ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಪಲ್ಲಡಂನಲ್ಲಿ ಜರ್ಮನ್ ಗಾಯಕಿ ಕಸ್ಸಂದ್ರ ಮೇ ಸ್ಪಿಟ್ಮನ್ ಮತ್ತು ಅವರ ತಾಯಿಯನ್ನು ಭೇಟಿ ಮಾಡಿದರು.
ಈ ಹಿಂದೆ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕಸ್ಸಂದ್ರ ಮೇ ಸ್ಪಿಟ್ಮನ್ ಅವರ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದರು. ಅವರು ಅನೇಕ ಭಾರತೀಯ ಭಾಷೆಗಳಲ್ಲಿ ಹಾಡುಗಳನ್ನು, ವಿಶೇಷವಾಗಿ ಭಕ್ತಿಗೀತೆಗಳನ್ನು ಹಾಡುತ್ತಾರೆ.
ಇಂದು ಅವರು ಪ್ರಧಾನಿ ಮೋದಿಯವರ ಮುಂದೆ ಅಚ್ಯುತಮ್ ಕೇಶವಂ ಮತ್ತು ತಮಿಳು ಗೀತೆಯೊಂದನ್ನು ಹಾಡಿದ್ದಾರೆ.
ಈ ಬಗ್ಗೆ ವಿಡಿಯೊ ಹಂಚಿಕೊಂಡು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು, "ನಮ್ಮ ಮಾತುಕತೆ ವೇಳೆ ನಾನು ಕಂಡಂತೆ ಕಸ್ಸಂದ್ರ ಮೇ ಸ್ಪಿಟ್ಮನ್ ಅವರಿಗೆ ಭಾರತದ ಮೇಲೆ ಇರುವ ಪ್ರೀತಿ ಅನುಕರಣೀಯವಾಗಿದೆ. ಅವರ ಮುಂದಿನ ಪಯಣಕ್ಕೆ ನನ್ನ ಶುಭಾಶಯಗಳು." ಎಂದು ಬರೆದುಕೊಂಡಿದ್ದಾರೆ.
Die wohlklingende Stimme von Cassandra Mae Spittmann ist weithin bekannt. In Palladam habe Ich sie und ihre Mutter getroffen. Wir hatten ein wunderbares Gespräch über Cassmaes Liebe zur indischen Kultur, zur Musik und zum Essen. Der Höhepunkt natürlich war ihr Gesang von… pic.twitter.com/B0bqaDgYzF
— Narendra Modi (@narendramodi) February 27, 2024
Cassandra Mae Spittmann’s love for India is exemplary, as seen in our interaction. My best wishes for her future endeavours. pic.twitter.com/1MWvSXhRFW
— Narendra Modi (@narendramodi) February 27, 2024