ಪ್ರಗತಿ ಮೈದಾನದಲ್ಲಿ ಹೊಸ ಪ್ರದರ್ಶನ ಸಂಕೀರ್ಣವನ್ನೂ ಉದ್ಘಾಟಿಸಿದ ಪ್ರಧಾನಿ
"ಆತ್ಮನಿರ್ಭರ ಭಾರತ ಸಂಕಲ್ಪದೊಂದಿಗೆ, ಮುಂದಿನ 25 ವರ್ಷಗಳ ಭಾರತಕ್ಕೆ ತಳಹದಿ ಹಾಕಲಾಗುತ್ತಿದೆ"
"ಭಾರತದ ಜನರು, ಭಾರತೀಯ ಉದ್ಯಮ, ಭಾರತೀಯ ವ್ಯಾಪಾರ, ಭಾರತೀಯ ತಯಾರಕರು, ಭಾರತೀಯ ರೈತರು ಗತಿ ಶಕ್ತಿಯ ಈ ಮಹಾನ್ ಅಭಿಯಾನದ ಕೇಂದ್ರಬಿಂದುವಾಗಿದ್ದಾರೆ"
"ನಾವು ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸುವ ಕೆಲಸದ ಸಂಸ್ಕೃತಿಯನ್ನು ಮಾತ್ರ ಅಭಿವೃದ್ಧಿಪಡಿಸಿಲ್ಲ, ಸಮಯಕ್ಕೆ ಮುಂಚಿತವಾಗಿಯೇ ಯೋಜನೆಗಳನ್ನು ಪೂರ್ಣಗೊಳಿಸುವ ಪ್ರಯತ್ನವನ್ನೂ ಮಾಡುತ್ತಿದ್ದೇವೆ"
"ಸಂಪೂರ್ಣ ಸರ್ಕಾರದ ವಿಧಾನದೊಂದಿಗೆ, ಸರ್ಕಾರದ ಸಾಮೂಹಿಕ ಶಕ್ತಿಯನ್ನು ಯೋಜನೆಗಳನ್ನು ಪೂರೈಸಲು ಬಳಸಲಾಗಿದೆ"
"ಗತಿ ಶಕ್ತಿ ಯೋಜನೆಯು ಸಮಗ್ರ ಆಡಳಿತದ ವಿಸ್ತರಣೆಯಾಗಿದೆ"

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಹು ಮಾದರಿ ಸಂಪರ್ಕಕ್ಕಾಗಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ -ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆಗೆ ಚಾಲನೆ ನೀಡಿದರು. ಅವರು ಪ್ರಗತಿ ಮೈದಾನದಲ್ಲಿ ಹೊಸ ಪ್ರದರ್ಶನ ಸಂಕೀರ್ಣವನ್ನೂ ಉದ್ಘಾಟಿಸಿದರು. ಕೇಂದ್ರ ಸಚಿವರಾದ ಶ್ರೀ ನಿತಿನ್ ಗಡ್ಕರಿ, ಶ್ರೀ ಪಿಯೂಷ್ ಗೋಯಲ್, ಶ್ರೀ ಹರ್ದೀಪ್ ಸಿಂಗ್ ಪುರಿ, ಶ್ರೀ ಸರ್ಬಾನಂದ ಸೋನೊವಾಲ್, ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಶ್ರೀ ಅಶ್ವಿನಿ ವೈಷ್ಣವ್, ಮುಖ್ಯಮಂತ್ರಿ, ಲೆಫ್ಟಿನೆಂಟ್ ಗವರ್ನರ್‌, ರಾಜ್ಯ ಸಚಿವರು, ಕೈಗಾರಿಕೋದ್ಯಮಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉದ್ಯಮ ಕ್ಷೇತ್ರದಿಂದ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಶ್ರೀ ಕುಮಾರ್ ಮಂಗಳಂ ಬಿರ್ಲಾ, ಟ್ರಾಕ್ಟರುಗಳು ಮತ್ತು ಕೃಷಿ ಸಲಕರಣೆಗಳ ಸಿಎಂಡಿ ಶ್ರೀಮತಿ ಮಲ್ಲಿಕಾ ಶ್ರೀನಿವಾಸನ್, ಟಾಟಾ ಸ್ಟೀಲ್ ಸಿಇಒ ಮತ್ತು ಸಿಐಐ ಅಧ್ಯಕ್ಷರಾದ ಶ್ರೀ ಟಿವಿ ನರೇಂದ್ರನ್ ಮತ್ತು ರಿವಿಗೋ ಸಹ ಸಂಸ್ಥಾಪಕ ಶ್ರೀ ದೀಪಕ್ ಗರ್ಗ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಯವರು, ಶಕ್ತಿಯನ್ನು ಪೂಜಿಸುವ ಅಷ್ಟಮಿಯ ಶುಭ ದಿನವಾದ ಈ ಶುಭ ಸಂದರ್ಭದಲ್ಲಿ ರಾಷ್ಟ್ರದ ಪ್ರಗತಿಯು ಹೊಸ ಶಕ್ತಿಯನ್ನು ಪಡೆಯುತ್ತಿದೆ ಎಂದು ಹೇಳಿದರು. ಆತ್ಮನಿರ್ಭರ ಭಾರತ ಸಂಕಲ್ಪದೊಂದಿಗೆ, ಮುಂದಿನ 25 ವರ್ಷಗಳ ಭಾರತಕ್ಕೆ  ಅಡಿಪಾಯವನ್ನು ಇಂದು ಹಾಕಲಾಗುತ್ತಿದೆ ಎಂದು ಅವರು ಹೇಳಿದರು. ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಆತ್ಮನಿರ್ಭರ ಭಾರತ ಪ್ರತಿಜ್ಞೆಗೆ ಭಾರತದ ವಿಶ್ವಾಸವನ್ನು ತೆಗೆದುಕೊಳ್ಳುತ್ತದೆ. "ಈ ಮಾಸ್ಟರ್ ಪ್ಲಾನ್ 21 ನೇ ಶತಮಾನದ ಭಾರತಕ್ಕೆ ಉತ್ತೇಜನವನ್ನು (ಗತಿ ಶಕ್ತಿ) ನೀಡುತ್ತದೆ" ಎಂದು ಪ್ರಧಾನಿ ಹೇಳಿದರು.

ಭಾರತದ ಜನರು, ಭಾರತೀಯ ಉದ್ಯಮ, ಭಾರತೀಯ ವ್ಯಾಪಾರ, ಭಾರತೀಯ ತಯಾರಕರು, ಭಾರತೀಯ ರೈತರು ಗತಿ ಶಕ್ತಿಯ ಈ ಮಹಾನ್ ಅಭಿಯಾನದ ಕೇಂದ್ರಬಿಂದುವಾಗಿದ್ದಾರೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇದು 21 ನೇ ಶತಮಾನದ ಭಾರತವನ್ನು ನಿರ್ಮಿಸಲು ಭಾರತದ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಹೊಸ ಶಕ್ತಿಯನ್ನು ನೀಡುತ್ತದೆ ಮತ್ತು ಆ ಹಾದಿಯಲ್ಲಿರುವ ಅಡೆತಡೆಗಳನ್ನು ತೆಗೆದುಹಾಕುತ್ತದೆ ಎಂದು ಅವರು ಹೇಳಿದರು.

ಹಲವಾರು ವರ್ಷಗಳಿಂದ, ‘ಕೆಲಸವು ಪ್ರಗತಿಯಲ್ಲಿದೆ’ ಎಂಬ ಬೋರ್ಡ್ ನಂಬಿಕೆಯ ಕೊರತೆಯ ಸಂಕೇತವಾಗಿ ಮಾರ್ಪಟ್ಟಿದೆ ಎಂದು ಹೇಳಿದ ಪ್ರಧಾನಿ, ಪ್ರಗತಿಗೆ ವೇಗ, ಉತ್ಸಾಹ ಮತ್ತು ಸಾಮೂಹಿಕ ಪ್ರಯತ್ನಗಳ ಅಗತ್ಯವಿದೆ ಎಂದು ಹೇಳಿದರು. ಇಂದಿನ 21 ನೇ ಶತಮಾನದ ಭಾರತವು ಹಳೆಯ ವ್ಯವಸ್ಥೆಗಳು ಮತ್ತು ಅಭ್ಯಾಸಗಳನ್ನು ಬಿಟ್ಟು ಮುಂದೆ ಸಾಗುತ್ತಿದೆ.

"ಇಂದಿನ ಮಂತ್ರವೆಂದರೆ -

'ಪ್ರಗತಿಗಾಗಿ ಕೆಲಸ'

ಪ್ರಗತಿಗಾಗಿ  ಸಂಪತ್ತು.

ಪ್ರಗತಿಗಾಗಿ  ಯೋಜನೆ.

ಪ್ರಗತಿಗೆ ಆದ್ಯತೆ”.

ಎಂದು ಅವರು ಹೇಳಿದರು.

ನಾವು ನಿಗದಿತ ಕಾಲಮಿತಿಯೊಳಗೆ ಯೋಜನೆಗಳನ್ನು ಪೂರ್ಣಗೊಳಿಸುವ ಕೆಲಸದ ಸಂಸ್ಕೃತಿಯನ್ನು ಮಾತ್ರ ಅಭಿವೃದ್ಧಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ "ಎಂದು ಅವರು ಹೇಳಿದರು.

ನಮ್ಮ ದೇಶದಲ್ಲಿ ಬಹುತೇಕ ರಾಜಕೀಯ ಪಕ್ಷಗಳಿಗೆ ಮೂಲಸೌಕರ್ಯದ ವಿಷಯವು ಆದ್ಯತೆಯಾಗಿಲ್ಲ ಎಂದು ಪ್ರಧಾನಿ ವಿಷಾದಿಸಿದರು. ಇದು ಅವರ ಪ್ರಣಾಳಿಕೆಯಲ್ಲಿಯೂ ಇರುವುದಿಲ್ಲ. ಈಗ ಕೆಲವು ರಾಜಕೀಯ ಪಕ್ಷಗಳು ದೇಶಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳ ನಿರ್ಮಾಣವನ್ನು ಟೀಕಿಸಲು ಆರಂಭಿಸಿರುವ ಪರಿಸ್ಥಿತಿ ಬಂದಿದೆ ಎಂದು ಪ್ರಧಾನಿ ಹೇಳಿದರು. ಸುಸ್ಥಿರ ಅಭಿವೃದ್ಧಿಗೆ ಗುಣಮಟ್ಟದ ಮೂಲಸೌಕರ್ಯಗಳ ಸೃಷ್ಟಿಯು ಒಂದು ಸಾಬೀತಾದ ಮಾರ್ಗವಾಗಿದೆ ಎಂದು ಜಾಗತಿಕವಾಗಿ ಒಪ್ಪಿಕೊಳ್ಳಲಾಗಿದೆ, ಇದು ಅನೇಕ ಆರ್ಥಿಕ ಚಟುವಟಿಕೆಗಳನ್ನು ಹುಟ್ಟುಹಾಕುತ್ತದೆ ಮತ್ತು ದೊಡ್ಡ ಪ್ರಮಾಣದಲ್ಲಿ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಿ ಹೇಳಿದರು.

ಬೃಹತ್ ಯೋಜನೆ ಮತ್ತು ಸೂಕ್ಷ್ಮ ಅನುಷ್ಠಾನ ಸಮಸ್ಯೆಗಳ ನಡುವಿನ ವ್ಯಾಪಕ ಅಂತರದಿಂದಾಗಿ ಸಮನ್ವಯದ ಕೊರತೆ, ಮುಂಗಡ ಮಾಹಿತಿಯ ಕೊರತೆ, ಚಿಂತನೆಯ ಕೊರತೆಗಳು ನಿರ್ಮಾಣಕ್ಕೆ ಅಡಚಣೆ ಹಾಗು ಬಜೆಟ್ ವ್ಯರ್ಥಕ್ಕೆ ಕಾರಣವಾಗುತ್ತಿವೆ ಎಂದು ಪ್ರಧಾನಿ ಹೇಳಿದರು. ಶಕ್ತಿಯು ಹೆಚ್ಚಳವಾಗುವ ಅಥವಾ ವರ್ಧಿಸುವ ಬದಲು ವಿಭಜನೆಯಾಗುತ್ತಿದೆ. ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಇದನ್ನು ಪರಿಹರಿಸುತ್ತದೆ. ಏಕೆಂದರೆ ಮಾಸ್ಟರ್ ಪ್ಲಾನ್ ಆಧಾರದ ಮೇಲೆ ಕೆಲಸ ಮಾಡುವುದು ಸಂಪನ್ಮೂಲಗಳ ಗರಿಷ್ಠ ಬಳಕೆಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.

ತಾವು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ, ಸ್ಥಗಿತಗೊಂಡಿದ್ದ ನೂರಾರು ಯೋಜನೆಗಳನ್ನು ಪರಿಶೀಲಿಸಿದ್ದನ್ನು ಮತ್ತು ಎಲ್ಲಾ ಯೋಜನೆಗಳನ್ನು ಒಂದೇ ವೇದಿಕೆಯಡಿ ತಂದು ಅಡೆತಡೆಗಳನ್ನು ತೆಗೆದುಹಾಕಲು ಪ್ರಯತ್ನಿಸಿದ್ದನ್ನು ಸ್ಮರಿಸಿಕೊಂಡರು.. ಈಗ ಸಮನ್ವಯದ ಕೊರತೆಯಿಂದ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವತ್ತ ಗಮನ ಹರಿಸಲಾಗಿದೆ ಎಂದು ಅವರು ತೃಪ್ತಿ ವ್ಯಕ್ತಪಡಿಸಿದರು. ಈಗ ಸಂಪೂರ್ಣ ಸರ್ಕಾರಿ ವಿಧಾನದೊಂದಿಗೆ, ಸರ್ಕಾರದ ಸಾಮೂಹಿಕ ಶಕ್ತಿಯನ್ನು ಯೋಜನೆಗಳನ್ನು ಪೂರೈಸಲು ಬಳಸಲಾಗುತ್ತಿದೆ ನಡೆಸಲಾಗುತ್ತಿದೆ. ಇದರಿಂದಾಗಿ ದಶಕಗಳಿಂದ ಅಪೂರ್ಣವಾಗಿದ್ದ ಹಲವು ಯೋಜನೆಗಳು ಈಗ ಪೂರ್ಣಗೊಳ್ಳುತ್ತಿವೆ ಎಂದು ಅವರು ಹೇಳಿದರು. ಪ್ರಧಾನ ಮಂತ್ರಿ ಗತಿ ಶಕ್ತಿ ಮಾಸ್ಟರ್ ಪ್ಲಾನ್ ಸರ್ಕಾರದ ಪ್ರಕ್ರಿಯೆ ಮತ್ತು ಅದರ ವಿವಿಧ ಪಾಲುದಾರರನ್ನು ಒಟ್ಟುಗೂಡಿಸುವುದಲ್ಲದೆ ವಿವಿಧ ಸಾರಿಗೆ ವಿಧಾನಗಳನ್ನು ಸಂಯೋಜಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. "ಗತಿ ಶಕ್ತಿ ಯೋಜನೆಯು ಸಮಗ್ರ ಆಡಳಿತದ ವಿಸ್ತರಣೆಯಾಗಿದೆ" ಎಂದು ಅವರು ಹೇಳಿದರು.

ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಕೈಗೊಂಡ ಕ್ರಮಗಳ ಬಗ್ಗೆ ಪ್ರಧಾನಿ ವಿವರಿಸಿದರು. ಭಾರತದಲ್ಲಿ ಮೊದಲ ಅಂತಾರಾಜ್ಯ ನೈಸರ್ಗಿಕ ಅನಿಲ ಪೈಪ್‌ಲೈನ್ 1987 ರಲ್ಲಿ ಕಾರ್ಯಾರಂಭ ಮಾಡಿತು. ಇದರ ನಂತರ, 2014 ರವರೆಗೆ, ಅಂದರೆ 27 ವರ್ಷಗಳಲ್ಲಿ, 15,000 ಕಿಮೀ ಉದ್ದದ ನೈಸರ್ಗಿಕ ಅನಿಲ ಪೈಪ್‌ಲೈನ್ ಅನ್ನು ಮಾತ್ರ ನಿರ್ಮಿಸಲಾಯಿತು. ಇಂದು, ದೇಶಾದ್ಯಂತ 16,000 ಕಿಮೀ ಗಿಂತ ಹೆಚ್ಚು ಉದ್ದದ ಅನಿಲ ಪೈಪ್‌ಲೈನ್‌ಗಾಗಿ ಕೆಲಸ ನಡೆಯುತ್ತಿದೆ. ಈ ಕೆಲಸವನ್ನು ಮುಂದಿನ 5-6 ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.

2014 ರ ಹಿಂದಿನ 5 ವರ್ಷಗಳಲ್ಲಿ ಕೇವಲ 1900 ಕಿಮೀ ರೈಲ್ವೇ ಮಾರ್ಗಗಳನ್ನು ಜೋಡಿ ಮಾರ್ಗಗಲಾಗಿ ಮಾಡಲಾಯಿತು. ಕಳೆದ 7 ವರ್ಷಗಳಲ್ಲಿ, 9 ಸಾವಿರ ಕಿಲೋಮೀಟರ್‌ಗಳಷ್ಟು ರೈಲು ಮಾರ್ಗಗಳನ್ನು ಜೋಡಿ ಮಾರ್ಗಗಳಾಗಿ ಪರಿವರ್ತಿಸಲಾಗಿದೆ ಎಂದು ಪ್ರಧಾನಿ ಹೇಳಿದರು. 2014 ಕ್ಕಿಂತ ಮುಂಚಿನ 5 ವರ್ಷಗಳಲ್ಲಿ ಕೇವಲ 3000 ಕಿಮೀ ರೈಲು ಮಾರ್ಗಗಳನ್ನು ವಿದ್ಯುದ್ದೀಕರಿಸಲಾಯಿತು. ಕಳೆದ 7 ವರ್ಷಗಳಲ್ಲಿ, 24000 ಕಿಲೋಮೀಟರ್‌ಗಳಷ್ಟು ರೈಲ್ವೆ ಮಾರ್ಗಗಳನ್ನು ವಿದ್ಯುದ್ದೀಕರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. 2014 ಕ್ಕಿಂತ ಮೊದಲು, ಮೆಟ್ರೋ ರೈಲು ಕೇವಲ 250 ಕಿಮೀ ಟ್ರ್ಯಾಕ್‌ನಲ್ಲಿ ಮಾತ್ರ ಓಡುತ್ತಿತ್ತು. ಇಂದು ಮೆಟ್ರೋವನ್ನು 700 ಕಿಮೀ ವರೆಗೆ ವಿಸ್ತರಿಸಲಾಗಿದೆ ಮತ್ತು 1000 ಕಿಮೀ ಹೊಸ ಮೆಟ್ರೋ ಮಾರ್ಗದಲ್ಲಿ ಕೆಲಸ ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು. 2014 ಕ್ಕಿಂತ ಹಿಂದಿನ ಐದು ವರ್ಷಗಳಲ್ಲಿ ಕೇವಲ 60 ಪಂಚಾಯತ್‌ಗಳನ್ನು ಮಾತ್ರ ಆಪ್ಟಿಕಲ್ ಫೈಬರ್‌ನೊಂದಿಗೆ ಸಂಪರ್ಕಿಸಲಾಗಿತ್ತು.  ಕಳೆದ 7 ವರ್ಷಗಳಲ್ಲಿ, ನಾವು 1.5 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳನ್ನು ಆಪ್ಟಿಕಲ್ ಫೈಬರ್‌ನೊಂದಿಗೆ ಸಂಪರ್ಕಿಸಿದ್ದೇವೆ ಎಂದು ಪ್ರಧಾನಿ ಹೇಳಿದರು.

ದೇಶದ ರೈತರು ಮತ್ತು ಮೀನುಗಾರರ ಆದಾಯವನ್ನು ಹೆಚ್ಚಿಸುವ ಸಲುವಾಗಿ, ಸಂಸ್ಕರಣೆಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಸಹ ವೇಗವಾಗಿ ವಿಸ್ತರಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. 2014 ರಲ್ಲಿ ದೇಶದಲ್ಲಿ ಕೇವಲ 2 ಮೆಗಾ ಫುಡ್ ಪಾರ್ಕ್ ಗಳಿದ್ದವು. ಇಂದು 19 ಮೆಗಾ ಫುಡ್ ಪಾರ್ಕ್ ಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈಗ ಅವುಗಳ ಸಂಖ್ಯೆಯನ್ನು 40 ಕ್ಕೂ ಹೆಚ್ಚು ಮಾಡುವ ಗುರಿಯಿದೆ. 2014 ರಲ್ಲಿ ಕೇವಲ 5 ಜಲಮಾರ್ಗಗಳಿದ್ದವು, ಇಂದು ಭಾರತವು 13 ಸಕ್ರಿಯ ಜಲಮಾರ್ಗಗಳನ್ನು ಹೊಂದಿದೆ. ಬಂದರುಗಳಲ್ಲಿನ ಹಡಗುಗಳು ಬಂದು ಮತ್ತೆ ಹೊರಡುವ ಸಮಯವು 2014 ರಲ್ಲಿದ್ದ 41 ಗಂಟೆಗಳಿಂದ 27 ಗಂಟೆಗಳವರೆಗೆ ಕಡಿಮೆಯಾಗಿದೆ. ದೇಶವು ಒನ್ ನೇಷನ್ ಒನ್ ಗ್ರಿಡ್‌ನ ಪ್ರತಿಜ್ಞೆಯನ್ನು ಸಾಕಾರಗೊಳಿಸಿದೆ. 2014 ರಲ್ಲಿದ್ದ 3 ಲಕ್ಷ ಸರ್ಕ್ಯೂಟ್ ಕಿಲೋಮೀಟರಿಗೆ ಹೋಲಿಸಿದರೆ ಇಂದು ಭಾರತದಲ್ಲಿ 4.25 ಲಕ್ಷ ಸರ್ಕ್ಯೂಟ್ ಕಿಲೋಮೀಟರ್ ವಿದ್ಯುತ್ ಪ್ರಸರಣ ಮಾರ್ಗಗಳಿವೆ ಎಂದು ಅವರು ಹೇಳಿದರು.

ಗುಣಮಟ್ಟದ ಮೂಲಸೌಕರ್ಯಗಳ ಅಭಿವೃದ್ಧಿಯೊಂದಿಗೆ ಭಾರತವು ಜಾಗತಿಕ ವ್ಯಾಪಾರದ ರಾಜಧಾನಿಯಾಗುವ ಕನಸನ್ನು ನನಸಾಗಿಸಬಹುದು ಎಂದು ಪ್ರಧಾನಿ ಭರವಸೆ ವ್ಯಕ್ತಪಡಿಸಿದರು. ನಮ್ಮ ಗುರಿಗಳು ಅಸಾಧಾರಣವಾಗಿದ್ದು ಅವುಗಳ ಸಾಕಾರಕ್ಕೆ ಅಸಾಧಾರಣ ಪ್ರಯತ್ನಗಳು ಬೇಕಾಗುತ್ತವೆ ಎಂದು ಅವರು ಹೇಳಿದರು. ಈ ಗುರಿಗಳನ್ನು ಈಡೇರಿಸುವಲ್ಲಿ, ಪಿಎಂ ಗತಿ ಶಕ್ತಿಯು ಹೆಚ್ಚು ಸಹಾಯಕವಾಗುವ ಅಂಶವಾಗಿದೆ. ಜನರಿಗೆ ಸರ್ಕಾರದ ಸೌಲಭ್ಯಗಳ ಲಭ್ಯತೆಯಲ್ಲಿ ಜೆಎಎಂ (ಜನ್ ಧನ್, ಆಧಾರ್, ಮೊಬೈಲ್) ಟ್ರಿನಿಟಿ ಕ್ರಾಂತಿ ಮಾಡಿದಂತೆ, ಪಿಎಂ ಗತಿ ಶಕ್ತಿ ಯೋಜನೆಯು ಮೂಲಸೌಕರ್ಯ ಕ್ಷೇತ್ರದಲ್ಲೂ ಅದೇ ರೀತಿಯ ಕ್ರಾಂತಿ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi