ಮೈಕ್ರೋಸಾಫ್ಟ್ ಕಾರ್ಪೊರೇಶನ್ ಸಂಸ್ಥೆಯ ಅಧ್ಯಕ್ಷ ಮತ್ತು ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಶ್ರೀ ಸತ್ಯ ನಾಡೆಲ್ಲಾ ಅವರು ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದರು ಹಾಗೂ ಈ ಸಂದರ್ಭದಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಭಾರತವು ಪ್ರಗತಿಪರ ಹೆಜ್ಜೆಗಳ ಮೂಲಕ ತಂತ್ರಜ್ಞಾನ-ನೇತೃತ್ವದ ಬೆಳವಣಿಗೆಯ ನೂತನ ಯುಗವನ್ನು ಪ್ರಾರಂಭಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
ಪ್ರಧಾನಮಂತ್ರಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ;
''@satyanadella ನಿಮ್ಮನ್ನು ಭೇಟಿಯಾಗಿದ್ದಕ್ಕೆ ಸಂತೋಷವಾಗಿದೆ. ಭಾರತವು ಪ್ರಗತಿಪರ ಹೆಜ್ಜೆಗಳ ಮೂಲಕ ತಂತ್ರಜ್ಞಾನ-ನೇತೃತ್ವದ ಬೆಳವಣಿಗೆಯ ನೂತನ ಯುಗವನ್ನು ಪ್ರಾರಂಭಿಸುತ್ತಿದೆ. ನಮ್ಮ ಯುವಕರು ಸಂಪೂರ್ಣ ಗ್ರಹವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿರುವ ಆಲೋಚನೆಗಳಿಂದ ತುಂಬಿದ್ದಾರೆ.”
Glad to have met you @satyanadella. India's strides in technology and innovation are ushering in an era of tech-led growth. Our youth is filled with ideas which have the potential to transform the planet. https://t.co/aFqYM1QI6I
— Narendra Modi (@narendramodi) January 5, 2023