳ್ಳುತ್ತಾರೆ. ಅವರ ಉದಾರತೆಯ ಆಳವಾದ ಪ್ರಭಾವವು ಪೋಲೆಂಡ್ ಜನಮಾನಸದಲ್ಲಿ ಉಳಿದಿದೆ. ಸ್ಮಾರಕದ ಬಳಿ, ಪ್ರಧಾನಿ ಮೋದಿಯವರು ಜಾಮ್ ಸಾಹೇಬ್ ಅವರಿಂದ ಆಶ್ರಯ ಪಡೆದ ಪೋಲೆಂಡ್ ಜನರ ವಂಶಸ್ಥರನ್ನು ಭೇಟಿ ಮಾಡಿದರು.
ಸ್ಮಾರಕಕ್ಕೆ ಪ್ರಧಾನ ಮಂತ್ರಿಯವರ ಭೇಟಿಯು ಭಾರತ ಮತ್ತು ಪೋಲೆಂಡ್ ನಡುವಿನ ವಿಶೇಷ ಐತಿಹಾಸಿಕ ಸಂಬಂಧವನ್ನು ಎತ್ತಿ ತೋರಿಸುತ್ತದೆ, ಇದು ಉಭಯ ದೇಶಗಳ ಜನರಿಂದ ಪಾಲಿಸಿ ಪೋಷಿಸಲ್ಪಟ್ಟಿದೆ.