ಎರಡನೇ ಭಾರತ-ಕ್ಯಾರಿಕಾಮ್ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 20 ರಂದು ಸೇಂಟ್ ಲೂಸಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ. ಫಿಲಿಪ್ ಜೆ. ಪಿಯರ್ ಅವರನ್ನು ಭೇಟಿ ಮಾಡಿ ಫಲಪ್ರದ ಮಾತುಕತೆ ನಡೆಸಿದರು.
ಉಭಯ ನಾಯಕರು ಸಾಮರ್ಥ್ಯ ವೃದ್ಧಿ, ಶಿಕ್ಷಣ, ಆರೋಗ್ಯ, ನವೀಕರಿಸಬಹುದಾದ ಇಂಧನ, ಕ್ರಿಕೆಟ್ ಮತ್ತು ಯೋಗ ಸೇರಿದಂತೆ ಹಲವು ವಿಷಯಗಳಲ್ಲಿ ದ್ವಿಪಕ್ಷೀಯ ಸಹಕಾರದ ಕುರಿತು ಚರ್ಚಿಸಿದರು. ಭಾರತ-ಕ್ಯಾರಿಕಾಮ್ ಪಾಲುದಾರಿಕೆಯನ್ನು ಬಲಪಡಿಸಲು ಪ್ರಧಾನಿ ಅವರು ಮುಂದಿಟ್ಟ ಏಳು ಅಂಶಗಳ ಕಾರ್ಯಯೋಜನೆಯನ್ನುಯ ಪ್ರಧಾನಿ ಪಿಯರೆ ಶ್ಲಾಘಿಸಿದರು.
ಸಣ್ಣ ದ್ವೀಪ ರಾಷ್ಟ್ರಗಳಲ್ಲಿ ವಿಪತ್ತು ನಿರ್ವಹಣಾ ಸಾಮರ್ಥ್ಯಗಳು ಮತ್ತು ಸ್ಥಿತಿಸ್ಥಾಪಕತ್ವವನ್ನು ಬಲವರ್ಧನೆಗೊಳಿಸುವತ್ತ ನಿರ್ದಿಷ್ಟ ಗಮನ ಹರಿಸುವುದು ಮತ್ತು ಹವಾಮಾನ ವೈಪರೀತ್ಯದಿಂದ ಉಂಟಾಗುವ ಸವಾಲುಗಳನ್ನು ಎದುರಿಸುವಲ್ಲಿ ಸಹಯೋಗದ ಪ್ರಾಮುಖ್ಯತೆಯನ್ನು ಬಗ್ಗೆ ಉಭಯ ನಾಯಕರು ಸಮಾಲೋಚಿಸಿದರು.
Met the Prime Minister of Saint Lucia, Mr. Philip J. Pierre. We discussed ways to boost trade linkages. We also talked about enhancing ties in sectors like healthcare, pharma, energy, sports and more.@PhilipJPierreLC pic.twitter.com/Cc3FZ1cVQp
— Narendra Modi (@narendramodi) November 21, 2024