ಸುಮಾರು 16 ಲಕ್ಷ ಮಹಿಳಾ ಸದಸ್ಯೆಯರಿಗೆ ಅನುಕೂಲವಾಗುವಂತೆ ಸ್ವಸಹಾಯ ಗುಂಪುಗಳಿಗೆ 1000 ಕೋಟಿ ರೂ. ವರ್ಗಾವಣೆ ಮಾಡಿದ ಪ್ರಧಾನಿ
ವ್ಯವಹಾರಿಕ ಪ್ರತಿನಿಧಿ- ಸಖಿಗಳಿಗೆ ಮೊದಲ ತಿಂಗಳ ಸ್ಟೈಫಂಡ್ ಮತ್ತು ಮುಖ್ಯಮಂತ್ರಿ ಕನ್ಯಾ ಸುಮಂಗಲಾ ಯೋಜನೆಯಡಿ ಸುಮಾರು 1 ಲಕ್ಷ ಫಲಾನುಭವಿಗಳಿಗೆ ನಗದು ವರ್ಗಾವಣೆ ಮಾಡಿದ ಪ್ರಧಾನಿ
ಸುಮಾರು 200 ಪೂರಕ ಪೌಷ್ಟಿಕಾಂಶ ಉತ್ಪಾದನಾ ಘಟಕಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ
“ಮುಖ್ಯಮಂತ್ರಿ ಕನ್ಯಾ ಸುಮಂಗಲಾ ಯೋಜನೆಯಂತಕ ಕಾರ್ಯಕ್ರಮಗಳು ಗ್ರಾಮೀಣ ಬಡವರು ಮತ್ತು ಹೆಣ್ಣುಮಕ್ಕಳಿಗೆ ಉತ್ತಮ ನಂಬಿಕೆಯ ಮಾಧ್ಯಮವಾಗಿವೆ”
“ಉತ್ತರ ಪ್ರದೇಶದ ಮಹಿಳೆಯರಿಗೆ ಡಬಲ್ ಎಂಜಿನ್ ಸರ್ಕಾರದಿಂದ ಅಭೂತಪೂರ್ವ ಭದ್ರತೆ, ಘನತೆ ಮತ್ತು ಗೌರವ ಖಾತ್ರಿಪಡಿಸಲಾಗಿದೆ. ಉತ್ತರ ಪ್ರದೇಶದ ಮಹಿಳೆಯರು ಹಿಂದೆ ಇದ್ದಂತಹ ಪರಿಸ್ಥಿತಿ ಮತ್ತೆ ವಾಪಸ್ಸಾಗಲು ಬಿಡಬಾರದೆಂದು ನಿರ್ಧರಿಸಿದ್ದಾರೆ”
“ನಾನು ಮಹಿಳಾ ಸ್ವ-ಸಹಾಯ ಗುಂಪುಗಳ ಸಹೋದರಿಯರನ್ನು ಆತ್ಮನಿರ್ಭರ ಭಾರತದ ಚಾಂಪಿಯನ್ ಗಳೆಂದು ಪರಿಗಣಿಸುತ್ತೇನೆ. ಈ ಸ್ವ ಸಹಾಯ ಗುಂಪುಗಳು ವಾಸ್ತವವಾಗಿ ರಾಷ್ಟ್ರೀಯ ಸಹಾಯ ಗುಂಪುಗಳು”
“ಹೆಣ್ಣುಮಕ್ಕಳು ತಮ್ಮ ಅಧ್ಯಯನವನ್ನು ಮುಂದುವರಿಸಲು ಮತ್ತು ಸಮಾನ ಅವಕಾಶಗಳನ್ನು ಪಡೆಯಲು ಸಮಯ ಬೇಕೆಂದು ಬಯಸಿದ್ದರು. ಆದ್ದರಿಂದ ಹೆಣ್ಣುಮಕ್ಕಳ ಮದುವೆಯ ಕಾನೂನುಬದ್ಧ ವಯಸ್ಸನ್ನು 21ಕ್ಕೆ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಹೆಣ್ಣುಮಕ್ಕಳ ಹಿತದೃಷ್ಟಿಯಿಂದಲೇ ದೇಶ ಇಂತಹುದೊಂದು ನಿರ್ಧಾರ ಕೈಗೊಳ್ಳುತ್ತಿದೆ”
“ಮಾಫಿಯಾ ರಾಜ್ ಮತ್ತು ಅರಾಜಕತೆಯ ನಿರ್ಮೂಲನೆಯ ಬಹುದೊಡ್ಡ ಫಲಾನುಭವಿ ಎಂದರೆ ನಮ್ಮ ಉತ್ತರ ಪ್ರದೇಶದ ಹೆಣ್ಣುಮಕ್ಕಳು ಮತ್ತು ಸಹೋದರಿಯರು”

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಪ್ರಯಾಗ್ ರಾಜ್‌ಗೆ ಭೇಟಿ ನೀಡಿದ್ದರು ಮತ್ತು ಮಹಿಳಾ ಸಬಲೀಕರಣ ವಿಶೇಷವಾಗಿ ತಳಮಟ್ಟದ ಮಹಿಳೆಯರ ಸಬೀಕರಣ ಕುರಿತಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರು ಸುಮಾರು 16 ಲಕ್ಷ ಮಹಿಳಾ ಸದಸ್ಯೆಯರಿಗೆ ಅನುಕೂಲವಾಗುವಂತೆ ಸ್ವಸಹಾಯ ಗುಂಪುಗಳಿಗೆ 1000 ಕೋಟಿ ರೂ. ವರ್ಗಾವಣೆ ಮಾಡಿದರು. 

ಈ ವರ್ಗಾವಣೆಯನ್ನು ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈ-ಎನ್ ಆರ್ ಎಲ್ ಎಂ) ಅಡಿಯಲ್ಲಿ ಮಾಡಲಾಯಿತು, ಸುಮಾರು 80 ಸಾವಿರ ಎಸ್ ಎಚ್ ಜಿಗಳಿಗೆ ಪ್ರತಿ ಎಸ್ ಎಚ್ ಜಿಗಳಿಗೆ ತಲಾ 1.10 ಲಕ್ಷ ರೂ. ಸಮುದಾಯ ಹೂಡಿಕೆ ನಿಧಿ (ಸಿಐಎಫ್ ) ಮತ್ತು 60,000 ಎಸ್ ಎಚ್ ಜಿಗಳಿಗೆ ತಲಾ 15,000 ರೂ. ಆವರ್ತ ನಿಧಿ ಸ್ವೀಕರಿಸಲಿವೆ. ಅಲ್ಲದೆ, ಪ್ರಧಾನಮಂತ್ರಿ ವ್ಯವಹಾರಿಕ ಪ್ರತಿನಿಧಿ- ಸಖಿ (ಬಿ.ಸಿ- ಸಖಿ)ಗಳನ್ನು ಉತ್ತೇಜಿಸಲು  ಸುಮಾರು 20,000 ಬಿ.ಸಿ-ಸಖಿಗಳಿಗೆ ಮೊದಲ ತಿಂಗಳ ಸ್ಟೈಫಂಡ್ ತಲಾ 4,000 ರೂ.ಗಳನ್ನು ವರ್ಗಾವಣೆ ಮಾಡುವ ಕಾರ್ಯಕ್ರಮಕ್ಕೂ ಸಾಕ್ಷಿಯಾದರು. ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿ ಅವರು, ಮುಖ್ಯಮಂತ್ರಿ ಕನ್ಯಾ ಸುಮಂಗಲಾ ಯೋಜನೆಯಡಿ 1ಲಕ್ಷ ರೂ. ಅಧಿಕ ಫಲಾನುಭವಿಗಳಿಗೆ ಸುಮಾರು 20 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದರು. ಇದೇ ವೇಳೆ ಪ್ರಧಾನಮಂತ್ರಿ ಅವರು 202 ಪೂರಕ ಪೌಷ್ಟಿಕಾಂಶ ಉತ್ಪಾದನಾ ಘಟಕಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಹಿಂದಿ ಸಾಹಿತಿ ಆಚಾರ್ಯ ಮಹಾವೀರ್ ಪ್ರಸಾದ್ ದ್ವಿವೇದಿ ಅವರ ಪುಣ್ಯತಿಥಿಯ ಅಂಗವಾಗಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಸಾವಿರಾರು ವರ್ಷಗಳಿಂದ ನಮ್ಮ ಮಾತೃಶಕ್ತಿಯ ಪ್ರತೀಕವಾದ ಗಂಗಾ-ಯಮುನಾ-ಸರಸ್ವತಿಯ ಸಂಗಮ ಭೂಮಿ ಪ್ರಯಾಗ್ ರಾಜ್ ಎಂದು ಹೇಳಿದರು. ಇಂದು ಈ ಪವಿತ್ರ ಯಾತ್ರಾ ನಗರಿಯೂ ಸ್ತ್ರೀ ಶಕ್ತಿಯ ಅದ್ಬುತ ಸಂಗಮಕ್ಕೆ ಸಾಕ್ಷಿಯಾಗಿದೆ ಎಂದರು.

ಉತ್ತರ ಪ್ರದೇಶದಲ್ಲಿ ಮಹಿಳಾ ಸಬಲೀಕರಣಕ್ಕೆ ಮಾಡುತ್ತಿರುವ ಕೆಲಸಗಳಿಗೆ ಇಡೀ ದೇಶವೇ ಸಾಕ್ಷಿಯಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಮುಖ್ಯಮಂತ್ರಿ ಕನ್ಯಾ ಸುಮಂಗಲಾ ಯೋಜನೆಯಡಿ ಇಂದು ರಾಜ್ಯದ ಸುಮಾರು 1 ಲಕ್ಷ ಫಲಾನುಭವಿ ಹೆಣ್ಣುಮಕ್ಕಳ ಖಾತೆಗಳಿಗೆ ಕೋಟ್ಯಾಂತರ ರೂಪಾಯಿಗಳನ್ನು ವರ್ಗಾಯಿಸಲಾಗಿದೆ, ಇದು ಗ್ರಾಮೀಣ ಬಡವರು ಮತ್ತು ಹೆಣ್ಣುಮಕ್ಕಳಿಗೆ ನಂಬಿಕೆಯ ಉತ್ತಮ ಮಾಧ್ಯಮವಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

 “ಉತ್ತರ ಪ್ರದೇಶದ ಮಹಿಳೆಯರಿಗೆ ಡಬಲ್ ಎಂಜಿನ್ ಸರ್ಕಾರದಿಂದ ಅಭೂತಪೂರ್ವ ಭದ್ರತೆ, ಘನತೆ ಮತ್ತು ಗೌರವ ಖಾತ್ರಿಪಡಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಉತ್ತರ ಪ್ರದೇಶದ ಮಹಿಳೆಯರು ಹಿಂದೆ ಇದ್ದಂತಹ ಪರಿಸ್ಥಿತಿ ಮತ್ತೆ ವಾಪಸ್ಸಾಗಲು ಬಿಡಬಾರದೆಂದು ನಿರ್ಧರಿಸಿದ್ದಾರೆ ಎಂದು ಪ್ರಧಾನಿ ತಿಳಿಸಿದರು. ಬೇಟಿ ಬಚಾವೋ ಬೇಟಿ ಪಢಾವೋ ಅಭಿಯಾನದ ಮೂಲಕ ಆಯ್ದ ಲಿಂಗ ಗರ್ಭಪಾತಗಳನ್ನು ತಡೆಯಲು ಸಮಾಜದ ಪ್ರಜ್ಞೆಯನ್ನು ಜಾಗೃತಗೊಳಿಸಲು ಸರ್ಕಾರ ಪ್ರಯತ್ನಿಸಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಇದರ ಪರಿಣಾಮವಾಗಿ ಹಲವು ರಾಜ್ಯಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಗಣನೀಯವಾಗಿ ವೃದ್ಧಿಯಾಗಿದೆ ಎಂದು ಹೇಳಿದರು. ಗರ್ಭಿಣಿಯರಿಗೆ ರೋಗನಿರೋಧಕ ಶಕ್ತಿ ಹೆಚ್ಚಳ, ಆಸ್ಪತ್ರೆಗಳಲ್ಲಿಗೆ ಹೆರಿಗೆ ಮತ್ತು ಗರ್ಭ ಧರಿಸಿರುವ ಅವಧಿಯಲ್ಲಿ ಪೌಷ್ಟಿಕಾಂಶಕ್ಕೆ ಹೆಚ್ಚಿನ ಒತ್ತನ್ನು ಸರ್ಕಾರ ನೀಡಿದೆ ಎಂದು ಪ್ರಧಾನಮಂತ್ರಿ ಹೇಳಿದರು.  ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಮಹಿಳೆಯರಿಗೆ ಗರ್ಭಧರಿಸಿದ ಅವಧಿಯಲ್ಲಿ ತಾವು ಉತ್ತಮ ಆಹಾರ ಸೇವನೆಗೆ ಅನುಕೂಲವಾಗುವಂತೆ ತಲಾ 5,000 ರೂ.ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದರು.

ಮಹಿಳೆಯರ ಘನತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಹಲವು ಕ್ರಮಗಳನ್ನು ಪ್ರಧಾನಮಂತ್ರಿ ಅವರು ವಿವರಿಸಿದರು. ಸಚ್ಛ ಭಾರತ್ ಮಿಷನ್ ಅಡಿ ಕೋಟ್ಯಾಂತರ ಶೌಚಾಲಯಗಳನ್ನು ನಿರ್ಮಿಸಲಾಗಿದೆ, ಉಜ್ವಲಾ ಯೋಜನೆಯಡಿ ಅನಿಲ ಸಂಪರ್ಕ ಸೌಕರ್ಯ ಕಲ್ಪಿಸಲಾಗಿದೆ ಮತ್ತು ಮನೆಯೊಳಗೆ ನಲ್ಲಿ ಮೂಲಕ ನೀರು ಪೂರೈಸಲಾಗುತ್ತಿದೆ, ಇದರಿಂದ ಸಹೋದರ ಜೀವನದಲ್ಲಿ ಹೊಸ ಹೊಸ ಅನುಕೂಲಗಳನ್ನು ಮಾಡಿಕೊಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ದಶಕಗಳವರೆಗೆ ಮನೆ ಮತ್ತು ಆಸ್ತಿ ಕೇವಲ ಪುರುಷರ ಹಕ್ಕು ಎಂದು ಪರಿಗಣಿಸಲಾಗಿತ್ತೆಂದು ಪ್ರಧಾನಮಂತ್ರಿ ಹೇಳಿದರು. ಸರ್ಕಾರ ಯೋಜನೆಗಳ ಮೂಲಕ ಅಸಮಾನತೆಯನ್ನು ನಿವಾರಸಲಾಗುತ್ತಿದೆ ಎಂದು ಅವರು ತಿಳಿಸಿದರು. ಪ್ರಧಾನಮಂತ್ರಿ ಆವಾಸ್ ಯೋಜನೆ ಇದಕ್ಕೆ ದೊಡ್ಡ ಉದಾಹರಣೆಯಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆಗಳನ್ನು ಆದ್ಯತೆ ಮೇರೆಗೆ ಹೆಣ್ಣು ಮಕ್ಕಳ ಹೆಸರಿನಲ್ಲಿಯೇ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು. ಉದ್ಯೋಗ ಮತ್ತು ಕುಟುಂಬದ ಆದಾಯವನ್ನು ಹೆಚ್ಚಿಸುವ ಯೋಜನೆಗಳಲ್ಲಿ ಮಹಿಳೆಯರನ್ನು ಸಮಾನ ಪಾಲುದಾರರನ್ನಾಗಿ ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ಮುದ್ರಾ ಯೋಜನೆಯಡಿ, ಗ್ರಾಮಗಳ ಬಡ ಕುಟುಂಬದ ಹೊಸ ಮಹಿಳಾ ಉದ್ಯಮಿಗಳನ್ನೂ ಸಹ ಪ್ರೊತ್ಸಾಹಿಸಲಾಗುತ್ತಿದೆ. ದೀನ್ ದಯಾಳ್ ಅಂತ್ಯೋದಯ ಯೋಜನೆ ಮೂಲಕ ದೇಶಾದ್ಯಂತ ಸ್ವಸಹಾಯ ಗುಂಪುಗಳು ಮತ್ತು ಗ್ರಾಮೀಣ ಸಂಸ್ಥೆಗಳೊಂದಿಗೆ ಮಹಿಳೆಯರನ್ನು ಸಂಪರ್ಕಿಸಲಾಗುತ್ತಿದೆ ಎಂದು ಅವರು ಹೇಳಿದರು. “ನಾನು ಮಹಿಳಾ ಸ್ವ-ಸಹಾಯ ಗುಂಪುಗಳ ಸಹೋದರಿಯರನ್ನು ಆತ್ಮನಿರ್ಭರ ಭಾರತದ ಚಾಂಪಿಯನ್ ಗಳೆಂದು ಪರಿಗಣಿಸುತ್ತೇನೆ. ಈ ಸ್ವ ಸಹಾಯ ಗುಂಪುಗಳು ವಾಸ್ತವವಾಗಿ ರಾಷ್ಟ್ರೀಯ ಸಹಾಯ ಗುಂಪುಗಳು” ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು.

ಯಾವುದೇ ತಾರತಮ್ಯವಿಲ್ಲದೆ ಹೆಣ್ಣುಮಕ್ಕಳ ಭವಿಷ್ಯವನ್ನು ಸಬಲೀಕರಣಗೊಳಿಸಲು ಡಬಲ್ ಎಂಜಿನ್ ಸರ್ಕಾರ ಅವಿರತವಾಗಿ ಶ್ರಮಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಹೆಣ್ಣುಮಕ್ಕಳ ವಿವಾಹದ ಕಾನೂನು ಬದ್ಧ ವಯಸ್ಸಿನ ಬಗ್ಗೆ ಮಹತ್ವದ ನಿರ್ಧಾರವನ್ನು ಅವರು ತಿಳಿಸಿದರು. “ಮೊದಲು ಗಂಡು ಮಕ್ಕಳ ವಿವಾಹಕ್ಕೆ ಕಾನೂನು ಬದ್ಧ ವಯಸ್ಸು 21 ಇತ್ತು, ಹೆಣ್ಣುಮಕ್ಕಳಿಗೆ 18 ವರ್ಷವಿತ್ತು. ಹೆಣ್ಣುಮಕ್ಕಳೂ ಸಹ ತಮ್ಮ ಅಧ್ಯಯನಗಳನ್ನು ಮುಂದುವರಿಸಲು ಮತ್ತು ಸಮಾನ ಅವಕಾಶಗಳನ್ನು ಪಡೆಯಲು ಸಮಯಬೇಕೆಂದು ಬಯಸಿದ್ದರು. ಆದ್ಧರಿಂದ  ಹೆಣ್ಣುಮಕ್ಕಳ ವಿವಾಹಕ್ಕೆ ಕಾನೂನು ಬದ್ಧ ವಯಸ್ಸನ್ನು 21ಕ್ಕೆ ಏರಿಸಲು ಪ್ರಯತ್ನಗಳು ನಡೆಯುತ್ತಿವೆ. ಹೆಣ್ಣು ಮಕ್ಕಳ ಹಿತದೃಷ್ಟಿಯಿಂದಲೇ ದೇಶ ಇಂತಹ ನಿರ್ಧಾರ ಕೈಗೊಳ್ಳುತ್ತಿದೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆಯಾಗಿರುವುದನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. ಮಾಫಿಯಾ ರಾಜ್ ಮತ್ತು ಅರಾಜಕತೆ ನಿರ್ಮೂಲನೆಯ ಬಹುದೊಡ್ಡ ಫಲಾನುಭವಿಗಳೆಂದರೆ ನಮ್ಮ ಉತ್ತರಪ್ರದೇಶದ ಹೆಣ್ಣುಮಕ್ಕಳು ಎಂದು ಅವರು ಹೇಳಿದರು. ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

“ಇಂದು ಉತ್ತರ ಪ್ರದೇಶದಲ್ಲಿ ಭದ್ರತೆ ಮತ್ತು ಹಕ್ಕುಗಳು ಎರಡೂ ಇವೆ. ಇಂದು ಉತ್ತರ ಪ್ರದೇಶದಲ್ಲಿ ಸಾಧ್ಯತೆಗಳು ಮತ್ತು ವ್ಯವಹಾರಕ್ಕೆ ಅವಕಾಶಗಳೂ ಇವೆ. ನಮ್ಮ ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದದಿಂದ, ಯಾರೊಬ್ಬರೂ ಈ ನವ ಉತ್ತರಪ್ರದೇಶವನ್ನು ಮತ್ತೆ  ಕತ್ತಲೆಗೆ ದೂಡಲು ಸಾಧ್ಯವಿಲ್ಲವೆಂಬ ಬಲವಾದ ನಂಬಿಕೆ ನನಗಿದೆ“ಎಂದು ಪ್ರಧಾನಮಂತ್ರಿ ಹೇಳಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s coffee exports zoom 45% to record $1.68 billion in 2024 on high global prices, demand

Media Coverage

India’s coffee exports zoom 45% to record $1.68 billion in 2024 on high global prices, demand
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 4 ಜನವರಿ 2025
January 04, 2025

Empowering by Transforming Lives: PM Modi’s Commitment to Delivery on Promises