ಬೇಟಿ ಬಚಾವೋ, ಬೇಟಿ ಪಡಾವೋ ಆಂದೋಲನವು ಲಿಂಗ ತಾರತಮ್ಯಗಳನ್ನು ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ: ಪ್ರಧಾನಮಂತ್ರಿ
ಐತಿಹಾಸಿಕವಾಗಿ ಕಡಿಮೆ ಮಕ್ಕಳ ಲಿಂಗ ಅನುಪಾತ ಹೊಂದಿರುವ ಜಿಲ್ಲೆಗಳಲ್ಲಿನ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆಗಳಾಗಿರುವುದು ವರದಿಯಾಗಿದೆ: ಪ್ರಧಾನಮಂತ್ರಿ

ಬೇಟಿ ಬಚಾವೋ, ಬೇಟಿ ಪಡಾವೋ ಆಂದೋಲನ ಯಶಸ್ವಿಯಾಗಿ 10 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇದು ಪರಿವರ್ತನಾತ್ಮಕ, ಜನಶಕ್ತಿಯ ಕೇಂದ್ರಿತ ಉಪಕ್ರಮವಾಗಿದೆ ಮತ್ತು ಸಮಾಜದ ಎಲ್ಲಾ ಸ್ತರ ಜನರಿಂದ ಪಾಲ್ಗೊಳ್ಳುವಿಕೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಬಣ್ಣಿಸಿದರು. ಬೇಟಿ ಬಚಾವೋ, ಬೇಟಿ ಪಡಾವೋ ಆಂದೋಲನವು ಲಿಂಗ ತಾರತಮ್ಯವನ್ನು ನಿವಾರಿಸುವಲ್ಲಿ ಮತ್ತು ಹೆಣ್ಣು ಮಕ್ಕಳ ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಎತ್ತಿ ಹೇಳಿದರು. ಐತಿಹಾಸಿಕವಾಗಿ ಕಡಿಮೆ ಮಕ್ಕಳ ಲಿಂಗ ಅನುಪಾತಗಳನ್ನು ಹೊಂದಿರುವ ಜಿಲ್ಲೆಗಳು ಯೋಜನೆ ಅನುಷ್ಠಾನದ ನಂತರ ಗಮನಾರ್ಹ ಸುಧಾರಣೆ ಕಂಡಿರುವುದು ವರದಿಯಾಗಿದೆ ಹಾಗೂ ಈ ಆಂದೋಲನವನ್ನು ತಳಮಟ್ಟದಲ್ಲಿ ಕ್ರಿಯಾಶೀಲವಾಗಿ ಮುನ್ನಡೆಸಿದ ಎಲ್ಲ ಪಾಲುದಾರರನ್ನೂ ಶ್ರೀ ಮೋದಿ ಅವರು ಅಭಿನಂದಿಸಿದ್ದಾರೆ.

ಈ ಸಂಬಂಧ ಅವರು ಏಕ್ಸ್‌ನಲ್ಲಿ ಸಂದೇಶಗಳ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.

“ಇಂದು ನಾವು #ಬೇಟಿ ಬಚಾವೋ ಬೇಟಿ ಪಡಾವೋ ಆಂದೋಲನದ 10ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ಕಳೆದ ಒಂದು ದಶಕದಲ್ಲಿ, ಈ ಆಂದೋಲನವು ಪರಿವರ್ತನಾತ್ಮಕ, ಜನಶಕ್ತಿಯ ಉಪಕ್ರಮವಾಗಿ ಮಾರ್ಪಟ್ಟಿದೆ ಮತ್ತು ಸಮಾಜದ ಎಲ್ಲಾ ಹಂತಗಳ ಜನರ ಪಾಲ್ಗೊಳ್ಳುವಿಕೆ ಮೂಲಕ ಯಶಸ್ಸು ಸಾಧಿಸಿದೆ." ಎಂದಿದ್ದಾರೆ.

"#ಬೇಟಿ ಬಚಾವೋ ಬೇಟಿ ಪಡಾವೋ ಲಿಂಗ ತಾರತಮ್ಯವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಹಾಗೂ ಜತೆ ಜತೆಗೆ ಹೆಣ್ಣು ಮಗುವಿಗೆ ಶಿಕ್ಷಣ ಮತ್ತು ಅವಳ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಅವಕಾಶಗಳನ್ನು ಪಡೆಯಲು ಸೂಕ್ತ ವಾತಾವರಣವನ್ನು ಸೃಷ್ಟಿಸಿದೆ."

"ಆಂದೋಲನದ ಯಶಸ್ಸಿಗೆ ಶ್ರಮಿಸಿದ ಜನರು ಮತ್ತು ವಿವಿಧ ಸಮುದಾಯ ಸೇವಾ ಸಂಸ್ಥೆಗಳ ಸಮರ್ಪಿತ ಪ್ರಯತ್ನಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. #ಬೇಟಿ ಬಚಾವೋ ಬೇಟಿ ಪಡಾವೋ ಆಂದೋಲನವು ಗಮನಾರ್ಹ ಮೈಲಿಗಲ್ಲು ಸೃಷ್ಟಿಸುವಂತಹ ಯಶಸ್ಸು ಸಾಧಿಸಿದೆ. ಐತಿಹಾಸಿಕವಾಗಿ ಕಡಿಮೆ ಮಕ್ಕಳ ಲಿಂಗ ಅನುಪಾತಗಳನ್ನು ಹೊಂದಿರುವ ಜಿಲ್ಲೆಗಳು ಆಂದೋಲನದ ತರುವಾಯ ಗಮನಾರ್ಹ ಸುಧಾರಣೆ ಕಂಡಿರುವುದು ವರದಿಯಾಗಿದೆ ಮತ್ತು ಜಾಗೃತಿ ಅಭಿಯಾನಗಳು ಲಿಂಗ ಸಮಾನತೆಯ ಮಹತ್ವದ ಬಗ್ಗೆ ಆಳವಾಗಿ ಮನವರಿಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿವೆ."

"ಈ ಆಂದೋಲನವನ್ನು ತಳಮಟ್ಟದಲ್ಲಿ ಕ್ರಿಯಾಶೀಲವಾಗಿ ಮುನ್ನಡೆಸಿದ ಎಲ್ಲ ಪಾಲುದಾರರನ್ನು ನಾನು ಅಭಿನಂದಿಸುತ್ತೇನೆ. ನಮ್ಮ ಹೆಣ್ಣುಮಕ್ಕಳ ಹಕ್ಕುಗಳನ್ನು ರಕ್ಷಿಸುವ ಕಾರ್ಯವನ್ನು ಮುಂದುವರಿಸೋಣ, ಅವರ ಸರಿಯಾದ ಶಿಕ್ಷಣ ಸಿಗುವುದನ್ನು ಖಾತರಿಪಡಿಸಿಕೊಳ್ಳೋಣ ಮತ್ತು ಅವರು ಯಾವುದೇ ತಾರತಮ್ಯವಿಲ್ಲದೆ ಅಭಿವೃದ್ಧಿ ಹೊಂದಬಹುದಾದ ಸಮಾಜವನ್ನು ನಿರ್ಮಿಸೋಣ. ಎಲ್ಲರೂ ಒಟ್ಟಾಗಿ, ಮುಂಬರುವ ವರ್ಷಗಳು ಭಾರತದ ಹೆಣ್ಣುಮಕ್ಕಳಿಗೆ ಇನ್ನೂ ಹೆಚ್ಚಿನ ಪ್ರಗತಿ ಮತ್ತು ಅವಕಾಶವನ್ನು ಸೃಷ್ಟಿಸಲಿವೆ ಎಂದು ನಾವು ಖಚಿತಪಡಿಸಿಕೊಳ್ಳಬಹುದೆಂದು ಆಶಿಸೋಣ #BetiBachaoBetiPadhao”

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Regional languages take precedence in Lok Sabha addresses

Media Coverage

Regional languages take precedence in Lok Sabha addresses
NM on the go

Nm on the go

Always be the first to hear from the PM. Get the App Now!
...
Prime Minister condoles the loss of lives in the mishap in Chitradurga district of Karnataka
December 25, 2025
Announces ex-gratia from PMNRF

The Prime Minister, Shri Narendra Modi has condoled the loss of lives due to a mishap in Chitradurga district of Karnataka. Shri Modi also wished speedy recovery for those injured in the mishap.

The Prime Minister announced an ex-gratia from PMNRF of Rs. 2 lakh to the next of kin of each deceased and Rs. 50,000 for those injured.

The Prime Minister posted on X:

“Deeply saddened by the loss of lives due to a mishap in the Chitradurga district of Karnataka. Condolences to those who have lost their loved ones. May those injured recover at the earliest.

An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM @narendramodi"