ದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯ ಹೊರತಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಸೆಪ್ಟೆಂಬರ್ 8ರಂದು ಮಾರಿಷಸ್ ಪ್ರಧಾನಿ ಗೌರವಾನ್ವಿತ ಶ್ರೀ ಪ್ರವಿಂದ್ ಕುಮಾರ್ ಜುಗ್ನೌತ್ ಅವರನ್ನು ಭೇಟಿ ಮಾಡಿದರು.
ಜಿ-20 ಶೃಂಗಸಭೆಯಲ್ಲಿ 'ಅತಿಥಿ ರಾಷ್ಟ್ರ'ವಾಗಿ ಪಾಲ್ಗೊಳ್ಳಲು ಮಾರಿಷಸ್ ಗೆ ವಿಶೇಷ ಆಹ್ವಾನ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ಜುಗ್ನೌತ್ ಅವರು ಪ್ರಧಾನಮಂತ್ರಿ ಅವರಿಗೆ ಧನ್ಯವಾದ ಅರ್ಪಿಸಿದರು. ಭಾರತೀಯ ಅಧ್ಯಕ್ಷತೆಯಲ್ಲಿ ನಡೆದ ಜಿ 20 ಯ ವಿವಿಧ ಕಾರ್ಯ ಗುಂಪುಗಳು ಮತ್ತು ಸಚಿವರ ಸಭೆಗಳಲ್ಲಿ ಮಾರಿಷಸ್ ಸಕ್ರಿಯವಾಗಿ ಭಾಗವಹಿಸುತ್ತಿರುವುದನ್ನು ಪ್ರಧಾನಿ ಶ್ಲಾಘಿಸಿದರು.
ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 75 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಜಿ 20 ಕಾರ್ಯಕ್ರಮಗಳ ಬಗ್ಗೆ ಇಬ್ಬರೂ ನಾಯಕರು ಸಂತಸ ವ್ಯಕ್ತಪಡಿಸಿದರು. ಉಭಯ ನಾಯಕರು ಭಾರತ ಮತ್ತು ಮಾರಿಷಸ್ ನಡುವಿನ ಬಹುಮುಖಿ ದ್ವಿಪಕ್ಷೀಯ ಸಹಕಾರವನ್ನು ಪರಿಶೀಲಿಸಿದರು. ಕಳೆದ ವರ್ಷದಲ್ಲಿ 30 ಕ್ಕೂ ಹೆಚ್ಚು ನಿಯೋಗ ಭೇಟಿಗಳು ಮತ್ತು 23 ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ದ್ವಿಪಕ್ಷೀಯ ವಿನಿಮಯದ ತ್ವರಿತ ವೇಗವನ್ನು ಅವರು ಗಮನಿಸಿದರು.
ಪ್ರಧಾನಮಂತ್ರಿ ಜುಗ್ನೌತ್ ಅವರು ಚಂದ್ರಯಾನ -3 ಮಿಷನ್ ನ ಯಶಸ್ಸಿಗಾಗಿ ಪ್ರಧಾನಮಂತ್ರಿ ಅವರನ್ನು ಅಭಿನಂದಿಸಿದರು ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಎರಡೂ ಕಡೆಗಳ ನಡುವೆ ಹೆಚ್ಚಿನ ಸಹಕಾರವನ್ನು ಎದುರು ನೋಡಲಾಯಿತು.
PM @KumarJugnauth and I had a very good meeting. This is a special year for India-Mauritius relations as we mark 75 years of diplomatic ties between our nations. We discussed cooperation in sectors like infrastructure, FinTech, culture and more. Also reiterated India's commitment… pic.twitter.com/L6BDSpIAIV
— Narendra Modi (@narendramodi) September 8, 2023
PM @narendramodi met PM @KumarJugnauth of Mauritius, a key partner integral to India’s vision SAGAR. Both leaders enthusiastically acknowledged the significant enhancement of the India-Mauritius bilateral relationship, commemorating its remarkable 75th anniversary this year. pic.twitter.com/y0vCNQ9Fk1
— PMO India (@PMOIndia) September 8, 2023