"ಶ್ರೀ ಕಲ್ಕಿ ಧಾಮ್ ದೇವಾಲಯವು ಭಾರತದ ಆಧ್ಯಾತ್ಮಿಕತೆಯ ಹೊಸ ಕೇಂದ್ರವಾಗಿ ಹೊರಹೊಮ್ಮಲಿದೆ"
"ಇಂದಿನ ಭಾರತವು “ಪರಂಪರೆಯೊಂದಿಗೆ ಅಭಿವೃದ್ಧಿ” ಎಂಬ ಮಂತ್ರದೊಂದಿಗೆ ವೇಗವಾಗಿ ಚಲಿಸುತ್ತಿದೆ
"ಛತ್ರಪತಿ ಶಿವಾಜಿ ಮಹಾರಾಜರು ಭಾರತದ ಸಾಂಸ್ಕೃತಿಕ ಪುನರುಜ್ಜೀವನದ ಹಿಂದಿನ ಸ್ಫೂರ್ತಿ, ನಮ್ಮ ಅಸ್ಮಿತೆಯ ಹೆಮ್ಮೆ ಮತ್ತು ಅದನ್ನು ಸ್ಥಾಪಿಸುವ ವಿಶ್ವಾಸ"
"ಬಾಲ ರಾಮರ ಸಾನ್ನಿಧ್ಯದ ದಿವ್ಯ ಅನುಭವ, ಆ ದಿವ್ಯ ಭಾವನೆಯು ನಮ್ಮನ್ನು ಇನ್ನೂ ಭಾವುಕರನ್ನಾಗಿಸುತ್ತದೆ"
"ಊಹೆಗೂ ನಿಲುಕದಿದದ್ದು ಈಗ ನಿಜವಾಗಿದೆ"
"ಇಂದು, ಒಂದು ಕಡೆ, ನಮ್ಮ ಯಾತ್ರಾ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಮತ್ತೊಂದೆಡೆ, ನಗರಗಳಲ್ಲಿ ಹೈಟೆಕ್ ಮೂಲಸೌಕರ್ಯಗಳನ್ನು ಸಹ ಸೃಷ್ಟಿಸಲಾಗುತ್ತಿದೆ "
"ಕಲ್ಕಿಯು ಕಾಲ ಚಕ್ರದಲ್ಲಿ ಬದಲಾವಣೆಯ ಪ್ರಾರಂಭಿಕ ಮತ್ತು ಸ್ಫೂರ್ತಿಯ ಮೂಲವಾಗಿದೆ"
ಸೋಲಿನ ದವಡೆಯಿಂದ ಗೆಲುವನ್ನು ಹೇಗೆ ಕಸಿದುಕೊಳ್ಳಬೇಕೆಂದು ಭಾರತಕ್ಕೆ ಗೊತ್ತಿದೆ
"ಇಂದು, ಮೊದಲ ಬಾರಿಗೆ, ಭಾರತವು ನಾವು ಯಾರನ್ನು ಹಿಂಬಾಲಿಸದೆ, ನಾವೇ ಒಂದು ದೃಷ್ಟಾಂತವಾಗುತ್ತಿರುವೆವು"
"ಇಂದಿನ ಭಾರತದಲ್ಲಿ ನಮ್ಮ ಶಕ್ತಿಯು ಅಪರಿಮಿತವಾಗಿದೆ ಮತ್ತು ನಮಗಿರುವ ಸಾಧ್ಯತೆಗಳು ಸಹ ಅಪಾರವಾಗಿವೆ"
"ಭಾರತವು ದೊಡ್ಡ ನಿರ್ಣಯಗಳನ್ನು ಕೈಗೊಂಡಾಗ, ದೈವಿಕ ಪ್ರಜ್ಞೆಯು ಖಂಡಿತವಾಗಿಯೂ ನಮ್ಮಲ್ಲಿ ಯಾವುದಾದರೂ ರೂಪದಲ್ಲಿ ಅಥವಾ ಇನ್ನೊಂದರಲ್ಲಿ ಮಾರ್ಗದರ್ಶನ ನೀಡುತ್ತದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಶ್ರೀ ಕಲ್ಕಿ ಧಾಮ್ ದೇವಾಲಯದ ಶಂಕುಸ್ಥಾಪನೆ ಮಾಡಿದರು. ಪ್ರಧಾನಮಂತ್ರಿಯವರು ಶ್ರೀ ಕಲ್ಕಿ ಧಾಮ ದೇವಾಲಯದ ಮಾದರಿಯನ್ನು ಅನಾವರಣಗೊಳಿಸಿದರು. ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಅಧ್ಯಕ್ಷರಾಗಿರುವ ಶ್ರೀ ಕಲ್ಕಿ ಧಾಮ್ ನಿರ್ಮಾಣ್ ಟ್ರಸ್ಟ್ ವತಿಯಿಂದ ಶ್ರೀ ಕಲ್ಕಿ ಧಾಮವನ್ನು ನಿರ್ಮಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಹಲವಾರು ಸಂತರು, ಧಾರ್ಮಿಕ ಮುಖಂಡರು ಹಾಗೂ ಗಣ್ಯರು ಭಾಗವಹಿಸುತ್ತಿರುವರು.

 

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಭಗವಾನ್ ಶ್ರೀರಾಮ ಮತ್ತು ಶ್ರೀಕೃಷ್ಣನ ನಾಡು ಮತ್ತೊಮ್ಮೆ ಭಕ್ತಿ, ಭಾವ ಮತ್ತು ಆಧ್ಯಾತ್ಮಿಕತೆಯಿಂದ ತುಂಬಿದ್ದು, ಮತ್ತೊಂದು ಮಹತ್ವದ ಯಾತ್ರೆಗೆ ಅಡಿಪಾಯ ಹಾಕಲಾಗುತ್ತಿದೆ ಎಂದು ಹೇಳಿದರು. ಸಂಭಾಲ್ನಲ್ಲಿ ಶ್ರೀ ಕಲ್ಕಿ ಧಾಮ್ ದೇವಾಲಯದ ಶಿಲಾನ್ಯಾಸವನ್ನು ಮಾಡುವ ಅವಕಾಶಕ್ಕಾಗಿ ಶ್ರೀ ಮೋದಿ ಕೃತಜ್ಞತೆ ವ್ಯಕ್ತಪಡಿಸಿದರು ಮತ್ತು ಇದು ಭಾರತದ ಆಧ್ಯಾತ್ಮಿಕತೆಯ ಹೊಸ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಪಂಚದಾದ್ಯಂತದ ಎಲ್ಲಾ ನಾಗರಿಕರು ಮತ್ತು ಯಾತ್ರಾರ್ಥಿಗಳಿಗೆ ಪ್ರಧಾನಮಂತ್ರಿ ಶ್ರೀಮೋದಿ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

ಧಾಮದ ಉದ್ಘಾಟನೆಗೆ 18 ವರ್ಷಗಳ ಕಾಯುವಿಕೆಯನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ತಾವು ಸಾಧಿಸಲು ಇನ್ನೂ ಅನೇಕ ಉತ್ತಮ ಕಾರ್ಯಗಳು ಉಳಿದಿವೆ ಎಂದು ತೋರುತ್ತದೆ ಎಂದು ಹೇಳಿದರು. ಜನತೆ ಹಾಗೂ ಸಂತರ ಆಶೀರ್ವಾದದಿಂದ ಅಪೂರ್ಣವಾದ ಕಾರ್ಯಗಳನ್ನು ಪೂರ್ಣಗೊಳಿಸುವುದನ್ನು ಮುಂದುವರೆಸುತ್ತೇನೆ ಎಂದರು.

 

ಇಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಎಂದು ತಿಳಿಸಿದ ಪ್ರಧಾನಮಂತ್ರಿಯವರು,  ಇಂದಿನ ಸಾಂಸ್ಕೃತಿಕ ಪುನರುಜ್ಜೀವನ, ಹೆಮ್ಮೆ ಮತ್ತು ನಮ್ಮ ಅಸ್ಮಿತೆಯ ಮೇಲಿನ ನಂಬಿಕೆಗಾಗಿ ಶಿವಾಜಿ ಮಹಾರಾಜರನ್ನು ಶ್ಲಾಘಿಸಿದರು. ಪ್ರಧಾನಮಂತ್ರಿಯವರು ಛತ್ರಪತಿ ಶಿವಾಜಿ ಮಹಾರಾಜರಿಗೆ ನಮನ ಸಲ್ಲಿಸಿದರು.

ದೇವಾಲಯದ ವಾಸ್ತುಶಿಲ್ಪದ ಮೇಲೆ ಬೆಳಕು ಚೆಲ್ಲುತ್ತಾ, ಇದು 10 ಗರ್ಭ ಗೃಹಗಳನ್ನು ಹೊಂದಿರುತ್ತದೆ, ಅಲ್ಲಿ ಭಗವಂತನ ಎಲ್ಲಾ ಹತ್ತು ಅವತಾರಗಳನ್ನು ಇರಿಸಲಾಗುತ್ತವೆ ಎಂದು ವಿವರಿಸಿದರು. ಈ ಹತ್ತು ಅವತಾರಗಳ ಮೂಲಕ, ಧರ್ಮಗ್ರಂಥಗಳು ಮಾನವ ರೂಪ ಸೇರಿದಂತೆ ಭಗವಂತನ ಎಲ್ಲಾ ರೂಪಗಳನ್ನು ಪ್ರಸ್ತುತಪಡಿಸಿವೆ ಎಂದು ಪ್ರಧಾನಮಂತ್ರಿ ಮೋದಿ ವಿವರಿಸಿದರು. “ಜೀವನದಲ್ಲಿ, ಒಬ್ಬರು ದೇವರ ಪ್ರಜ್ಞೆಯನ್ನು ಅನುಭವಿಸಬಹುದು”, “ನಾವು ‘ಸಿಂಹ (ಸಿಂಹ), ವರಾ (ಹಂದಿ) ಮತ್ತು ಕೂರ್ಮ (ಆಮೆ) ರೂಪದಲ್ಲಿ ಭಗವಂತನನ್ನು ಅನುಭವಿಸಿದ್ದೇವೆ” ಎಂದು ಪ್ರಧಾನಮಂತ್ರಿಯವರು ಹೇಳಿದರು ಮುಂದುವರೆದು ಈ ರೂಪದಲ್ಲಿ ಭಗವಂತನ ಪ್ರತಿಷ್ಠಾಪನೆಯು ಭಗವಂತನನ್ನು ಜನರು ಗುರುತಿಸುವ ಸಮಗ್ರ ಚಿತ್ರಣವನ್ನು ಪ್ರಸ್ತುತಪಡಿಸುತ್ತದೆ ಎಂದು ಹೇಳಿದರು. ಶ್ರೀ ಕಲ್ಕಿ ಧಾಮ್ ದೇವಾಲಯದ ಶಂಕುಸ್ಥಾಪನೆ ಮಾಡಲು ಅವಕಾಶವನ್ನು ನೀಡಿದ ದೇವರ ಆಶೀರ್ವಾದಕ್ಕಾಗಿ ಪ್ರಧಾನಮಂತ್ರಿಯವರು ಧನ್ಯವಾದಗಳನ್ನು ಅರ್ಪಿಸಿದರು. ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಎಲ್ಲಾ ಸಂತರಿಗೂ ಅವರ  ಮಾರ್ಗದರ್ಶನಕ್ಕಾಗಿ ನಮಿಸಿದರು ಮತ್ತು ಶ್ರೀ ಆಚಾರ್ಯ ಪ್ರಮೋದ್ ಕೃಷ್ಣಂ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಇಂದಿನ ಕಾರ್ಯಕ್ರಮವು ಭಾರತದ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಮತ್ತೊಂದು ವಿಶಿಷ್ಟ ಕ್ಷಣವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಅಯೋಧ್ಯಾಧಾಮದಲ್ಲಿ ಶ್ರೀರಾಮ ಮಂದಿರದ ಶಂಕುಸ್ಥಾಪನೆ ಮತ್ತು ಅಬುಧಾಬಿಯಲ್ಲಿ ಇತ್ತೀಚೆಗೆ ನಡೆದ ಮಂದಿರದ ಉದ್ಘಾಟನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, "ಊಹಿಸಲೂ ಅಸಾಧ್ಯವಾದದ್ದು ಈಗ ನಿಜವಾಗಿದೆ" ಎಂದು ಹೇಳಿದರು.

 

ತ್ವರಿತವಾಗಿ  ಅನುಕ್ರಮವಾಗಿ ಬರುತ್ತಿರುವ ಇಂತಹ ಘಟನೆಗಳ ಮೌಲ್ಯವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಅವರು ಆಧ್ಯಾತ್ಮಿಕ ಪುನರುತ್ಥಾನದ ಬಗ್ಗೆ ಮಾತನಾಡುವುದನ್ನು ಮುಂದುವರೆಸಿದರು ಮತ್ತು ಕಾಶಿಯಲ್ಲಿ ವಿಶ್ವನಾಥ ಧಾಮ, ಕಾಶಿಯ ರೂಪಾಂತರ, ಮಹಾಕಾಲ್ ಮಹಾಲೋಕ, ಸೋಮನಾಥ ಮತ್ತು ಕೇದಾರನಾಥ ಧಾಮಗಳ ಬಗ್ಗೆ ಪ್ರಸ್ತಾಪಿಸಿದರು. "ನಾವು ವಿಕಾಸ್ ಭಿ ವಿರಾಸತ್ ಭಿ" – “ಅಭಿವೃದ್ಧಿಯೊಂದಿಗೆ ಪರಂಪರೆ”ಯ ಮಂತ್ರದೊಂದಿಗೆ ಚಲಿಸುತ್ತಿದ್ದೇವೆ" ಎಂದು ಅವರು ಹೇಳಿದರು.

ಹೈಟೆಕ್ ನಗರ ಮೂಲಸೌಕರ್ಯಗಳೊಂದಿಗೆ ಆಧ್ಯಾತ್ಮಿಕ ಕೇಂದ್ರಗಳ ಪುನರುಜ್ಜೀವನ, ದೇವಾಲಯಗಳು, ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ, ವಿದೇಶಿ ಹೂಡಿಕೆಯೊಂದಿಗೆ ವಿದೇಶದಲ್ಲಿರುವ ಕಲಾಕೃತಿಗಳ ವಾಪಸಾತಿಯನ್ನು ಅವರು ಪುನರುಚ್ಚರಿಸಿದರು. ಇದು ಕಾಲಚಕ್ರ ಚಲಿಸುತ್ತಿದೆ ಎಂಬುದನ್ನು ಸೂಚಿಸುತ್ತದೆ ಎಂದರು.  ಅವರು ಕೆಂಪು ಕೋಟೆಯಿಂದ ನೀಡಿದ ತಮ್ಮ ಕರೆಯನ್ನು ನೆನಪಿಸಿಕೊಂಡರು - 'ಇದೇ ಸಮಯ, ಸರಿಯಾದ ಸಮಯ' ಮತ್ತು ಈ ಸಮಯದ ಆಗಮನವನ್ನು ಸ್ವೀಕರಿಸುವ ಅಗತ್ಯವನ್ನು ಒತ್ತಿ ಹೇಳಿದರು.

 

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದ ಪ್ರತಿಷ್ಠಾಪನೆ ಸಮಾರಂಭವನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು 22 ಜನವರಿ 2024 ರಿಂದ ಹೊಸ ‘ಕಾಲ ಚಕ್ರʼದ ಆರಂಭವನ್ನು ಪುನರುಚ್ಚರಿಸಿದರು ಮತ್ತು ಸಾವಿರಾರು ವರ್ಷಗಳ ಕಾಲ ನಡೆದ ಶ್ರೀರಾಮನ ಆಳ್ವಿಕೆಯ ಪರಿಣಾಮವನ್ನು ಎತ್ತಿ ತೋರಿಸಿದರು. ಅಂತೆಯೇ, ಈಗ ಬಾಲ ರಾಮ  ಕುಳಿತಿರುವಾಗ, ಭಾರತವು ತನ್ನ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದೆ, ಅಲ್ಲಿ ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ವಿಕಸಿತ  ಭಾರತದ ಸಂಕಲ್ಪವು ಕೇವಲ ಬಯಕೆಯಲ್ಲ. "ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯವು ಈ ಸಂಕಲ್ಪದಿಂದ ಪ್ರತಿ ಕಾಲಘಟ್ಟದಲ್ಲಿಯೂ ಬದುಕಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಶ್ರೀ ಕಲ್ಕಿಯ ರೂಪಗಳ ಕುರಿತು ಆಚಾರ್ಯ ಪ್ರಮೋದ್ ಕೃಷ್ಣಂ ಜಿ ಅವರ ಸಂಶೋಧನೆ ಮತ್ತು ಅಧ್ಯಯನದ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಅಂಶಗಳು ಮತ್ತು ಧರ್ಮಗ್ರಂಥಗಳ ಜ್ಞಾನವನ್ನು ಎತ್ತಿ ತೋರಿಸಿದರು ಮತ್ತು ಭಗವಾನ್ ಶ್ರೀರಾಮನಂತೆಯೇ ಕಲ್ಕಿಯ ರೂಪಗಳು ಸಾವಿರಾರು ವರ್ಷಗಳ ಭವಿಷ್ಯದ ಹಾದಿಯನ್ನು ನಿರ್ಧರಿಸುತ್ತವೆ ಎಂದು ತಿಳಿಸಿದರು.

"ಕಲ್ಕಿಯವರು ಕಾಲಚಕ್ರದಲ್ಲಿ ಬದಲಾವಣೆಯನ್ನು ಪ್ರಾರಂಭಿಸುವವರಾಗಿದ್ದಾರೆ ಮತ್ತು ಅವರು ಸ್ಫೂರ್ತಿಯ ಮೂಲವೂ ಆಗಿದ್ದಾರೆ" ಎಂದು ಪ್ರಧಾನಮಂತ್ರಿಯವರು ಹೇಳಿದರು. ಕಲ್ಕಿಧಾಮವು ಇನ್ನೂ ಅವತರಿಸಬೇಕಾದ  ಭಗವಂತನಿಗೆ ಸಮರ್ಪಿತ ಸ್ಥಳವಾಗಲಿದೆ ಎಂದು ಹೇಳಿದರು. ಭವಿಷ್ಯದ ಬಗ್ಗೆ ಇಂತಹ ಪರಿಕಲ್ಪನೆಯನ್ನು ನೂರಾರು ಸಾವಿರ ವರ್ಷಗಳ ಹಿಂದೆಯೇ ಧರ್ಮಗ್ರಂಥಗಳಲ್ಲಿ ಬರೆಯಲಾಗಿದೆ ಎಂದು ಅವರು ಒತ್ತಿ ಹೇಳಿದರು.. ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಈ ನಂಬಿಕೆಗಳನ್ನು ಪೂರ್ಣ ನಂಬಿಕೆಯಿಂದ ಮುನ್ನಡೆಸಿದ್ದಾರೆ ಮತ್ತು ಅದಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಎಂದು ಶ್ರೀ ಮೋದಿಯವರು ಶ್ಲಾಘಿಸಿದರು. ಕಲ್ಕಿ ದೇವಸ್ಥಾನದ ಸ್ಥಾಪನೆಗಾಗಿ ಹಿಂದಿನ ಸರ್ಕಾರಗಳೊಂದಿಗೆ ಆಚಾರ್ಯಜಿ ನಡೆಸಿದ ಸುದೀರ್ಘ ಹೋರಾಟದ ಬಗ್ಗೆ ಹೇಳಿದರು  ಮತ್ತು ಅದಕ್ಕಾಗಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು ಎಂದು ಅವರು ಉಲ್ಲೇಖಿಸಿದರು. ಆಚಾರ್ಯ ಜಿ ಅವರೊಂದಿಗಿನ ಅವರ ಇತ್ತೀಚಿನ ಸಂವಾದವನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, ನಾನು ಅವರನ್ನು ಮೊದಲು ರಾಜಕೀಯ ವ್ಯಕ್ತಿಯಾಗಿ ಮಾತ್ರ ತಿಳಿದಿದ್ದೆ  ಆದರೆ ಈಗ  ಧರ್ಮ ಮತ್ತು ಆಧ್ಯಾತ್ಮಿಕತೆಯ ಕಡೆಗೆ ಅವರ ಸಮರ್ಪಣೆಯ ಬಗ್ಗೆ ತಿಳಿದುಕೊಂಡಿದ್ದೇನೆ ಎಂದು ಹೇಳಿದರು. "ಇಂದು, ಪ್ರಮೋದ್ ಕೃಷ್ಣಂ ಜಿ ಅವರು ನೆಮ್ಮದಿಯಿಂದ  ದೇವಾಲಯದ ಕೆಲಸವನ್ನು ಪ್ರಾರಂಭಿಸಲು ಸಮರ್ಥರಾಗಿದ್ದಾರೆ", ಉತ್ತಮ ಭವಿಷ್ಯದ ಕಡೆಗೆ ಪ್ರಸ್ತುತ ಸರ್ಕಾರದ ಸಕಾರಾತ್ಮಕ ದೃಷ್ಟಿಕೋನಕ್ಕೆ ದೇವಾಲಯವು ಪುರಾವೆಯಾಗಲಿದೆ ಎಂದು ಪ್ರಧಾನಮಂತ್ರಿಯವರು ವಿಶ್ವಾಸ ವ್ಯಕ್ತಪಡಿಸಿದರು.

ಸೋಲಿನ ದವಡೆಯಿಂದ ಗೆಲುವನ್ನು ಕಿತ್ತುಕೊಳ್ಳುವುದು ಹೇಗೆ ಎಂಬುದು ಭಾರತಕ್ಕೆ ಗೊತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. "ಇಂದಿನ ಭಾರತದ ಅಮೃತ ಕಾಲದಲ್ಲಿ, ಭಾರತದ ಕೀರ್ತಿ,  ಔನತ್ಯ ಮತ್ತು ಶಕ್ತಿಯ ಬೀಜವು ಮೊಳಕೆಯೊಡೆಯುತ್ತಿದೆ" ಎಂದು ಅವರು ಹೇಳಿದರು.  ಮುಂದುವರೆದು ಮಾತನಾಡಿದ ಅವರು, ಸಂತರು, ಧಾರ್ಮಿಕ ಮುಖಂಡರು ಹೊಸ ದೇಗುಲ ನಿರ್ಮಾಣ ಮಾಡುತ್ತಿರುವುದರಿಂದ ಅವರಿಗ ನಾಡಿನ ದೇಗುಲ ನಿರ್ಮಾಣದ ಹೊಣೆ ವಹಿಸಿರುವುದಾಗಿ  ಹೇಳಿದರು. "ರಾಷ್ಟ್ರದ ಮಂದಿರದ ವೈಭವ ಮತ್ತು ವೈಭವದ ವಿಸ್ತರಣೆಗಾಗಿ ನಾನು ಹಗಲಿರುಳು ಶ್ರಮಿಸುತ್ತಿದ್ದೇನೆ" ಎಂದು ಅವರು ಹೇಳಿದರು. ""ಇಂದು, ಮೊದಲ ಬಾರಿಗೆ, ಭಾರತವು ನಾವು ಯಾರನ್ನು ಹಿಂಬಾಲಿಸದೆ, ನಾವೇ ಒಂದು  ದೃಷ್ಟಾಂತವಾಗುತ್ತಿರುವ ಹಂತದಲ್ಲಿರುವೆವು” ಎಂದು ಪ್ರಧಾನಮಂತ್ರಿ ಮೋದಿಯವರು ಒತ್ತಿ ಹೇಳಿದರು. ಈ ಬದ್ಧತೆಯ ಫಲಿತಾಂಶಗಳನ್ನು ಪಟ್ಟಿ ಮಾಡಿದ ಪ್ರಧಾನಮಂತ್ರಿಯವರು, ಭಾರತವು ಡಿಜಿಟಲ್ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕೇಂದ್ರವಾಗಿ ಬದಲಾಗುತ್ತಿದೆ, ಭಾರತ 5 ನೇ ಅತಿದೊಡ್ಡ ಆರ್ಥಿಕತೆಯಾಗುತ್ತಿದೆ, ಚಂದ್ರಯಾನದ ಯಶಸ್ಸು, ವಂದೇ ಭಾರತ್ ಮತ್ತು ನಮೋ ಭಾರತ್ನಂತಹ ಆಧುನಿಕ ರೈಲುಗಳು, ಮುಂಬರುವ ಬುಲೆಟ್ ರೈಲು,  ಪ್ರಬಲ  ಹೈ-ಟೆಕ್ ನೆಟ್ವರ್ಕ್ ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ವೇಗಳ ಬಗ್ಗೆ ಹೇಳಿದರು. ಈ ಸಾಧನೆಯು ಭಾರತೀಯರಿಗೆ ಹೆಮ್ಮೆಯ ಭಾವನೆ ಮೂಡಿಸುತ್ತಿದೆ ಮತ್ತು “ದೇಶದಲ್ಲಿ ಸಕಾರಾತ್ಮಕ ಚಿಂತನೆ ಮತ್ತು ವಿಶ್ವಾಸದ ಅಲೆಯು ಅದ್ಭುತವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಅದಕ್ಕಾಗಿಯೇ ಇಂದು ನಮ್ಮ ಸಾಮರ್ಥ್ಯಗಳು ಅಪರಿಮಿತವಾಗಿವೆ ಮತ್ತು ನಮಗಿರುವ ಸಾಧ್ಯತೆಗಳು ಸಹ ಅಪಾರವಾಗಿವೆ.

 

"ಸಾಮೂಹಿಕ ಮೂಲಕ ರಾಷ್ಟ್ರವು ಯಶಸ್ವಿಯಾಗಲು ಶಕ್ತಿಯನ್ನು ಪಡೆಯುತ್ತದೆ" ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಅವರು ಇಂದು ಭಾರತದಲ್ಲಿ ಭವ್ಯವಾದ ಸಾಮೂಹಿಕ ಪ್ರಜ್ಞೆಯನ್ನು ಕಂಡರು. "ಪ್ರತಿಯೊಬ್ಬ ನಾಗರಿಕರು ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಔರ್ ಸಬ್ಕಾ ಪ್ರಯಾಸ್" ಎಂಬ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

"ಒಂದು ರಾಷ್ಟ್ರವು ಸಾಮೂಹಿಕವಾಗಿ ಯಶಸ್ವಿಯಾಗುವ ಶಕ್ತಿಯನ್ನು ಹೊಂದಿದೆ" ಎಂದು ಪ್ರಧಾನಮಂತ್ರಿ ಮೋದಿಯವರು ಪ್ರತಿಪಾದಿಸಿದರು. ಅವರು ಇಂದು ಭಾರತದಲ್ಲಿ ಸಾಮೂಹಿಕ ಪ್ರಜ್ಞೆಯ ಗಾಂಭೀರ್ಯತೆಯನ್ನು ಕಂಡರು. ಪ್ರತಿಯೊಬ್ಬ ನಾಗರಿಕರೂ  “ಎಲ್ಲರ ಜೊತೆ, ಎಲ್ಲರ ವಿಕಾಸ, ಎಲ್ಲರ ವಿಶ್ವಾಸ ಮತ್ತು ಎಲ್ಲರ ಪ್ರಯತ್ನಗಳ” ಉತ್ಸಾಹದಿಂದ ಕೆಲಸ ಮಾಡುತ್ತಾರೆ ಎಂದು ಅವರು ಹೇಳಿದರು.

 

ಪ್ರಧಾನ ಮಂತ್ರಿಗಳು ಕಳೆದ 10 ವರ್ಷಗಳ ಸಾಧನೆಗಳ  ಈ  ಪಟ್ಟಿ ಮಾಡಿದರು - ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 4 ಕೋಟಿಗೂ ಹೆಚ್ಚು ಪಕ್ಕಾ ಮನೆಗಳು, 11 ಕೋಟಿ ಶೌಚಾಲಯಗಳು, 2.5 ಕೋಟಿ ಕುಟುಂಬಗಳಿಗೆ ವಿದ್ಯುತ್, 10 ಕೋಟಿಗೂ ಹೆಚ್ಚು ಮನೆಗಳಿಗೆ ಕೊಳವೆ ನೀರು, 80 ಕೋಟಿ ನಾಗರಿಕರಿಗೆ ಉಚಿತ ಪಡಿತರ, 10 ಕೋಟಿ ಮಹಿಳೆಯರಿಗೆ ಸಬ್ಸಿಡಿ ಗ್ಯಾಸ್ ಸಿಲಿಂಡರ್, 50 ಕೋಟಿ ಆಯುಷ್ಮಾನ್ ಕಾರ್ಡ್, 10 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ, ಸಾಂಕ್ರಾಮಿಕ ಸಮಯದಲ್ಲಿ ಉಚಿತ ಲಸಿಕೆ, ಸ್ವಚ್ಛ ಭಾರತ. 

ಸರ್ಕಾರದ ಕಾರ್ಯಗಳ ವೇಗ ಮತ್ತು ಪ್ರಮಾಣಕ್ಕಾಗಿ ಪ್ರಧಾನಮಂತ್ರಿಯವರು ದೇಶದ ಜನರು ಕಾರಣ ಎಂದರು. ಇಂದಿನ ಜನರು ಬಡವರಿಗೆ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುತ್ತಿದ್ದಾರೆ ಮತ್ತು ಶೇಕಡಾ 100 ರಷ್ಟು ಸಂತೃಪ್ತಿಗಾಗಿ ಅಭಿಯಾನದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಬಡವರಿಗೆ ಸೇವೆ ಸಲ್ಲಿಸುವ ಮನೋಭಾವವು ಭಾರತದ ಆಧ್ಯಾತ್ಮಿಕ ಮೌಲ್ಯಗಳಿಂದ ಬಂದಿದೆ ಎಂದು ಅವರು ಹೇಳಿದರು, ಅದು ‘ನರ್ ಮೇ ನಾರಾಯಣ’ (ನರನಲ್ಲಿ ನಾರಾಯಣ) ವನ್ನು ಪ್ರೇರೇಪಿಸುತ್ತದೆ. 'ವಿಕಸಿತ ಭಾರತವನ್ನು ನಿರ್ಮಿಸುವುದು' ಮತ್ತು 'ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುವುದು' ಎನ್ನುವ ಐದು ತತ್ವಗಳಿಗೆ ಅವರು ದೇಶಕ್ಕೆ ತಮ್ಮ ಮನವಿಯನ್ನು ಪುನರುಚ್ಚರಿಸಿದರು.

"ಭಾರತವು ದೊಡ್ಡ ನಿರ್ಣಯಗಳನ್ನು ತೆಗೆದುಕೊಳ್ಳುವಾಗ, ದೈವಿಕ ಪ್ರಜ್ಞೆಯು ಖಂಡಿತವಾಗಿಯೂ ನಮ್ಮಲ್ಲಿ ಯಾವುದಾದರೂ ರೂಪದಲ್ಲಿ ಅಥವಾ ಇನ್ನೊಂದರಲ್ಲಿ ಮಾರ್ಗದರ್ಶನ ನೀಡುತ್ತದೆ" ಎಂದು ಪ್ರಧಾನಮಂತ್ರಿ ಹೇಳಿದರು. ಭಗವದ್ ಗೀತೆಯ ತತ್ವವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು ನಿರಂತರ  ಕೆಲಸದ  ಅಗತ್ಯವನ್ನು ಒತ್ತಿ ಹೇಳಿದರು. “ಈ ‘ಕರ್ತವ್ಯ ಕಾಲ’ದಲ್ಲಿ ಮುಂದಿನ 25 ವರ್ಷಗಳ ಕಾಲ ನಾವು ಕಠಿಣ ಪರಿಶ್ರಮದ ಉತ್ತುಂಗವನ್ನು ಸಾಧಿಸಬೇಕಾಗಿದೆ. ದೇಶ ಸೇವೆಯನ್ನು ಮುಂಚೂಣಿಯಲ್ಲಿಟ್ಟುಕೊಂಡು ನಿಸ್ವಾರ್ಥದಿಂದ ಕೆಲಸ ಮಾಡಬೇಕು. ನಮ್ಮ ಪ್ರತಿಯೊಂದು ಪ್ರಯತ್ನದಿಂದ ರಾಷ್ಟ್ರಕ್ಕೆ ಏನು ಪ್ರಯೋಜನ? ಈ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಮೊದಲು ಬರಬೇಕು. ಈ ಪ್ರಶ್ನೆಯು ರಾಷ್ಟ್ರದ ಸಾಮೂಹಿಕ ಸವಾಲುಗಳಿಗೆ ಪರಿಹಾರಗಳನ್ನು ನೀಡುತ್ತದೆ” ಎಂದು ಹೇಳಿ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. 

ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಮತ್ತು ಶ್ರೀ ಕಲ್ಕಿಧಾಮದ ಪೀಠಾಧೀಶ್ವರರಾದ ಆಚಾರ್ಯ ಪ್ರಮೋದ್ ಕೃಷ್ಣಂ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
5 Days, 31 World Leaders & 31 Bilaterals: Decoding PM Modi's Diplomatic Blitzkrieg

Media Coverage

5 Days, 31 World Leaders & 31 Bilaterals: Decoding PM Modi's Diplomatic Blitzkrieg
NM on the go

Nm on the go

Always be the first to hear from the PM. Get the App Now!
...
Prime Minister urges the Indian Diaspora to participate in Bharat Ko Janiye Quiz
November 23, 2024

The Prime Minister Shri Narendra Modi today urged the Indian Diaspora and friends from other countries to participate in Bharat Ko Janiye (Know India) Quiz. He remarked that the quiz deepens the connect between India and its diaspora worldwide and was also a wonderful way to rediscover our rich heritage and vibrant culture.

He posted a message on X:

“Strengthening the bond with our diaspora!

Urge Indian community abroad and friends from other countries  to take part in the #BharatKoJaniye Quiz!

bkjquiz.com

This quiz deepens the connect between India and its diaspora worldwide. It’s also a wonderful way to rediscover our rich heritage and vibrant culture.

The winners will get an opportunity to experience the wonders of #IncredibleIndia.”