ದೋಹಾದಲ್ಲಿ ಫಾದರ್ ಅಮೀರ್ ಘನತೆವೆತ್ತ ಶ್ರೀ ಹಮದ್ ಬಿನ್ ಖಲೀಫಾ ಅಲ್ ಥಾನಿ ಅವರನ್ನು ಇಂದು ಮಧ್ಯಾಹ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ಮಾಡಿದರು.
ಕಳೆದ ದಶಕಗಳಲ್ಲಿ ಕತಾರ್ ನ ಅಭಿವೃದ್ಧಿಗೆ ದಾರಿಮಾಡಿಕೊಟ್ಟ ದೂರದೃಷ್ಟಿಯ ನಾಯಕತ್ವಕ್ಕಾಗಿ ಫಾದರ್ ಅಮೀರ್ ಅವರನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು. ಉಭಯ ನಾಯಕರು ಭಾರತ-ಕತಾರ್ ಸಂಬಂಧಗಳ ಕುರಿತು ಚರ್ಚೆ ನಡೆಸಿದರು.
ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಫಾದರ್ ಅಮೀರ್ ಅವರ ಒಳನೋಟವುಳ್ಳ ಚಿಂತನೆ-ಅವಲೋಕನಗಳಿಗೆ ಪ್ರಧಾನಮಂತ್ರಿಯವರು ತಮ್ಮ ಮೆಚ್ಚುಗೆಯನ್ನು ತಿಳಿಸಿದರು.
ಭಾರತ ಮತ್ತು ಕತಾರ್ ಪರಸ್ಪರ ನಂಬಿಕೆ ಮತ್ತು ಸಹಕಾರದಿಂದ ಅಚಲವಾದ ಬಾಂಧವ್ಯವನ್ನು ಹಂಚಿಕೊಳ್ಳುತ್ತವೆ ಎಂದು ಫಾದರ್ ಅಮೀರ್ ಅವರು ದೃಢಪಡಿಸಿದರು. ಕತಾರ್ ನ ಅಭಿವೃದ್ಧಿಯಲ್ಲಿ ಮತ್ತು ದ್ವಿಪಕ್ಷೀಯ ಪಾಲುದಾರಿಕೆಯನ್ನು ಪೋಷಿಸುವಲ್ಲಿ ಭಾರತೀಯ ಸಮುದಾಯದ ಪಾತ್ರವನ್ನು ಫಾದರ್ ಅಮೀರ್ ಅವರು ಶ್ಲಾಘಿಸಿದರು.