ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕೇರಳದಲ್ಲಿ ಪುಗಲೂರು – ತ್ರಿಶೂರ್ ವಿದ್ಯುತ್ ಪ್ರಸರಣಾ ಯೋಜನೆ, ಕಾಸರಗೋಡು ಸೌರಶಕ್ತಿ ಘಟಕ ಮತ್ತು ಅರುವಿಕ್ಕರದಲ್ಲಿ ನೀರು ಸಂಸ್ಕರಣಾ ಘಟಕವನ್ನು ಉದ್ಘಾಟಿಸಿದರು. ಅಲ್ಲದೆ, ಅವರು ಕಾರ್ಯಕ್ರಮದ ವೇಳೆ ತಿರುವನಂತಪುರಂನಲ್ಲಿ ಸಮಗ್ರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರ ಹಾಗೂ ಸ್ಮಾರ್ಟ್ ರಸ್ತೆ ಯೋಜನೆಗೆ ಚಾಲನೆ ನೀಡಿದರು.
ಕೇರಳದ ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್, ಕೇಂದ್ರ ಇಂಧನ (ಸ್ವತಂತ್ರ ಹೊಣೆಗಾರಿಕೆ) ಸಹಾಯಕ ಸಚಿವ ಹಾಗೂ ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಶ್ರೀ ರಾಜ್ ಕುಮಾರ್ ಸಿಂಗ್ ಮತ್ತು ವಸತಿ ಹಾಗೂ ನಗರ ವ್ಯವಹಾರಗಳ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಇಂದು ಆರಂಭವಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಇಡೀ ಕೇರಳದಾದ್ಯಂತ ಹರಡಿವೆ ಮತ್ತು ಅವು ಎಲ್ಲ ವಲಯಗಳನ್ನು ಒಳಗೊಂಡಿದೆ ಎಂದರು. ಭಾರತದ ಪ್ರಗತಿಗೆ ಉತ್ಕೃಷ್ಟ ಕೊಡುಗೆ ನೀಡುತ್ತಿರುವ ಸುಂದರ ರಾಜ್ಯ ಕೇರಳದ ಜನರ ಸಬಲೀಕರಣಕ್ಕೆ ಮತ್ತು ಶಕ್ತಿ ತುಂಬಲು ನಾವು ಬದ್ಧವಾಗಿದ್ದೇವೆ ಎಂದರು.
ಇಂದು ಉದ್ಘಾಟಿಸಲಾದ 2000 ಮೆಗಾ ವ್ಯಾಟ್ ಸಾಮರ್ಥ್ಯದ ಪುಗಲೂರು-ತ್ರಿಶೂರ್ ಹೈ ವೋಲ್ಟೇಜ್ ಡೈರೆಕ್ಟ್ ಕರೆಂಟ್ ಸಿಸ್ಟಂ, ರಾಷ್ಟ್ರೀಯ ಗ್ರಿಡ್ ಜೊತೆ ಸಂಪರ್ಕ ಸಾಧಿಸಲಾದ ಕೇರಳದ ಮೊದಲ ಎಚ್ ವಿಡಿಸಿ ಇಂಟರ್ ಕನೆಕ್ಷನ್ ಯೋಜನೆಯಾಗಿದ್ದು, ಇದರಿಂದ ರಾಜ್ಯದ ಭಾರಿ ವಿದ್ಯುತ್ ಬೇಡಿಕೆಯನ್ನು ಈಡೇರಿಸಲು, ವಿದ್ಯುತ್ ವರ್ಗಾವಣೆಗೆ ಸಹಕಾರಿಯಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ದೇಶದಲ್ಲಿ ಇದೇ ಮೊದಲ ಬಾರಿಗೆ ವಿದ್ಯುತ್ ಪ್ರಸರಣಕ್ಕೆ ವಿಎಸ್ ಸಿ ಕನ್ವರ್ಟರ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ. ನೈಸರ್ಗಿಕ ಖುತುಮಾನದಿಂದಾಗಿ ಆಂತರಿಕ ವಿದ್ಯುತ್ ಉತ್ಪಾದನಾ ಶಕ್ತಿ ಮತ್ತು ಎಚ್ ವಿಡಿಸಿ ವ್ಯವಸ್ಥೆಯಿಂದಾಗಿ ಕೇರಳ ಬಹುತೇಕ ರಾಷ್ಟ್ರೀಯ ಗ್ರಿಡ್‌ನಿಂದ ವಿದ್ಯುತ್ ಆಮದಿನ ಮೇಲೆ ಹೆಚ್ಚಿನ ಅವಲಂಬನೆಯಾಗಿದೆ ಎಂದರು. ಈ ಯೋಜನೆಯಲ್ಲಿ ಬಳಕೆ ಮಾಡಿರುವ ಎಚ್ ವಿಡಿಸಿ ಸಾಧನ ಭಾರತದಲ್ಲಿಯೇ ತಯಾರಿಸಿರುವುದು ಎಂಬುದು ಸಂತಸ ತಂದಿದೆ ಮತ್ತು ಇದು ಆತ್ಮ ನಿರ್ಭರ ಭಾರತ ಅಭಿಯಾನಕ್ಕೆ ಬಲ ತಂದಿದೆ ಎಂದರು.
ಸೌರಶಕ್ತಿಯಿಂದ ನಾವು ಪಡೆದಿರುವ ಪ್ರಯೋಜನದಿಂದಾಗಿ ಹವಾಮಾನ ವೈಪರೀತ್ಯದ ವಿರುದ್ಧ ನಮ್ಮ ಹೋರಾಟ ಬಲಿಷ್ಠವಾಗಿದೆ ಮತ್ತು ನಮ್ಮ ಉದ್ದಿಮೆದಾರರಿಗೆ ಉತ್ತೇಜನ ದೊರಕಿದೆ ಎಂದು ಪ್ರಧಾನಮಂತ್ರಿ ಹೇಳಿದರು. ನಮ್ಮ ಅನ್ನದಾತರನ್ನು ಊರ್ಜಾದಾತರನ್ನಾಗಿ ಮಾಡಲು ನಮ್ಮ ರೈತರನ್ನು ಸೌರ ವಲಯದ ಜೊತೆ ಬೆಸೆಯಬೇಕು ಎಂದರು. ಪಿಎಂ-ಕುಸುಮ್ ಯೋಜನೆಯಡಿ ರೈತರಿಗೆ 20ಸಾವಿರ ಸೌರ ವಿದ್ಯುತ್ ಪಂಪ್ ಗಳನ್ನು ನೀಡಲಾಗಿದೆ. ಆರು ವರ್ಷಗಳಿಂದೀಚೆಗೆ ಭಾರತದ ಸೌರಶಕ್ತಿ ಸಾಮರ್ಥ್ಯ 13 ಪಟ್ಟು ಹೆಚ್ಚಾಗಿದೆ ಎಂದವರು ಹೇಳಿದರು. ಅಂತಾರಾಷ್ಟ್ರೀಯ ಸೌರ ಮೈತ್ರಿಯ ಮೂಲಕ ಭಾರತ ಇಡೀ ವಿಶ್ವವನ್ನು ಒಂದುಗೂಡಿಸಿದೆ. ನಮ್ಮ ನಗರಗಳು ಪ್ರಗತಿಯ ಎಂಜಿನ್ ಗಳು ಮತ್ತು ಆವಿಷ್ಕಾರದ ಶಕ್ತಿಕೇಂದ್ರಗಳು ಎಂದರು. ನಮ್ಮ ನಗರಗಳು ಮೂರು ವಿಧದಲ್ಲಿ ಉತ್ತೇಜನಕಾರಿ ಪ್ರವೃತ್ತಿ ಕಂಡುಬರುತ್ತಿದೆ, ಅವುಗಳೆಂದರೆ ತಾಂತ್ರಿಕ ಅಭಿವೃದ್ಧಿ, ಅನುಕೂಲಕರ ಜನಸಂಖ್ಯೆ ಮತ್ತು ಹೆಚ್ಚುತ್ತಿರುವ ದೇಶಿಯ ಬೇಡಿಕೆ.
ಸ್ಮಾರ್ಟ್ ಸಿಟಿ ಮಿಷನ್ ನಡಿಯಲ್ಲಿ ನಿರ್ಮಿಸಿರುವ ಸಮಗ್ರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು, ಉತ್ತಮ ಯೋಜನೆ ಮತ್ತು ನಿರ್ವಹಣೆಗೆ ನಗರಗಳಿಗೆ ಸಹಕಾರಿಯಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು. 54 ಕಮಾಂಡ್ ಕೇಂದ್ರಗಳು ಈಗಾಗಲೇ ಕಾರ್ಯಾರಂಭ ಮಾಡಿವೆ ಮತ್ತು ಅಂತಹ 30 ಕೇಂದ್ರಗಳ ನಿರ್ಮಾಣ ಕಾಮಗಾರಿ ನಾನಾ ಹಂತದಲ್ಲಿದೆ. ಈ ಕೇಂದ್ರಗಳು ಸಾಂಕ್ರಾಮಿಕದ ದಿನಗಳಲ್ಲಿ ವಿಶೇಷ ರೀತಿಯಲ್ಲಿ ಉಪಯುಕ್ತವಾದವು. ಸ್ಮಾರ್ಟ್ ಸಿಟಿ ಮಿಷನ್ ನಡಿ ಕೇರಳದಲ್ಲಿ ಕೊಚ್ಚಿ ಮತ್ತು ತಿರುವಂತನಪುರಂ ಇದ್ದು, ಎರಡೂ ನಗರಗಳು ಸಾಕಷ್ಟು ಪ್ರಗತಿ ಸಾಧಿಸಿವೆ. 773 ಕೋಟಿ ಮೊತ್ತದ 27 ಯೋಜನೆಗಳು ಪೂರ್ಣಗೊಂಡಿವೆ ಮತ್ತು 2000 ಕೋಟಿ ಮೊತ್ತದ 68 ಯೋಜನೆಗಳು ಪ್ರಗತಿಯಲ್ಲಿವೆ.
ಅಮೃತ್ ಯೋಜನೆಯಡಿ ನಗರಗಳಲ್ಲಿನ ತ್ಯಾಜ್ಯ ನೀರು ಸಂಸ್ಕರಣಾ ಮೂಲಸೌಕರ್ಯ ಉನ್ನತೀಕರಿಸಲು ನೆರವಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕೇರಳದಲ್ಲಿ ಅಮೃತ್ ಯೋಜನೆಯಡಿ 1100 ಕೋಟಿಗೂ ಅಧಿಕ ಮೊತ್ತದಲ್ಲಿ ಒಟ್ಟು 175 ನೀರು ಪೂರೈಕೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. 9 ಅಮೃತ್ ನಗರಗಳ ಸಮಗ್ರ ಅಭಿವೃದ್ಧಿ ವ್ಯಾಪ್ತಿ ಕೈಗೊಳ್ಳಲಾಗಿದೆ. ಇಂದು ಉದ್ಘಾಟಿಸಲಾದ ಅರಿವುಕ್ಕರ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು 70 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಇದು 13ಲಕ್ಷ ಜನಸಂಖ್ಯೆಯ ಜೀವನ ಮಟ್ಟ ಸುಧಾರಿಸುವುದಲ್ಲದೆ, ತಿರುವನಂತಪುರಂಗೆ ಈ ಮೊದಲು ಪ್ರತಿದಿನ ಒರ್ವ ವ್ಯಕ್ತಿಗೆ 100 ಲೀಟರ್ ನೀರು ಪೂರೈಸಲಾಗುತ್ತಿತ್ತು, ಇದೀಗ ಆ ಪ್ರಮಾಣ 150 ಲೀಟರ್ ಗೆ ಏರಿಕೆಯಾಗಲಿದೆ.
ಛತ್ರಪತಿ ಶಿವಾಜಿ ಮಹಾರಾಜ್ ಅವರ ಜೀವನ ದೇಶದಾದ್ಯಂತ ಎಲ್ಲ ಜನರಿಗೂ ಪ್ರೇರಣೆಯನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಶಿವಾಜಿ ಸ್ವರಾಜ್ಯಕ್ಕೆ ಒತ್ತು ನೀಡಿದರು, ಆ ಮೂಲಕ ಅಭಿವೃದ್ಧಿಯ ಫಲ ಸಮಾಜದ ಎಲ್ಲ ವರ್ಗಗಳಿಗೂ ತಲುಪಬೇಕೆಂದು ಬಯಸಿದ್ದರು. ಶಿವಾಜಿ ಅವರು ಬಲಿಷ್ಠ ನೌಕಾ ಪಡೆಯನ್ನು ಕಟ್ಟಿದ್ದರು ಮತ್ತು ಕರಾವಳಿಯ ಅಭಿವೃದ್ಧಿಗೆ ಮತ್ತು ಮೀನುಗಾರರ ಕಲ್ಯಾಣಕ್ಕೆ ಅಹರ್ನಿಶಿ ದುಡಿದಿದ್ದರು ಮತ್ತು ಸರ್ಕಾರ ಅವರ ದೂರದರ್ಶಿತ್ವವನ್ನು ಮುಂದುವರಿಸಿಕೊಂಡು ಹೋಗುತ್ತಿದೆ ಎಂದರು. ಭಾರತ ರಕ್ಷಣಾ ವಲಯದಲ್ಲಿ ಆತ್ಮನಿರ್ಭರ ಸಾಧನೆಯತ್ತ ಸಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ರಕ್ಷಣಾ ಮತ್ತು ಬಾಹ್ಯಾಕಾಶ ವಲಯಗಳಲ್ಲಿ ಮಹತ್ವದ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ ಎಂದರು. ಈ ಪ್ರಯತ್ನಗಳಿಂದಾಗಿ ಹಲವು ಪ್ರತಿಭಾವಂತ ಭಾರತೀಯ ಯುವಕರಿಗೆ ಸಾಕಷ್ಟು ಅವಕಾಶಗಳು ಸಿಗುತ್ತವೆ. ಭಾರತ ನೀಲಿ ಆರ್ಥಿಕತೆಯನ್ನು ಸಾಕಷ್ಟು ಹಣ ಹೂಡಿಕೆ ಮಾಡುತ್ತಿದೆ ಎಂದರು. ಮೀನುಗಾರರ ಸಮುದಾಯಕ್ಕೆ ನಾವು ಕೈಗೊಂಡಿರುವ ಪ್ರಯತ್ನಗಳು, ಹೆಚ್ಚಿನ ಸಾಲ, ಅಧಿಕ ತಂತ್ರಜ್ಞಾನ ಬಳಕೆ, ಶ್ರೇಷ್ಠ ಗುಣಮಟ್ಟದ ಮೌಲಸೌಕರ್ಯ ಮತ್ತು ಸರ್ಕಾರದ ಬೆಂಬಲ ನೀತಿಗಳನ್ನು ಆಧರಿಸಿವೆ. ಸರ್ಕಾರದ ನೀತಿಗಳು ಭಾರತ ಸಮುದ್ರದ ಆಹಾರ ಉತ್ಪನ್ನಗಳ ರಫ್ತು ತಾಣವಾಗುವುದನ್ನು ಖಾತ್ರಿಪಡಿಸುತ್ತವೆ ಎಂದು ಪ್ರಧಾನಿ ಹೇಳಿದರು.
ಮಲೆಯಾಳಂನ ಶ್ರೇಷ್ಠ ಕವಿ ಕುಮಾರನಶಾನ್ ಅವರ “ನಾನು ನಿಮ್ಮ ಜಾತಿಯನ್ನು ಕೇಳುತ್ತಿಲ್ಲ ಸಹೋದರಿ, ನನಗೆ ಬಾಯಾರಿಕೆ ಆಗಿದೆ, ನಾನು ನೀರು ಕೇಳುತ್ತಿದ್ದೀನಿ’’ ಎಂಬ ಸಾಲುಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಅಭಿವೃದ್ಧಿ ಮತ್ತು ಉತ್ತಮ ಆಡಳಿತ ಯಾವುದೇ ಜಾತಿ, ಬಣ್ಣ, ಜನಾಂಗ, ಲಿಂಗ ಅಥವಾ ಧರ್ಮ ಅಥವಾ ಭಾಷೆ ಇರುವುದಿಲ್ಲ ಎಂದರು. ಎಲ್ಲರಿಗಾಗಿ ಅಭಿವೃದ್ಧಿ ಮತ್ತು ಸಬ್ ಕಾ ಸಾಥ್, ಸಬ್ ಕ ವಿಕಾಸ್ ಮತ್ತು ಸಬ್ ಕ ವಿಶ್ವಾಸದ ಮಂತ್ರವಾಗಿದೆ ಎಂದರು. ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ತಮ್ಮ ಕನಸು ಸಾಕಾರಕ್ಕೆ ಕೇರಳದ ಜನರು ಬೆಂಬಲ ನೀಡಬೇಕು ಎಂದು ಪ್ರಧಾನಿ ಅವರು ಕೋರಿದರು.
The development works starting today are spread across all parts of Kerala. They cover a wide range of sectors.
— PMO India (@PMOIndia) February 19, 2021
They will power and empower this beautiful state, whose people are making rich contributions to India’s progress: PM @narendramodi
India is devoting great importance to solar energy.
— PMO India (@PMOIndia) February 19, 2021
Our gains in solar energy ensure:
A stronger fight against climate change.
A boost to our entrepreneurs.
Work is also underway to connect our hardworking farmers with the solar sector - make our Annadatas also Urjadatas: PM
In the last six years, India’s solar energy capacity is up 13 times.
— PMO India (@PMOIndia) February 19, 2021
India has also brought the world together through the International Solar Alliance: PM @narendramodi
Our cities are engines of growth and power houses of innovation.
— PMO India (@PMOIndia) February 19, 2021
Our cities are seeing three encouraging trends:
Technological development,
Favourable demographic dividend,
Increasing domestic demand: PM @narendramodi
One more initiative to improve urban infrastructure is AMRUT.
— PMO India (@PMOIndia) February 19, 2021
AMRUT is helping cities expand and upgrade their wastewater treatment infrastructure: PM @narendramodi
The life of Chhatrapati Shivaji Maharaj inspires people across India.
— PMO India (@PMOIndia) February 19, 2021
He gave emphasis on Swarajya, where the fruits of development reach all sections of society: PM @narendramodi
India is investing in our Blue Economy.
— PMO India (@PMOIndia) February 19, 2021
We value the efforts of our fishermen.
Our efforts for fishermen communities are based on:
More credit
Increased technology
Top-quality infrastructure
Supportive government policies
Fishermen now have access to Kisan Credit Cards: PM