Launches Acharya Chanakya Kaushalya Vikas Scheme and Punyashlok Ahilyabai Holkar Women Start-Up Scheme
Lays foundation stone of PM MITRA Park in Amravati
Releases certificates and loans to PM Vishwakarma beneficiaries
Unveils commemorative stamp marking one year of progress under PM Vishwakarma
“PM Vishwakarma has positively impacted countless artisans, preserving their skills and fostering economic growth”
“With Vishwakarma Yojna, we have resolved for prosperity and a better tomorrow through labour and skill development”
“Vishwakarma Yojana is a roadmap to utilize thousands of years old skills of India for a developed India”
“Basic spirit of Vishwakarma Yojna is ‘Samman Samarthya, Samridhi’”
“Today's India is working to take its textile industry to the top in the global market”
“Government is setting up 7 PM Mitra Parks across the country. Our vision is Farm to Fibre, Fiber to Fabric, Fabric to Fashion and Fashion to Foreign”

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ವಾರ್ಧಾದಲ್ಲಿ ರಾಷ್ಟ್ರೀಯ ಪ್ರಧಾನಮಂತ್ರಿ ವಿಶ್ವಕರ್ಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ‘ಆಚಾರ್ಯ ಚಾಣಕ್ಯ ಕೌಶಲ್ಯ ಅಭಿವೃದ್ಧಿ’ಯೋಜನೆ ಮತ್ತು ‘ಪುಣ್ಯಶ್ಲೋಕ ಅಹಲ್ಯಾದೇವಿ ಹೋಳ್ಕರ್ ಮಹಿಳಾ ಸ್ಟಾರ್ಟಪ್ ಯೋಜನೆʼಗೆ ಚಾಲನೆ ನೀಡಿದರು. ಪ್ರಧಾನಮಂತ್ರಿ ವಿಶ್ವಕರ್ಮ ಫಲಾನುಭವಿಗಳಿಗೆ ಪ್ರಮಾಣಪತ್ರಗಳು ಮತ್ತು ಸಾಲಗಳನ್ನು ಬಿಡುಗಡೆ ಮಾಡಿದರು ಮತ್ತು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಒಂದು ವರ್ಷದ ಪ್ರಗತಿಯನ್ನು ಗುರುತಿಸುವ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು. ಮಹಾರಾಷ್ಟ್ರದ ಅಮರಾವತಿಯಲ್ಲಿ ಪ್ರಧಾನಮಂತ್ರಿ ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ರೀಜನ್‌ ಅಂಡ್‌ ಅಪಾರಲ್ (ಪಿಎಂ ಮಿತ್ರಾ) ಪಾರ್ಕ್‌ ಗೆ ಶ್ರೀ ಮೋದಿಯವರು ಶಂಕುಸ್ಥಾಪನೆ ಮಾಡಿದರು. ಈ ಸಂದರ್ಭದಲ್ಲಿ ಆಯೋಜಿಸಲಾದ ವಸ್ತುಪ್ರದರ್ಶನವನ್ನು ಪ್ರಧಾನಿಯವರು ವೀಕ್ಷಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಎರಡು ದಿನಗಳ ಹಿಂದೆ ನಡೆದ ವಿಶ್ವಕರ್ಮ ಪೂಜೆಯ ಆಚರಣೆಯನ್ನು ಸ್ಮರಿಸಿದರು ಮತ್ತು ಇಂದು ವಾರ್ಧಾದಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಒಂದು ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಉತ್ಸವವು ನಡೆಯುತ್ತಿದೆ ಎಂದು ಹೇಳಿದರು ಮಹಾತ್ಮ ಗಾಂಧೀಜಿಯವರು 1932ರಲ್ಲಿ ಇದೇ ದಿನದಂದು ಅಸ್ಪೃಶ್ಯತೆ ವಿರುದ್ಧ ಅಭಿಯಾನ ಆರಂಭಿಸಿದ್ದರಿಂದ ಇಂದು ವಿಶೇಷ ದಿನವಾಗಿದೆ ಎಂದರು. ಶ್ರೀ ವಿನೋಬಾ ಭಾವೆ ಅವರ ಆಧ್ಯಾತ್ಮಿಕ ಸ್ಥಳ ಮತ್ತು ಮಹಾತ್ಮ ಗಾಂಧೀಜಿಯವರ ಕರ್ಮಭೂಮಿಯಾದ ವಾರ್ಧಾದಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಒಂದು ವರ್ಷವನ್ನು ಇಂದು ಆಚರಿಸುತ್ತಿದ್ದು, ಈ ಸಂದರ್ಭವು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪಕ್ಕೆ ಸಾಧನೆ ಮತ್ತು ಸ್ಫೂರ್ತಿಯ ಸಂಗಮವಾಗಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಮೂಲಕ ಕೌಶಲ್ಯಾಭಿವೃದ್ಧಿ ಮತ್ತು ‘ಶ್ರಮದಿಂದ ಅಭ್ಯುದಯ’ದ ಮೂಲಕ ಉತ್ತಮ ಭವಿಷ್ಯವನ್ನು ಸೃಷ್ಟಿಸಲು ಸರಕಾರ ಸಂಕಲ್ಪ ಮಾಡಿದ್ದು, ಮಹಾತ್ಮ ಗಾಂಧೀಜಿಯವರ ಆದರ್ಶಗಳು ಇದನ್ನು ನಿಜವಾಗಿಸಲು ಮಾಧ್ಯಮವಾಗಲಿದವೆ ಎಂದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಸಂಬಂಧಿಸಿದ ಪ್ರತಿಯೊಬ್ಬರನ್ನೂ ಅಭಿನಂದಿಸಿದರು.

 

ಇಂದು ಪಿಎಂ ಮಿತ್ರಾ ಪಾರ್ಕ್‌ ಗೆ ಶಂಕುಸ್ಥಾಪನೆ ಮಾಡಲಾಗಿದೆ ಎಂದು ಪ್ರಧಾನಿ ಹೇಳಿದರು. ಇಂದಿನ ಭಾರತವು ತನ್ನ ಜವಳಿ ಉದ್ಯಮವನ್ನು ವಿಶ್ವ ಮಾರುಕಟ್ಟೆಯ ಉತ್ತುಂಗಕ್ಕೆ ಕೊಂಡೊಯ್ಯಲು ಕೆಲಸ ಮಾಡುತ್ತಿದೆ ಎಂದು ಅವರು ಒತ್ತಿ ಹೇಳಿದರು. ಭಾರತದ ಜವಳಿ ಉದ್ಯಮಗಳ ಶತಮಾನಗಳಷ್ಟು ಹಳೆಯ ಖ್ಯಾತಿ ಮತ್ತು ಗುರುತನ್ನು ಮರುಸ್ಥಾಪಿಸುವ ಗುರಿಯನ್ನು ಭಾರತ ಹೊಂದಿದೆ ಎಂದು ಅವರು ಹೇಳಿದರು. ಅಮರಾವತಿಯಲ್ಲಿರುವ ಪಿಎಂ ಮಿತ್ರಾ ಪಾರ್ಕ್ ಈ ದಿಸೆಯಲ್ಲಿ ಮತ್ತೊಂದು ದೊಡ್ಡ ಹೆಜ್ಜೆಯಾಗಿದೆ ಎಂದು ಶ್ರೀ ಮೋದಿ ಹೇಳಿದರು. ಈ ಸಾಧನೆಗಾಗಿ ಅಮರಾವತಿ ಜನತೆಗೆ ಅಭಿನಂದನೆ ಸಲ್ಲಿಸಿದರು.

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಮೊದಲ ವರ್ಷದ ವಾರ್ಷಿಕೋತ್ಸವಕ್ಕೆ ಮಹಾರಾಷ್ಟ್ರದ ವಾರ್ಧಾವನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ಅವರು ಎತ್ತಿ ತೋರಿಸಿದರು, ಏಕೆಂದರೆ ಇದು ಮತ್ತೊಂದು ಸರ್ಕಾರಿ ಕಾರ್ಯಕ್ರಮವಲ್ಲ, ಬದಲಿಗೆ ಇದು ಭಾರತವನ್ನು ಒಂದು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮುನ್ನಡೆಸುವ ಮಾರ್ಗಸೂಚಿಯಾಗಿ ಹಳೆಯ ಸಾಂಪ್ರದಾಯಿಕ ಕೌಶಲ್ಯಗಳನ್ನು ಬಳಸಿಕೊಳ್ಳುವ ಯೋಜನೆಯಾಗಿದೆ. ನಮ್ಮ ಸನಾತನ ಸಾಂಪ್ರದಾಯಿಕ ಕೌಶಲ್ಯಗಳು ಭಾರತದ ಏಳಿಗೆಯ ಅನೇಕ ಅದ್ಭುತ ಅಧ್ಯಾಯಗಳಿಗೆ ಆಧಾರವಾಗಿವೆ ಎಂದು ಹೇಳಿದ ಅವರು, ನಮ್ಮ ಕಲೆ, ಎಂಜಿನಿಯರಿಂಗ್, ವಿಜ್ಞಾನ ಮತ್ತು ಲೋಹಶಾಸ್ತ್ರಕ್ಕೆ ಇಡೀ ಜಗತ್ತಿನಲ್ಲಿ ಸರಿಸಾಟಿಯಿಲ್ಲ ಎಂದು ಹೇಳಿದರು. "ನಾವು ವಿಶ್ವದ ಅತಿ ದೊಡ್ಡ ಜವಳಿ ತಯಾರಕರಾಗಿದ್ದೇವೆ" ಎಂದು ಶ್ರೀ ಮೋದಿಯವರು ಎತ್ತಿ ತೋರಿಸಿದರು. ಕುಂಬಾರಿಕೆ ಮತ್ತು ಆ ಕಾಲದಲ್ಲಿ ವಿನ್ಯಾಸಗೊಳಿಸಿದ ಕಟ್ಟಡಗಳಿಗೆ ಯಾವುದೇ ಸರಿಸಾಟಿ ಇಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಬಡಗಿ, ಕಮ್ಮಾರ, ಅಕ್ಕಸಾಲಿಗ, ಕುಂಬಾರ, ಶಿಲ್ಪಿ, ಚಮ್ಮಾರ, ಬಡಗಿ-ಮೇಸ್ತ್ರಿ ಹೀಗೆ ಅನೇಕ ವೃತ್ತಿಪರರು ಭಾರತದ ಏಳಿಗೆಯ ಬುನಾದಿಯಾಗಿದ್ದಾರೆ ಮತ್ತು ಅವರು ಈ ಜ್ಞಾನ ಮತ್ತು ವಿಜ್ಞಾನವನ್ನು ಪ್ರತಿ ಮನೆಗೂ ಹರಡಿದರು ಎಂದು ಶ್ರೀ ಮೋದಿ ಹೇಳಿದರು. ಈ ಸ್ವದೇಶಿ ಕೌಶಲಗಳನ್ನು ನಾಶಪಡಿಸಲು ಬ್ರಿಟಿಷರು ಅನೇಕ ಸಂಚುಗಳನ್ನು ರೂಪಿಸಿದ್ದರು ಎಂದು ಶ್ರೀ ಮೋದಿ ಹೇಳಿದರು. ಗಾಂಧೀಜಿಯವರು ಗ್ರಾಮೀಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿದ್ದು ಈ ವಾರ್ಧಾ ನೆಲದಿಂದಲೇ ಎಂದರು. ಸ್ವಾತಂತ್ರ್ಯಾನಂತರ ಬಂದ ಸರಕಾರಗಳು ಈ ಕೌಶಲ್ಯಕ್ಕೆ ಸಲ್ಲಬೇಕಾದ ಗೌರವ ನೀಡದಿರುವುದು ದೇಶದ ದೌರ್ಭಾಗ್ಯ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಹಿಂದಿನ ಸರ್ಕಾರಗಳು ವಿಶ್ವಕರ್ಮ ಸಮುದಾಯವನ್ನು ನಿರಂತರವಾಗಿ ನಿರ್ಲಕ್ಷಿಸಿ ಕಸುಬು ಮತ್ತು ಕೌಶಲ್ಯವನ್ನು ಗೌರವಿಸುವುದನ್ನು ಮರೆತಿದ್ದರಿಂದ ಭಾರತವು ಪ್ರಗತಿ ಮತ್ತು ಆಧುನಿಕತೆಯ ಓಟದಲ್ಲಿ ಹಿಂದುಳಿಯಿತು ಎಂದು ಹೇಳಿದರು.

 

ಸ್ವಾತಂತ್ರ್ಯದ 70 ವರ್ಷಗಳ ನಂತರ ಸಾಂಪ್ರದಾಯಿಕ ಕೌಶಲ್ಯಗಳಿಗೆ ಹೊಸ ಶಕ್ತಿಯನ್ನು ತರಲು ಪ್ರಸ್ತುತ ಸರ್ಕಾರವು ಸಂಕಲ್ಪ ಮಾಡಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ‘ಸಮ್ಮಾನ್, ಸಾಮರ್ಥ್ಯ, ಸಮೃದ್ಧಿ’ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಚೈತನ್ಯವಾಗಿದೆ ಎಂದು ಅವರು ಹೇಳಿದರು. ಸಾಂಪ್ರದಾಯಿಕ ಕಸುಬುಗಳಿಗೆ ಗೌರವ, ಕುಶಲಕರ್ಮಿಗಳ ಸಬಲೀಕರಣ ಮತ್ತು ವಿಶ್ವಕರ್ಮರ ಏಳಿಗೆ ನಮ್ಮ ಗುರಿಯಾಗಿದೆ ಎಂದು ಪ್ರಧಾನಿ ಹೇಳಿದರು.

 

ಪಿಎಂ ವಿಶ್ವಕರ್ಮ ಯೋಜನೆಯನ್ನು ಯಶಸ್ವಿಯಾಗಲು ವಿವಿಧ ಇಲಾಖೆಗಳ ದೊಡ್ಡ ಪ್ರಮಾಣದ ಮತ್ತು ಅಭೂತಪೂರ್ವ ಸಹಯೋಗದ ಬಗ್ಗೆ ಪ್ರಧಾನಿ ಗಮನ ಸೆಳೆದರು ಮತ್ತು 700 ಕ್ಕೂ ಹೆಚ್ಚು ಜಿಲ್ಲೆಗಳು, 2.5 ಲಕ್ಷ ಗ್ರಾಮ ಪಂಚಾಯಿತಿಗಳು, 5000 ನಗರ ಸ್ಥಳೀಯ ಘಟಕಗಳು ಯೋಜನೆಗೆ ವೇಗ ನೀಡುತ್ತಿವೆ ಎಂದು ತಿಳಿಸಿದರು. ಕಳೆದ ವರ್ಷದಲ್ಲಿ, 18 ವಿಭಿನ್ನ ಸಾಂಪ್ರದಾಯಿಕ ಕೌಶಲ್ಯಗಳನ್ನು ಹೊಂದಿರುವ 20 ಲಕ್ಷಕ್ಕೂ ಹೆಚ್ಚು ಜನರು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಶ್ರೀ ಮೋದಿ ಹೇಳಿದರು. ಆಧುನಿಕ ಯಂತ್ರೋಪಕರಣಗಳು ಮತ್ತು ಡಿಜಿಟಲ್ ಉಪಕರಣಗಳ ಪರಿಚಯದೊಂದಿಗೆ 8 ಲಕ್ಷಕ್ಕೂ ಹೆಚ್ಚು ಕುಶಲಕರ್ಮಿಗಳು ಮತ್ತು ಕರಕುಶಲಿಗಳಿಗೆ ಕೌಶಲ್ಯ ತರಬೇತಿ ಮತ್ತು ಉನ್ನತೀಕರಣವನ್ನು ಒದಗಿಸಲಾಗಿದೆ. ಮಹಾರಾಷ್ಟ್ರವೊಂದರಲ್ಲೇ 60,000ಕ್ಕೂ ಹೆಚ್ಚು ಮಂದಿ ಕೌಶಲ್ಯ ತರಬೇತಿ ಪಡೆದಿದ್ದಾರೆ. 6 ಲಕ್ಷಕ್ಕೂ ಹೆಚ್ಚು ವಿಶ್ವಕರ್ಮರಿಗೆ ಉತ್ಪಾದಕತೆ ಮತ್ತು ಉತ್ಪನ್ನದ ಗುಣಮಟ್ಟವನ್ನು ಹೆಚ್ಚಿಸಲು ಆಧುನಿಕ ಉಪಕರಣಗಳನ್ನು ಒದಗಿಸಲಾಗಿದೆ, 15,000 ರೂಪಾಯಿಗಳ ಇ-ವೋಚರ್ ಮತ್ತು ಅವರ ವ್ಯವಹಾರಗಳನ್ನು ವಿಸ್ತರಿಸಲು ಖಾತರಿಯಿಲ್ಲದೆ 3 ಲಕ್ಷ ರೂಪಾಯಿವರೆಗೆ ಸಾಲವನ್ನು ನೀಡಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಒಂದು ವರ್ಷದೊಳಗೆ ವಿಶ್ವಕರ್ಮರಿಗೆ 1400 ಕೋಟಿ ರೂಪಾಯಿ ಸಾಲ ನೀಡಲಾಗಿರುವ ಬಗ್ಗೆ ಪ್ರಧಾನಿ ಸಂತಸ ವ್ಯಕ್ತಪಡಿಸಿದರು.

 

ಸಾಂಪ್ರದಾಯಿಕ ಕೌಶಲ್ಯಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಕೊಡುಗೆಗಳನ್ನು ಗಮನಿಸಿದ ಪ್ರಧಾನಿ, ಹಿಂದಿನ ಸರ್ಕಾರಗಳ ಅವಧಿಯಲ್ಲಿ ಅವರು ಎದುರಿಸುತ್ತಿದ್ದ ನಿರ್ಲಕ್ಷ್ಯದ ಬಗ್ಗೆ ವಿಷಾದಿಸಿದರು ಮತ್ತು ಪ್ರಸ್ತುತ ಸರ್ಕಾರವು ಹಿಂದುಳಿದ ವಿರೋಧಿ ಮನಸ್ಥಿತಿಯನ್ನು ಕೊನೆಗೊಳಿಸಿದೆ ಎಂದು ಹೇಳಿದರು. ಹಿಂದಿನ ವರ್ಷಗಳ ಅಂಕಿಅಂಶಗಳ ಮೇಲೆ ಬೆಳಕು ಚೆಲ್ಲಿದ ಅವರು ಕೌಶಲ್ಯಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳು ವಿಶ್ವಕರ್ಮ ಯೋಜನೆಯ ಗರಿಷ್ಠ ಪ್ರಯೋಜನವನ್ನು ಪಡೆಯುತ್ತಿವೆ ಎಂದರು. ವಿಶ್ವಕರ್ಮ ಸಮುದಾಯದ ಜನರು ಕೇವಲ ಕುಶಲಕರ್ಮಿಗಳಾಗಿ ಉಳಿಯದೆ ಉದ್ಯಮಿಗಳು ಮತ್ತು ವ್ಯವಹಾರಗಳ ಮಾಲೀಕರಾಗಬೇಕು ಎಂಬ ಆಶಯವನ್ನು ಪ್ರಧಾನಿ ವ್ಯಕ್ತಪಡಿಸಿದರು. ವಿಶ್ವಕರ್ಮರು ಮಾಡಿದ ಕೆಲಸಗಳಿಗೆ ಎಂಎಸ್‌ಎಂಇ ಸ್ಥಾನಮಾನ ನೀಡುವ ಕುರಿತು ಪ್ರಧಾನಿ ಪ್ರಸ್ತಾಪಿಸಿದರು. ವಿಶ್ವಕರ್ಮರನ್ನು ದೊಡ್ಡ ಕಂಪನಿಗಳ ಪೂರೈಕೆ ಸರಪಳಿಯ ಭಾಗವಾಗಿಸಲು ಸಾಂಪ್ರದಾಯಿಕ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿರುವ ಒಂದು ಜಿಲ್ಲೆ ಒಂದು ಉತ್ಪನ್ನ ಮತ್ತು ಏಕತಾ ಮಾಲ್‌ ನಂತಹ ಪ್ರಯತ್ನಗಳ ಕುರಿತು ಅವರು ಮಾತನಾಡಿದರು.

 

ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳು ತಮ್ಮ ವ್ಯವಹಾರವನ್ನು ವಿಸ್ತರಿಸಲು ಮಾಧ್ಯಮವಾಗಿ ಮಾರ್ಪಟ್ಟಿರುವ ಒ ಎನ್‌ ಡಿ ಸಿ ಮತ್ತು ಜಿಇಎಂ ಕುರಿತು ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಆರ್ಥಿಕ ಪ್ರಗತಿಯಲ್ಲಿ ಹಿಂದುಳಿದಿದ್ದ ಸಾಮಾಜಿಕ ವರ್ಗ ಈಗ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಒತ್ತಿ ಹೇಳಿದರು. ಸ್ಕಿಲ್ ಇಂಡಿಯಾ ಮಿಷನ್ ಇದನ್ನು ಮತ್ತಷ್ಟು ಬಲಪಡಿಸುತ್ತಿದೆ ಎಂದು ಅವರು ಹೇಳಿದರು. ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ, ಇಂದಿನ ಅಗತ್ಯಗಳಿಗೆ ಅನುಗುಣವಾಗಿ ದೇಶದ ಕೋಟಿಗಟ್ಟಲೆ ಯುವಕರು ತರಬೇತಿ ಪಡೆದಿದ್ದಾರೆ ಎಂದು ಶ್ರೀ ಮೋದಿ ಹೇಳಿದರು. ಸ್ಕಿಲ್ ಇಂಡಿಯಾದಂತಹ ಕಾರ್ಯಕ್ರಮಗಳ ಮೂಲಕ ಭಾರತದ ಕೌಶಲ್ಯಗಳನ್ನು ವಿಶ್ವದಾದ್ಯಂತ ಗುರುತಿಸಲಾಗುತ್ತಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಈ ವರ್ಷದ ಆರಂಭದಲ್ಲಿ ಫ್ರಾನ್ಸ್‌ ನಲ್ಲಿ ನಡೆದ ವಿಶ್ವ ಕೌಶಲ್ಯಗಳ ಕುರಿತು ನಡೆದ ಬೃಹತ್‌ ಕಾರ್ಯಕ್ರಮದಲ್ಲಿ ಭಾರತವು ಅನೇಕ ವಿಜೇತ ಬಹುಮಾನಗಳನ್ನು ಗೆದ್ದಿದೆ ಎಂದು ಹೆಮ್ಮೆಯಿಂದ ಹೇಳಿದರು.

 

"ಮಹಾರಾಷ್ಟ್ರದಲ್ಲಿ ಜವಳಿ ಉದ್ಯಮವು ಅಪಾರ ಕೈಗಾರಿಕಾ ಸಾಮರ್ಥ್ಯವನ್ನು ಹೊಂದಿರುವ ಕ್ಷೇತ್ರವಾಗಿದೆ" ಎಂದು ಪ್ರಧಾನಿ ಒತ್ತಿ ಹೇಳಿದರು. ವಿದರ್ಭ ಪ್ರದೇಶವು ಉತ್ತಮ ಗುಣಮಟ್ಟದ ಹತ್ತಿ ಉತ್ಪಾದನೆಯ ಪ್ರಮುಖ ಕೇಂದ್ರವಾಗಿದೆ ಎಂದು ಅವರು ಹೇಳಿದರು, ಆದರೆ ನಂತರದ ಸರ್ಕಾರಗಳು ರೈತರ ಹೆಸರಿನಲ್ಲಿ ಕ್ಷುಲ್ಲಕ ರಾಜಕೀಯ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದ್ದರಿಂದ ಹತ್ತಿ ರೈತರನ್ನು ದುಃಖಕ್ಕೆ ತಳ್ಳಿದವು ಎಂದು ಅವರು ಹೇಳಿದರು. 2014 ರಲ್ಲಿ ದೇವೇಂದ್ರ ಫಡ್ನವೀಸ್ ಸರ್ಕಾರ ರಚನೆಯಾದಾಗ, ಈ ಸಮಸ್ಯೆಯನ್ನು ಪರಿಹರಿಸಲು ವೇಗವಾಗಿ ಪ್ರಗತಿ ಸಾಧಿಸಲಾಯಿತು ಯಲ್ಲಿದೆ ಎಂದು ಶ್ರೀ ಮೋದಿ ಎತ್ತಿ ತೋರಿಸಿದರು. ಅಮರಾವತಿಯ ನಂದಗಾಂವ್ ಖಂಡೇಶ್ವರದಲ್ಲಿ ಜವಳಿ ಪಾರ್ಕ್ ಅನ್ನು ನಿರ್ಮಿಸಲಾಗಿದೆ, ಅಲ್ಲಿ ಯಾವುದೇ ಉದ್ಯಮವು ಹೂಡಿಕೆ ಮಾಡಲು ಸಿದ್ಧವಿರಲಿಲ್ಲ, ಆದರೆ, ಇಂದು ಅದು ಯಶಸ್ವಿಯಾಗಿ ಮಹಾರಾಷ್ಟ್ರದ ದೊಡ್ಡ ಕೈಗಾರಿಕಾ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದರು.

ಪಿಎಂ ಮಿತ್ರಾ ಪಾರ್ಕ್‌ ನಲ್ಲಿ ನಡೆಯುತ್ತಿರುವ ಕೆಲಸದ ವೇಗವನ್ನು ಪ್ರಸ್ತಾಪಿಸಿದ ಮೋದಿ, ಇದು  ಡಬಲ್ ಎಂಜಿನ್ ಸರ್ಕಾರದ ಇಚ್ಛಾಶಕ್ತಿಯನ್ನು ತೋರಿಸುತ್ತದೆ ಎಂದು ಹೇಳಿದರು. "ಪ್ರಧಾನಮಂತ್ರಿ ಮಿತ್ರಾ ಪಾರ್ಕ್‌ ಗಳನ್ನು ಭಾರತದಾದ್ಯಂತ ಸ್ಥಾಪಿಸಲಾಗುವುದು" ಎಂದು ಮೋದಿ ಹೇಳಿದರು. ಈ ದೃಷ್ಟಿಯಲ್ಲಿ ಫಾರ್ಮ್ ಟು ಫೈಬರ್, ಫೈಬರ್ ಟು ಫ್ಯಾಬ್ರಿಕ್, ಫ್ಯಾಬ್ರಿಕ್ ಟು ಫ್ಯಾಶನ್, ಫ್ಯಾಶನ್ ಟು ಫಾರಿನ್, ಅಂದರೆ ವಿದರ್ಭದ ಹತ್ತಿಯಿಂದ ಉತ್ತಮ ಗುಣಮಟ್ಟದ ಬಟ್ಟೆಗಳನ್ನು ತಯಾರಿಸಲಾಗುವುದು ಮತ್ತು ಫ್ಯಾಷನ್ ಪ್ರಕಾರ ಹತ್ತಿಯಿಂದ ಮಾಡಿದ ಬಟ್ಟೆಗಳನ್ನು ರಫ್ತು ಮಾಡಲಾಗುವುದು ಎಂದು ಅವರು ಹೇಳಿದರು. ವಿದೇಶಗಳಿಗೆ ರಫ್ತು ಮಾಡುವುದರಿಂದ  ರೈತರಿಗೆ ಆಗುವ ನಷ್ಟವನ್ನು ತಪ್ಪಿಸಬಹುದು ಮತ್ತು ಮೌಲ್ಯವರ್ಧನೆಯಾಗುವುದರಿಂದ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತದೆ ಎಂದರು. ಪಿಎಂ ಮಿತ್ರಾ ಪಾರ್ಕ್‌ ಒಂದರಿಂದಲೇ 8-10 ಸಾವಿರ ಕೋಟಿ ರೂಪಾಯಿಗಳ ಹೂಡಿಕೆಯ ಸಾಧ್ಯತೆಯಿದೆ ಎಂದು ತಿಳಿಸಿದ ಶ್ರೀ ಮೋದಿ, ಇದು ವಿದರ್ಭ ಮತ್ತು ಮಹಾರಾಷ್ಟ್ರದ ಯುವಕರಿಗೆ ಒಂದು ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಇತರ ಕೈಗಾರಿಕೆಗಳಿಗೆ ಉತ್ತೇಜನವನ್ನು ನೀಡುತ್ತದೆ ಎಂದು ಹೇಳಿದರು . ಆದಾಯವನ್ನು ಹೆಚ್ಚಿಸುವ ದೇಶದ ರಫ್ತಿಗೆ ಸಹಾಯ ಮಾಡುವ ಹೊಸ ಪೂರೈಕೆ ಸರಪಳಿಗಳನ್ನು ರಚಿಸಲಾಗುವುದು ಎಂದು ಅವರು ಹೇಳಿದರು. ಈ ಕೈಗಾರಿಕಾ ಪ್ರಗತಿಗೆ ಅಗತ್ಯವಾದ ಆಧುನಿಕ ಮೂಲಸೌಕರ್ಯ ಮತ್ತು ಸಂಪರ್ಕವನ್ನು ಹೊಂದಲು ಮಹಾರಾಷ್ಟ್ರ ಸಜ್ಜಾಗುತ್ತಿದೆ ಎಂದು ಮೋದಿ ಒತ್ತಿ ಹೇಳಿದರು. ಇದು ಹೊಸ ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇಗಳು, ಸಮೃದ್ಧಿ ಮಹಾಮಾರ್ಗ್ ಜೊತೆಗೆ ಜಲ ಮತ್ತು ವಾಯು ಸಂಪರ್ಕದ ವಿಸ್ತರಣೆಯನ್ನು ಒಳಗೊಂಡಿದೆ ಎಂದು ಅವರು ಹೇಳಿದರು. "ಮಹಾರಾಷ್ಟ್ರವು ಹೊಸ ಕೈಗಾರಿಕಾ ಕ್ರಾಂತಿಗೆ ಸಜ್ಜಾಗುತ್ತಿದೆ" ಎಂದು ಶ್ರೀ ಮೋದಿ ಹೇಳಿದರು.

 

ಮಹಾರಾಷ್ಟ್ರದ ಬಹು ಆಯಾಮದ ಅಭಿವೃದ್ಧಿಯಲ್ಲಿ ರಾಜ್ಯದ ರೈತರ ಪಾತ್ರವನ್ನು ಗುರುತಿಸಿದ ಅವರು, ರಾಷ್ಟ್ರದ ಸಮೃದ್ಧಿಯು ರೈತರ ಸಂತೋಷದೊಂದಿಗೆ ಸಂಬಂಧ ಹೊಂದಿದೆ ಎಂದು ಒತ್ತಿ ಹೇಳಿದರು. ರೈತರ ಸಮೃದ್ಧಿಯನ್ನು ಹೆಚ್ಚಿಸಲು ಡಬಲ್ ಇಂಜಿನ್ ಸರ್ಕಾರವು ಒಟ್ಟಾಗಿ ಕೆಲಸ ಮಾಡಲು ಬದ್ಧವಾಗಿದೆ ಎಂದು ಹೇಳಿದರು. ಪ್ರಧಾನ ಮಂತ್ರಿ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರವು ರೈತರಿಗೆ ವಾರ್ಷಿಕವಾಗಿ 6,000 ರೂಪಾಯಿಗಳನ್ನು ನೀಡುತ್ತದೆ ಮತ್ತು ಮಹಾರಾಷ್ಟ್ರ ಸರ್ಕಾರವು ಸಹ ಅದೇ ಮೊತ್ತವನ್ನು ಸೇರಿಸುವ ಮೂಲಕ ರೈತರ ಆದಾಯವು ವಾರ್ಷಿಕವಾಗಿ 12,000 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಕೇವಲ 1 ರೂಪಾಯಿಗೆ ಬೆಳೆ ವಿಮೆಯನ್ನು ಒದಗಿಸುವ ಮತ್ತು ರೈತರ ವಿದ್ಯುತ್ ಬಿಲ್‌ ಗಳನ್ನು ಮನ್ನಾ ಮಾಡುವ ಉಪಕ್ರಮದ ಕುರಿತು ಪ್ರಧಾನ ಮಂತ್ರಿ ಮಾತನಾಡಿದರು. ಈ ಪ್ರದೇಶದ ನೀರಾವರಿ ಸವಾಲುಗಳ ಮೇಲೆ ಕೇಂದ್ರೀಕರಿಸಿದ ಪ್ರಧಾನಿ ಮೋದಿ, ರಾಜ್ಯದಲ್ಲಿ ಪ್ರಸ್ತುತ ಸರ್ಕಾರದ ಹಿಂದಿನ ಅವಧಿಯಲ್ಲಿ ಪ್ರಾರಂಭಿಸಿದ ಪ್ರಯತ್ನಗಳು ನಂತರ ಬಂದ ಸರ್ಕಾರ ಅವಧಿಯಲ್ಲಿ ವಿಳಂಬವಾಗಿವೆ ಎಂದು ಹೇಳಿದರು. ಇಂದಿನ ರಾಜ್ಯ ಸರ್ಕಾರವು ಈ ಯೋಜನೆಗಳಿಗೆ ಮರುಜೀವ ನೀಡಿ ಚಾಲನೆ ನೀಡಿದೆ ಎಂದು ಪ್ರಧಾನಮಂತ್ರಿಯವರು ಮಾಹಿತಿ ನೀಡಿದರು. ನಾಗ್ಪುರ, ವಾರ್ಧಾ, ಅಮರಾವತಿ, ಯವತ್ಮಾಲ್, ಅಕೋಲಾ ಮತ್ತು ಬುಲ್ಧಾನಾ ಜಿಲ್ಲೆಗಳಲ್ಲಿ 10 ಲಕ್ಷ ಎಕರೆ ಭೂಮಿಗೆ ನೀರಾವರಿ ಒದಗಿಸುವ ಗುರಿಯನ್ನು ಹೊಂದಿರುವ 85,000 ಕೋಟಿ ರೂಪಾಯಿ ವೆಚ್ಚದ ವನ್-ಗಂಗಾ ಮತ್ತು ನಲ್-ಗಂಗಾ ನದಿ ಜೋಡಣೆ ಯೋಜನೆಯನ್ನು ಅವರು ಉಲ್ಲೇಖಿಸಿದರು.‌

ಮಹಾರಾಷ್ಟ್ರದ ರೈತರ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಹೇಳಿದರು. ಈರುಳ್ಳಿ ಮೇಲಿನ ರಫ್ತು ತೆರಿಗೆಯನ್ನು ಶೇ.40 ರಿಂದ ಶೇ.20 ಕ್ಕೆ ಇಳಿಸಿರುವುದನ್ನು ಪ್ರಸ್ತಾಪಿಸಿದ ಅವರು, ಈ ಪ್ರದೇಶದ ಈರುಳ್ಳಿ ರೈತರಿಗೆ ತಕ್ಷಣದ ಪರಿಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದರು. ಆಮದು ಮಾಡಿಕೊಳ್ಳುವ ಖಾದ್ಯ ತೈಲಗಳ ಪರಿಣಾಮದಿಂದ ದೇಶೀಯ ರೈತರನ್ನು ರಕ್ಷಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಪ್ರಸ್ತಾಪಿಸಿದ ಮೋದಿ, "ನಾವು ಖಾದ್ಯ ತೈಲಗಳ ಆಮದಿನ ಮೇಲೆ ಶೇ.20 ತೆರಿಗೆಯನ್ನು ವಿಧಿಸಿದ್ದೇವೆ ಮತ್ತು ಸಂಸ್ಕರಿಸಿದ ಸೋಯಾಬೀನ್, ಸೂರ್ಯಕಾಂತಿ ಮತ್ತು ತಾಳೆ ಎಣ್ಣೆಯ ಮೇಲೆ ಕಸ್ಟಮ್ಸ್‌ ಸುಂಕವನ್ನು ಶೇ.12.5 ರಿಂದ ಶೇ.32.5ಕ್ಕೆ ಹೆಚ್ಚಿಸಲಾಗಿದೆ. ಈ ಕ್ರಮವು ವಿಶೇಷವಾಗಿ ಮಹಾರಾಷ್ಟ್ರದಾದ್ಯಂತ ಸೋಯಾಬೀನ್ ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು. ಈ ಪ್ರಯತ್ನಗಳು ಶೀಘ್ರದಲ್ಲೇ ಕೃಷಿ ಕ್ಷೇತ್ರಕ್ಕೆ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತವೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಅವರು ಸುಳ್ಳು ಭರವಸೆಗಳಿಗೆ ಬಲಿಯಾಗದಂತೆ ಎಚ್ಚರಿಕೆ ನೀಡಿದರು ಮತ್ತು ಇಂದಿಗೂ ಸಾಲ ಮನ್ನಾಕ್ಕಾಗಿ ಹೋರಾಡುತ್ತಿರುವ ತೆಲಂಗಾಣದ ರೈತರನ್ನು ಪ್ರಸ್ತಾಪಿಸಿದರು. ಮಹಾರಾಷ್ಟ್ರದ ರೈತರು ಜಾಗರೂಕರಾಗಿರಬೇಕು ಮತ್ತು ದಾರಿತಪ್ಪಿಸುವ ಭರವಸೆಗಳಿಂದ ಎಚ್ಚರವಾಗಿರಬೇಕು ಎಂದು ಕರೆ ನೀಡಿದರು.

ಸಮಾಜದಲ್ಲಿ ಒಡಕು ಮೂಡಿಸುವ ಶಕ್ತಿಗಳು ಮತ್ತು ವಿದೇಶಿ ನೆಲದಲ್ಲಿ ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಅವಮಾನಿಸುವ ಶಕ್ತಿಗಳ ವಿರುದ್ಧ ಪ್ರಧಾನಿ ಮೋದಿ ಎಚ್ಚರಿಕೆ ನೀಡಿದರು. ಲೋಕಮಾನ್ಯ ತಿಲಕರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಣೇಶ ಉತ್ಸವವು ಭಾರತದಲ್ಲಿ ಏಕತೆಯ ಹಬ್ಬವಾಗಿ ಮಾರ್ಪಟ್ಟಿದ್ದು, ಎಲ್ಲ ಸಮಾಜ ಮತ್ತು ವರ್ಗದ ಜನರು ಒಟ್ಟಾಗಿ ಆಚರಿಸುತ್ತಿದ್ದರು ಎಂದು ಅವರು ನೆನಪಿಸಿದರು. ನಾಗರಿಕರು ಸಂಪ್ರದಾಯ ಮತ್ತು ಪ್ರಗತಿ ಮತ್ತು ಗೌರವ ಮತ್ತು ಅಭಿವೃದ್ಧಿಯ ಕಾರ್ಯಸೂಚಿಯೊಂದಿಗೆ ನಿಲ್ಲಬೇಕು ಎಂದು ಅವರು ಒತ್ತಾಯಿಸಿದರು. "ನಾವು ಒಟ್ಟಾಗಿ ಮಹಾರಾಷ್ಟ್ರದ ಅಸ್ಮಿತೆಯನ್ನು ರಕ್ಷಿಸುತ್ತೇವೆ ಮತ್ತು ಅದರ ಹೆಮ್ಮೆಯನ್ನು ಹೆಚ್ಚಿಸುತ್ತೇವೆ. ನಾವು ಮಹಾರಾಷ್ಟ್ರದ ಕನಸುಗಳನ್ನು ಈಡೇರಿಸುತ್ತೇವೆ" ಎಂದು ಹೇಳಿದ ಶ್ರೀ ಮೋದಿ ಮಾತು ಮುಗಿಸಿದರು.

 

ಈ ಸಂದರ್ಭದಲ್ಲಿ ಮಹಾರಾಷ್ಟ್ರದ ರಾಜ್ಯಪಾಲ ಶ್ರೀ ಸಿ.ಪಿ. ರಾಧಾಕೃಷ್ಣನ್, ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ, ಕೇಂದ್ರ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳ ಸಚಿವ ಶ್ರೀ ಜಿತನ್ ರಾಮ್ ಮಾಂಝಿ, ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವ ಶ್ರೀ ಜಯಂತ್ ಚೌಧರಿ ಮತ್ತು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವೀಸ್ ಮತ್ತು ಶ್ರೀ ಅಜಿತ್ ಪವಾರ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಹಿನ್ನೆಲೆ

ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಪಿ.ಎಂ.ವಿಶ್ವಕರ್ಮ ಫಲಾನುಭವಿಗಳಿಗೆ ಪ್ರಮಾಣ ಪತ್ರ ಮತ್ತು ಸಾಲವನ್ನು ಬಿಡುಗಡೆ ಮಾಡಿದರು. ಯೋಜನೆಯಡಿಯಲ್ಲಿ ಕುಶಲಕರ್ಮಿಗಳಿಗೆ ನೀಡಿದ ದೃಢವಾದ ಬೆಂಬಲಕ್ಕೆ ಸಾಂಕೇತಿಕವಾಗಿ, ಅವರು 18 ವೃತ್ತಿಗಳ 18 ಫಲಾನುಭವಿಗಳಿಗೆ ಪಿಎಂ ವಿಶ್ವಕರ್ಮ ಯೋಜನೆಯ ಸಾಲವನ್ನು ವಿತರಿಸಿದರು. ಪರಂಪರೆ ಮತ್ತು ಸಮಾಜಕ್ಕೆ ಅವರ ನಿರಂತರ ಕೊಡುಗೆಯ ಗೌರವಾರ್ಥವಾಗಿ, ಪಿಎಂ ವಿಶ್ವಕರ್ಮ ಯೋಜನೆಯ ಒಂದು ವರ್ಷದ ಪ್ರಗತಿಯನ್ನು ಗುರುತಿಸಲು ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.

ಪ್ರಧಾನಮಂತ್ರಿಯವರು ಮಹಾರಾಷ್ಟ್ರದ ಅಮರಾವತಿಯಲ್ಲಿ ಪಿಎಂ ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ರೀಜನ್ಸ್ ಅಂಡ್‌ ಅಪರೆಲ್ (ಪಿಎಂ ಮಿತ್ರಾ) ಪಾರ್ಕ್‌ ಗೆ ಶಂಕುಸ್ಥಾಪನೆ ಮಾಡಿದರು. 1000 ಎಕರೆಗಳಷ್ಟು ವಿಸ್ತಾರವಾಗಿರುವ ಈ  ಪಾರ್ಕ್‌ ಅನ್ನು ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ (MIDC) ರಾಜ್ಯ ಅನುಷ್ಠಾನ ಸಂಸ್ಥೆಯಾಗಿ ಅಭಿವೃದ್ಧಿಪಡಿಸುತ್ತಿದೆ. ಜವಳಿ ಉದ್ಯಮಕ್ಕಾಗಿ 7 ಪ್ರಧಾನಮಂತ್ರಿ ಮಿತ್ರಾ ಪಾರ್ಕ್‌ ಗಳನ್ನು ಸ್ಥಾಪಿಸಲು ಭಾರತ ಸರ್ಕಾರವು ಅನುಮೋದನೆ ನೀಡಿತ್ತು. ಪಿಎಂ ಮಿತ್ರಾ ಪಾರ್ಕ್ ಭಾರತವನ್ನು ಜವಳಿ ಉತ್ಪಾದನೆ ಮತ್ತು ರಫ್ತಿನಲ್ಲಿ ಜಾಗತಿಕ ಕೇಂದ್ರವನ್ನಾಗಿ ಮಾಡುವ ದೃಷ್ಟಿಯನ್ನು ಸಾಕಾರಗೊಳಿಸುವ ಪ್ರಮುಖ ಹೆಜ್ಜೆಯಾಗಿದೆ. ವಿದೇಶಿ ನೇರ ಹೂಡಿಕೆ (ಎಫ್‌ ಡಿ ಐ) ಸೇರಿದಂತೆ ದೊಡ್ಡ ಪ್ರಮಾಣದ ಹೂಡಿಕೆಯನ್ನು ಆಕರ್ಷಿಸುವ ಮತ್ತು ಈ ಪ್ರದೇಶದಲ್ಲಿ ನಾವೀನ್ಯತೆ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವ ವಿಶ್ವದರ್ಜೆಯ ಕೈಗಾರಿಕಾ ಮೂಲಸೌಕರ್ಯವನ್ನು ರಚಿಸಲು ಇದು ಸಹಾಯ ಮಾಡುತ್ತದೆ.

 

ಪ್ರಧಾನಮಂತ್ರಿಯವರು ಮಹಾರಾಷ್ಟ್ರ ಸರ್ಕಾರದ ‘ಆಚಾರ್ಯ ಚಾಣಕ್ಯ ಕೌಶಲ್ಯ ಅಭಿವೃದ್ಧಿ’ಯೋಜನೆಗೆ ಚಾಲನೆ ನೀಡಿದರು. 15 ರಿಂದ 45 ವಯೋಮಾನದ ಯುವಕರಿಗೆ ತರಬೇತಿ ನೀಡಲು ರಾಜ್ಯದಾದ್ಯಂತ ಪ್ರತಿಷ್ಠಿತ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇದು ಯುವಕರು ಸ್ವಾವಲಂಬಿಗಳಾಗಲು ಮತ್ತು ವಿವಿಧ ಉದ್ಯೋಗಾವಕಾಶಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ರಾಜ್ಯಾದ್ಯಂತ ಸುಮಾರು 1,50,000 ಯುವಕರು ಪ್ರತಿ ವರ್ಷ ಉಚಿತ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಪಡೆಯುತ್ತಾರೆ.

 

ಪ್ರಧಾನಮಂತ್ರಿಯವರು ‘ಪುಣ್ಯಶ್ಲೋಕ ಅಹಲ್ಯಾ ದೇವಿ ಹೋಳ್ಕರ್ ಮಹಿಳಾ ಸ್ಟಾರ್ಟಪ್ ಯೋಜನೆʼಗೆ ಚಾಲನೆ ನೀಡಿದರು. ಈ ಯೋಜನೆಯಡಿಯಲ್ಲಿ, ಮಹಾರಾಷ್ಟ್ರದಲ್ಲಿ ಮಹಿಳೆಯರ ನೇತೃತ್ವದ ಸ್ಟಾರ್ಟ್‌ಅಪ್‌ ಗಳಿಗೆ ಆರಂಭಿಕ ಹಂತದಲ್ಲಿ ನೆರವು ನೀಡಲಾಗುತ್ತದೆ. 25 ಲಕ್ಷ ರೂಪಾಯಿಯವರೆಗೆ ಆರ್ಥಿಕ ನೆರವು ನೀಡಲಾಗುವುದು. ಈ ಯೋಜನೆಯಡಿಯಲ್ಲಿ ಒಟ್ಟು ನಿಬಂಧನೆಗಳ ಶೇ.25 ರಷ್ಟನ್ನು ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮೀಸಲಿಡಲಾಗುತ್ತದೆ. ಇದು ಮಹಿಳೆಯರ ನೇತೃತ್ವದ ಸ್ಟಾರ್ಟ್‌ಅಪ್‌ ಗಳು ಸ್ವಾವಲಂಬಿ ಮತ್ತು ಸ್ವತಂತ್ರವಾಗಲು ಸಹಾಯ ಮಾಡುತ್ತದೆ.

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
PM Modi congratulates hockey team for winning Women's Asian Champions Trophy
November 21, 2024

The Prime Minister Shri Narendra Modi today congratulated the Indian Hockey team on winning the Women's Asian Champions Trophy.

Shri Modi said that their win will motivate upcoming athletes.

The Prime Minister posted on X:

"A phenomenal accomplishment!

Congratulations to our hockey team on winning the Women's Asian Champions Trophy. They played exceptionally well through the tournament. Their success will motivate many upcoming athletes."