ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಬಿಲ್ಲೆನಿಯಮ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಗವೆಲ್ ಲೋಪಿನ್ಸ್ಕಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಿಲ್ಲೆನಿಯಮ್ ಪ್ರೈವೇಟ್ ಲಿ. ಪೋಲೆಂಡ್ ನ ಪ್ರಮುಖ ಐಟಿ ಕಂಪೆನಿಯಾಗಿದ್ದು, ಭಾರತದ ಪುಣೆಯಲ್ಲಿ ತನ್ನ ಉದ್ಯಮವನ್ನು ಹೊಂದಿದೆ.
ಭಾರತದಲ್ಲಿ ಹೂಡಿಕೆಗೆ ಅನುಕೂಲಕರ ವಾತಾವರಣ ಮತ್ತು ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದಲ್ಲಿ ಭಾರತದ ಬೆಳವಣಿಗೆಯ ಬಗ್ಗೆ ಪ್ರಧಾನಮಂತ್ರಿಯವರು ಮಾತುಕತೆ ವೇಳೆ ಉಲ್ಲೇಖಿಸಿದರು. ಗವೆಲ್ ಲೋಪಿನ್ಸ್ಕಿ ಅವರು ಮುಂದಿನ ದಿನಗಳಲ್ಲಿ ಹೊಂದಿರುವ ತಮ್ಮ ವಿಸ್ತರಣಾ ಯೋಜನೆಗಳ ಬಗ್ಗೆ ಪ್ರಧಾನ ಮಂತ್ರಿ ಮೋದಿಯವರು ಕೇಳಿ ತಿಳಿದುಕೊಂಡರು. ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಸೈಬರ್ ಭದ್ರತೆ ಮತ್ತು ಡಿಜಿಟಲ್ ಆರ್ಥಿಕತೆ ಕ್ಷೇತ್ರದಲ್ಲಿ ಭಾರತ-ಪೋಲೆಂಡ್ ನಡುವೆ ಉದ್ಯಮಗಳಲ್ಲಿ ಸಹಯೋಗ ಮಾಡಿಕೊಂಡರೆ ಸಿಗುವ ಮಹತ್ವದ ಅವಕಾಶಗಳನ್ನು ಪ್ರಸ್ತಾಪಿಸಿದರು.
ಭಾರತ ದೇಶ, ಸುಲಭವಾಗಿ ಉದ್ಯಮ ನಡೆಸಲು ಪೂರಕ ಅವಕಾಶ ಕಲ್ಪಿಸಿಕೊಡುವ ಬದ್ಧತೆ ಹೊಂದಿದ್ದು, ಹೂಡಿಕೆ ಸ್ನೇಹಿ ವಾತಾವರಣವನ್ನು ನಿರ್ಮಿಸುತ್ತದೆ ಎಂದು ಕೂಡ ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮೋದಿಯವರು ಶ್ರೀ ಲೋಪಿನ್ಸ್ಕಿಯವರಿಗೆ ಭರವಸೆ ನೀಡಿದರು.