ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನವದೆಹಲಿಯಲ್ಲಿ ಹಾನ್ ಹೈ ಟೆಕ್ನಾಲಜಿ ಗ್ರೂಪ್ (ಫಾಕ್ಸ್ ಕಾನ್)ನ ಅಧ್ಯಕ್ಷರಾದ ಶ್ರೀ ಯಂಗ್ ಲಿಯು ಅವರನ್ನು ಭೇಟಿ ಮಾಡಿದರು. ಅವರಿಬ್ಬರೂ ಭಾರತದ ತಂತ್ರಜ್ಞಾನ ಮತ್ತು ನಾವೀನ್ಯತಾ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು.
ಗೌರವಾನ್ವಿತ ಹೈ ಟೆಕ್ನಾಲಜಿ ಗ್ರೂಪ್ (ಫಾಕ್ಸ್ ಕಾನ್) ಮಾಡಿದ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ, ಪ್ರಧಾನಮಂತ್ರಿಯವರು;
"ಶ್ರೀ ಯಂಗ್ ಲಿಯು ಅವರೊಂದಿಗಿನ ಭೇಟಿ ಉತ್ತಮವಾಗಿತ್ತು. ನಮ್ಮ ಚರ್ಚೆಗಳು ಭಾರತದ ತಂತ್ರಜ್ಞಾನ ಮತ್ತು ನಾವೀನ್ಯತಾ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ವಿವಿಧ ವಿಷಯಗಳನ್ನು ಒಳಗೊಂಡಿದ್ದವು" ಎಂದು ಟ್ವೀಟ್ ಮಾಡಿದ್ದಾರೆ.
Had a good meeting with Mr. Young Liu. Our discussions covered various topics aimed at enhancing India’s tech and innovation eco-system. https://t.co/a2hgQtKvjG
— Narendra Modi (@narendramodi) March 1, 2023