ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾಮಿತ್ವ ಯೋಜನೆ ಅಡಿಯಲ್ಲಿ ಆಸ್ತಿಗಳ ಕಾರ್ಡ್ ಗಳ ಭೌತಿಕ ವಿತರಣೆಗೆ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು ಮತ್ತು ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.
ಪ್ರಧಾನಮಂತ್ರಿಯವರು ತಮ್ಮ ಮನೆಗಳಿಗೆ ಇಂದು ಆಸ್ತಿಯ ಕಾರ್ಡ್ ಪಡೆದ ಸ್ವಾಮಿತ್ವ ಯೋಜನೆಯ ಫಲಾನುಭವಿಗಳಿಗೆ ಶುಭ ಕೋರಿ, ಈಗ ಫಲಾನುಭವಿಗಳಿಗೆ ತಮ್ಮ ಹಕ್ಕು ಮತ್ತು ಮನೆಯ ಒಡೆತನದ ಕಾನೂನುಬದ್ಧ ದಸ್ತಾವೇಜು ದೊರೆತಂತಾಗಿದೆ ಎಂದರು. ಈ ಯೋಜನೆ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಐತಿಹಾಸಿಕ ಬದಲಾವಣೆ ತರಲಿದೆ ಎಂದರು. ಆತ್ಮನಿರ್ಭರ ಭಾರತದ ನಿಟ್ಟಿನಲ್ಲಿ ದೇಶ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಈ ಯೋಜನೆ ಗ್ರಾಮೀಣ ಭಾರತ ಸ್ವಾವಲಂಬಿಯಾಗಲು ನೆರವಾಗಲಿದೆ ಎಂದರು.
ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಒಂದು ಲಕ್ಷ ಫಲಾನುಭವಿಗಳಿಗೆ ಇಂದು ಅವರ ಮನೆಗಳ ಕಾನೂನಾತ್ಮಕ ದಾಖಲೆಗಳನ್ನು ಹಸ್ತಾಂತರಿಸಲಾಗುತ್ತಿದೆ ಎಂದ ಪ್ರಧಾನಮಂತ್ರಿಯವರು, ಅಂಥ ಸ್ವತ್ತಿನ ಕಾರ್ಡ್ ಗಳನ್ನು ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ದೇಶದ ಪ್ರತಿಯೊಂದು ಗ್ರಾಮದ ಮನೆಗಳಿಗೂ ನೀಡುವ ಭರವಸೆ ನೀಡಿದರು.
ದೇಶದ ಇಬ್ಬರು ಮಹಾಪುರುಷರಾದ ಜಯಪ್ರಕಾಶ್ ನಾರಾಯಣ್ ಮತ್ತು ನಾನಾಜಿ ದೇಶ್ ಮುಖ್ ಅವರ ಜಯಂತಿಯಂದು ಈ ಸ್ವತ್ತಿನ ಕಾರ್ಡ್ ವಿತರಿಸುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. ಈ ಇಬ್ಬರು ನಾಯಕರ ಜನ್ಮ ದಿನ ಒಂದೇ ದಿನ ಬರುವುದಷ್ಟೇ ಅಲ್ಲ, ಅವರಿಬ್ಬರ ಆದರ್ಶಗಳು, ಹೋರಾಟವೂ ಒಂದೇ ರೀತಿಯಲ್ಲಿತ್ತು ಎಂದರು. ನಾನಾಜಿ ಮತ್ತು ಜೆಪಿ ಅವರಿಬ್ಬರೂ ತಮ್ಮ ಇಡೀ ಜೀವನವನ್ನು ಗ್ರಾಮೀಣ ಭಾರತ ಮತ್ತು ಬಡವರ ಸಬಲೀಕರಣಕ್ಕೆ ಮೀಸಲಿಟ್ಟಿದ್ದರು ಎಂದು ಸ್ಮರಿಸಿದರು.
"ಹಳ್ಳಿಯ ಜನರು ವಿವಾದಗಳಲ್ಲಿ ಸಿಲುಕಿಕೊಂಡಾಗ, ಅವರು ತಮ್ಮನ್ನು ಅಥವಾ ಸಮಾಜವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುವುದಿಲ್ಲ" ಎಂಬ ನಾನಾಜಿಯವರ ಮಾತುಗಳನ್ನು ಸ್ಮರಿಸಿದ ಶ್ರೀ ಮೋದಿ, ನಮ್ಮ ಹಳ್ಳಿಗಳಲ್ಲಿ ಅನೇಕ ವಿವಾದಗಳನ್ನು ಕೊನೆಗೊಳಿಸಲು ಮಾಲೀಕತ್ವದ ಈ ಕಾರ್ಡ್ ಒಂದು ಉತ್ತಮ ಮಾಧ್ಯಮವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಭೂಮಿಯ ಮತ್ತು ಮನೆಯ ಒಡೆತನವು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ಹೇಳಿದರು. ಸ್ವತ್ತಿನ ದಾಖಲೆ ಇದ್ದಾಗ, ಜನರಲ್ಲಿ ವಿಶ್ವಾಸ ಇರುತ್ತದೆ ಮತ್ತು ಹೂಡಿಕೆಯ ಹೊಸ ದಾರಿ ತೆರೆದುಕೊಳ್ಳುತ್ತದೆ ಎಂದರು. ಸ್ವತ್ತಿನ ದಾಖಲೆಗಳ ಮೇಲೆ ಬ್ಯಾಂಕ್ ಗಳಿಂದ ಸುಲಭವಾಗಿ ಸಾಲ ದೊರಕುತ್ತದೆ, ಸ್ವಯಂ ಉದ್ಯೋಗ ಮತ್ತು ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತವೆ ಎಂದರು. ಕಷ್ಟದ ಸಂಗತಿಯೆಂದರೆ ಇಂದು ಜಗತ್ತಿನ ಮೂರನೇ ಒಂದು ಭಾಗದ ಜನಸಂಖ್ಯೆ ಮಾತ್ರ ತಮ್ಮ ಸ್ವತ್ತಿನ ಕಾನೂನುಬದ್ಧ ದಾಖಲೆ ಹೊಂದಿದ್ದಾರೆ. ಆಸ್ತಿ ಕಾರ್ಡ್ ಗ್ರಾಮಸ್ಥರಿಗೆ ಯಾವುದೇ ವಿವಾದವಿಲ್ಲದೆ ಆಸ್ತಿ ಖರೀದಿಸುವ ಮತ್ತು ಮಾರಾಟ ಮಾಡುವ ಮಾರ್ಗವನ್ನು ಮುಕ್ತಗೊಳಿಸುತ್ತದೆ ಎಂದು ಅವರು ಹೇಳಿದರು. ಇಂದು ಹಳ್ಳಿಯಲ್ಲಿರುವ ಅನೇಕ ಯುವಕರನ್ನು ನಾವು ಹೊಂದಿದ್ದೇವೆ, ಅವರು ಸ್ವಂತವಾಗಿ ಏನನ್ನಾದರೂ ಮಾಡಲು ಬಯಸುತ್ತಾರೆ. ಆಸ್ತಿ ಕಾರ್ಡ್ ಪಡೆದ ನಂತರ, ಬ್ಯಾಂಕುಗಳಿಂದ ಅವರ ಮನೆಗಳ ಮೇಲೆ ಸುಲಭವಾಗಿ ಸಾಲ ಪಡೆಯುವುದನ್ನು ಖಾತ್ರಿಪಡಿಸಬಹುದು ಎಂದರು. ಹೊಸ ತಂತ್ರಜ್ಞಾನ ಅಂದರೆ ಡ್ರೋನ್ ಬಳಸಿ ಮ್ಯಾಪಿಂಗ್ ಮತ್ತು ಭೂಮಾಪನ ಮಾಡುವುದರಿಂದ ನಿಖರವಾದ ಭೂ ದಾಖಲೆಗಳನ್ನು ಗ್ರಾಮಗಳಲ್ಲಿ ರೂಪಿಸಬಹುದು. ನಿಖರವಾದ ಭೂ ದಾಖಲೆಗಳಿಂದ ಗ್ರಾಮಗಳಲ್ಲಿ ಅಭಿವೃದ್ಧಿ ಸಂಬಂಧಿತ ಕಾಮಗಾರಿಗಳು ಸಹ ಸುಲಭವಾಗುತ್ತವೆ. ಇದು ಈ ಸ್ವತ್ತಿನ ಕಾರ್ಡ್ ಗಳ ಮತ್ತೊಂದು ಪ್ರಯೋಜನ ಎಂದರು.
ಪ್ರಧಾನಮಂತ್ರಿಯವರು ಸ್ವಾಮಿತ್ವ ಯೋಜನೆ ಪಂಚಾಯತಿ ರಾಜ್ ವ್ಯವಸ್ಥೆಯನ್ನು ಬಲಪಡಿಸಲು ನೆರವಾಗುತ್ತದೆ, ಈ ನಿಟ್ಟಿನಲ್ಲಿ ಕಳೆದ ಆರು ವರ್ಷಗಳಿಂದ ಪ್ರಯತ್ನ ಸಾಗಿದೆ ಎಂದರು. ಗ್ರಾಮ ಪಂಚಾಯ್ತಿಗಳ ಸಬಲೀಕರಣಕ್ಕೆ ಕಳೆದ ಆರು ವರ್ಷಗಳಿಂದ ಕೈಗೊಂಡಿರುವ ಕ್ರಮಗಳನ್ನು ಪಟ್ಟಿ ಮಾಡಿದ ಅವರು, ಸ್ವಾಮಿತ್ವ ಯೋಜನೆಯು ನಮ್ಮ ಗ್ರಾಮ ಪಂಚಾಯಿತಿಗಳಿಗೆ, ಪುರಸಭೆಗಳು ಮತ್ತು ನಗರಸಭೆಗಳಿಗೆ ವ್ಯವಸ್ಥಿತ ರೀತಿಯಲ್ಲಿ ಗ್ರಾಮ ನಿರ್ವಹಣೆ ಮಾಡಲು ಸುಗಮಗೊಳಿಸುತ್ತದೆ ಎಂದರು. ಕಳೆದ 6 ವರ್ಷಗಳಲ್ಲಿ ಹಳ್ಳಿಗಳಲ್ಲಿನ ದೀರ್ಘಕಾಲದ ಕೊರತೆಯನ್ನು ನೀಗಿಸಲು ನಿರಂತರ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಬಂದ 70 ವರ್ಷಗಳಲ್ಲಿ ಆಗದಷ್ಟು ಅಭೂತಪೂರ್ವವಾದ ಅಭಿವೃದ್ಧಿ ಕಳೆದ ಆರು ವರ್ಷಗಳಲ್ಲಿ ಆಗಿದೆ ಎಂದು ಅವರು ಹೇಳಿದರು. ಬ್ಯಾಂಕ್ ಖಾತೆ, ವಿದ್ಯುತ್ ಸಂಪರ್ಕ, ಶೌಚಾಲಯದ ಲಭ್ಯತೆ, ಅನಿಲ ಸಂಪರ್ಕ, ಪಕ್ಕಾ ಮನೆ ಮತ್ತು ಕೊಳವೆಯ ಮೂಲಕ ಕುಡಿಯುವ ನೀರು ಸೇರಿದಂತೆ ಕಳೆದ ಆರು ವರ್ಷಗಳಲ್ಲಿ ಗ್ರಾಮೀಣ ಜನರು ಪಡೆದುಕೊಂಡಿರುವ ಸೌಲಭ್ಯಗಳ ಪಟ್ಟಿ ಮಾಡಿದರು. ಆಪ್ಟಿಕಲ್ ಫೈಬರ್ ಜಾಲದ ಮೂಲಕ ದೇಶದ ಎಲ್ಲ ಗ್ರಾಮಗಳನ್ನೂ ಸಂಪರ್ಕಿಸುವ ಪ್ರಮುಖ ಅಭಿಯಾನ ತ್ವರಿತಗತಿಯಲ್ಲಿ ಸಾಗಿದೆ ಎಂದರು.
ನಮ್ಮ ರೈತರು ಸ್ವಾವಲಂಬಿಗಳಾಗುವುದನ್ನು ಬಯಸದವರಿಗೆ ಕೃಷಿ ವಲಯದಲ್ಲಿನ ಸುಧಾರಣೆಗಳ ಬಗ್ಗೆ ತಕರಾರಿದೆ ಎಂದು ಪ್ರತಿಪಕ್ಷಗಳನ್ನು ಪ್ರಧಾನಮಂತ್ರಿಯವರು ದೂಷಿಸಿದರು. ಸಣ್ಣ ರೈತರು, ದನಗಾಹಿಗಳು ಮತ್ತು ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಪರಿಚಯಿಸುವುದರೊಂದಿಗೆ ದಲ್ಲಾಳಿಗಳು ಮತ್ತು ಮಧ್ಯವರ್ತಿಗಳಿಗೆ ತೊದರೆಯಾಗಿದೆ, ಅವರ ಅಕ್ರಮ ಆದಾಯ ನಿಂತುಹೋಗಿದೆ ಎಂದರು. ಬೇವು ಲೇಪಿತ ಯೂರಿಯಾದಿಂದ ಸೋರಿಕೆ ನಿಂತು ಹೋಗಿರುವುದನ್ನೂ ಪ್ರಸ್ತಾಪಿಸಿದ ಅವರು, ರೈತರ ಖಾತೆಗೆ ನೇರ ಸವಲತ್ತು ವರ್ಗಾವಣೆಯಾಗುತ್ತಿದೆ ಎಂದ ಅವರು, ಸೋರಿಕೆ ಕಸಿದುಕೊಳ್ಳುವುದರಿಂದ ಪ್ರಭಾವಿತರಾದವರು ಇಂದು ಕೃಷಿ ಸುಧಾರಣೆಗಳನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು. ಅವರುಗಳಿಂದಾಗಿ ದೇಶದ ಅಭಿವೃದ್ಧಿ ನಿಲ್ಲುವುದಿಲ್ಲ ಬದಲಾಗಿ ಗ್ರಾಮ ಮತ್ತು ಬಡವರು ಸ್ವಾವಲಂಬಿಗಳಾಗುವುದು ಮುಂದುವರಿಯುತ್ತದೆ ಎಂದರು. ಈ ನಿರ್ಣಾಯಕ ಸಾಧನೆಗೆ ‘ಸ್ವಾಮಿತ್ವ ಯೋಜನೆ’ ಪಾತ್ರವೂ ಬಹಳ ಮುಖ್ಯ ಎಂದು ಅವರು ಹೇಳಿದರು.
आज जिन एक लाख लोगों को अपने घरों का स्वामित्व पत्र या प्रॉपर्टी कार्ड मिला है, जिन्होंने अपना कार्ड डाउनलोड किया है, उन्हें मैं बहुत-बहुत बधाई देता हूं: PM @narendramodi #SampatiSeSampanta
— PMO India (@PMOIndia) October 11, 2020
आज आपके पास एक अधिकार है, एक कानूनी दस्तावेज है कि आपका घर आपका ही है, आपका ही रहेगा...
— PMO India (@PMOIndia) October 11, 2020
ये योजना हमारे देश के गांवों में ऐतिहासिक परिवर्तन लाने वाली है: PM @narendramodi #SampatiSeSampanta
आत्मनिर्भर भारत अभियान में आज देश ने एक और बड़ा कदम उठा दिया है।
— PMO India (@PMOIndia) October 11, 2020
स्वामित्व योजना, गांव में रहने वाले हमारे भाई-बहनों को आत्मनिर्भर बनाने में बहुत मदद करने वाली है: PM @narendramodi #SampatiSeSampanta
गांव और गरीब की आवाज़ को बुलंद करना जेपी और नानाजी के जीवन का साझा संकल्प रहा है: PM @narendramodi
— PMO India (@PMOIndia) October 11, 2020
इन दोनों महापुरुषों का सिर्फ जन्मदिन ही एक तारीख को नहीं पड़ता, बल्कि इनके संघर्ष और आदर्श भी एक समान रहे हैं: PM @narendramodi
— PMO India (@PMOIndia) October 11, 2020
नानाजी कहते थे कि जब गांव के लोग विवादों में फंसे रहेंगे तो न अपना विकास कर पाएंगे और न ही समाज का।
— PMO India (@PMOIndia) October 11, 2020
मुझे विश्वास है, स्वामित्व योजना भी हमारे गांवों में अनेकों विवादों को समाप्त करने का बहुत बड़ा माध्यम बनेगी: PM @narendramodi #SampatiSeSampanta
संपत्ति का रिकॉर्ड होने पर बैंक से कर्ज आसानी से मिलता है, रोजगार-स्वरोजगार के रास्ते बनते हैं: PM @narendramodi #SampatiSeSampanta
— PMO India (@PMOIndia) October 11, 2020
जब संपत्ति का रिकॉर्ड होता है, जब संपत्ति पर अधिकार मिलता है तो नागरिकों में आत्मविश्वास बढ़ता है।
— PMO India (@PMOIndia) October 11, 2020
जब संपत्ति का रिकॉर्ड होता है तो निवेश के लिए नए रास्ते खुलते हैं: PM @narendramodi #SampatiSeSampanta
पूरे विश्व के बड़े-बड़े एक्सपर्ट्स इस बात पर जोर देते रहे हैं कि जमीन और घर के मालिकाना हक की, देश के विकास में बड़ी भूमिका होती है: PM @narendramodi #SampatiSeSampanta
— PMO India (@PMOIndia) October 11, 2020
गांव के कितने ही नौजवान हैं जो अपने दम पर कुछ करना चाहते हैं।
— PMO India (@PMOIndia) October 11, 2020
लेकिन घर होते हुए भी उन्हें, अपने घर के नाम पर बैंक से कर्ज मिलने में कई बार दिक्कतों का सामना करना पड़ता था।
स्वामित्व योजना के तहत बने प्रॉपर्टी कार्ड को दिखाकर, बैंकों से बहुत आसानी से कर्ज मिलना सुनिश्चित हुआ: PM
बीते 6 सालों से हमारे पंचायती राज सिस्टम को सशक्त करने के लिए जो प्रयास चल रहे हैं, उनको भी स्वामित्व योजना मज़बूत करेगी: PM @narendramodi #SampatiSeSampanta
— PMO India (@PMOIndia) October 11, 2020
पिछले 6 वर्षों में पुरानी कमी को दूर करने के लिए लगातार काम किया जा रहा है।
— PMO India (@PMOIndia) October 11, 2020
आज देश में बिना किसी भेदभाव, सबका विकास हो रहा है, पूरी पारदर्शिता के साथ सबको योजनाओं का लाभ मिल रहा है: PM @narendramodi #SampatiSeSampanta
6 दशकों तक गांव के करोड़ों लोग बैंक खातों से वंचित थे।
— PMO India (@PMOIndia) October 11, 2020
ये खाते अब जाकर खुले हैं: PM @narendramodi #SampatiSeSampanta
6 दशकों तक, गांव के करोड़ों परिवार शौचालय से वंचित थे। आज घर-घर में शौचालय भी बन गए हैं: PM @narendramodi #SampatiSeSampanta
— PMO India (@PMOIndia) October 11, 2020
दशकों तक गांव का गरीब गैस कनेक्शन से वंचित था। आज गरीब के घर भी गैस कनेक्शन पहुंच गया है: PM @narendramodi #SampatiSeSampanta
— PMO India (@PMOIndia) October 11, 2020
दशकों तक गांव के करोड़ों परिवारों के पास अपना घर नहीं था।
— PMO India (@PMOIndia) October 11, 2020
आज गांव के करीब-करीब 2 करोड़ गरीब परिवारों को पक्के घर मिल चुके हैं: PM @narendramodi #SampatiSeSampanta
छोटे किसानों, पशुपालकों, मछुआरों को किसान क्रेडिट कार्ड मिलने से जिनकी काली कमाई का रास्ता बंद हो गया है, उनको आज समस्या हो रही है: PM @narendramodi
— PMO India (@PMOIndia) October 11, 2020
यूरिया की नीमकोटिंग से जिनके गैर-कानूनी तौर तरीके बंद हो गए, दिक्कत उन्हें हो रही है।
— PMO India (@PMOIndia) October 11, 2020
किसानों के बैंक खाते में सीधा पैसा पहुंचने से जिनको परेशानी हो रही है, वो आज बेचैन हैं: PM @narendramodi #SampatiSeSampanta
किसान और खेत मजदूर को मिल रही बीमा, पेंशन जैसी सुविधाओं से जिनको परेशानी है, वो आज कृषि सुधारों के विरोध में हैं: PM @narendramodi
— PMO India (@PMOIndia) October 11, 2020
देश ने ठान लिया है कि गांव और गरीब को आत्मनिर्भर बनाना, भारत के सामर्थ्य की पहचान बनाना है।
— PMO India (@PMOIndia) October 11, 2020
इस संकल्प की सिद्धि के लिए स्वामित्व योजना की भूमिका भी बहुत बड़ी है: PM @narendramodi #SampatiSeSampanta
दो गज की दूरी रहे, हाथ की साफ-सफाई बनी रहे और मास्क लगातार मुंह पर रहे, ये हमें सुनिश्चित करना है।
— PMO India (@PMOIndia) October 11, 2020
याद रखिए, जबतक दवाई नहीं, तब तक ढिलाई नहीं: PM @narendramodi