ಭಾರತವು ಇಂದು ನೂರು ಲಕ್ಷ ಕೋಟಿ ರೂಪಾಯಿಗಳ ಬಂಡವಾಳದ ಉದ್ದೇಶದಿಂದ ‘ಗತಿಶಕ್ತಿ’ ಯೋಜನೆಯ ಅಡಿಯಲ್ಲಿ ಅತ್ಯಾಧುನಿಕ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲು ದ್ವಿಗುಣ, ತ್ರಿಗುಣ ವೇಗದಲ್ಲಿ ಕೆಲಸ ಮಾಡುವ ನೀತಿಯನ್ನು ಅಳವಡಿಸಿಕೊಳ್ಳುತ್ತಿದೆ
ನಮ್ಮ ಪರ್ವತಗಳು ನಮ್ಮ ನಂಬಿಕೆ ಮತ್ತು ಸಂಸ್ಕೃತಿಯ ಪ್ರತೀಕಗಳಾಗಿ ಮಾತ್ರ ಉಳಿದಿಲ್ಲ. ಅವು ನಮ್ಮ ರಕ್ಷಣೆಯ ಯೋಧರಂತೆ, ರಕ್ಷಣೆಯ ಗೋಡೆಯಂತೆಯೂ ಕಾರ್ಯ ನಿರ್ವಹಿಸುತ್ತಿವೆ. ದೇಶದ ಅತಿ ಮುಖ್ಯ ಆದ್ಯತೆಯೆಂದರೆ ಪರ್ವತ ಪ್ರದೇಶದ ಜನತೆಯ ಜೀವನಕ್ಕೆ ಅಗತ್ಯವಿರುವ ಎಲ್ಲ ಅನುಕೂಲಗಳನ್ನೂ ಮಾಡಿಕೊಡುವುದೇ ಆಗಿದೆ
ನಮ್ಮ ಸರ್ಕಾರವು ಇಂದು ಜಗತ್ತಿನ ಯಾವುದೇ ದೇಶದ ಒತ್ತಡಕ್ಕೆ ಮಣಿಯುವುದಿಲ್ಲ. ನಮ್ಮೆಲ್ಲರದ್ದೂ ಒಂದೇ ಮಂತ್ರವಾಗಿದೆ, ದೇಶವೇ ಮೊದಲು, ದೇಶವೇ ಆದ್ಯ. ಈ ಮೂಲಮಂತ್ರದೊಂದಿಗೆ ನಾವೆಲ್ಲ ಬದುಕುತ್ತಿದ್ದೇವೆ
ನಾವು ಯಾವುದೇ ಯೋಜನೆಗಳನ್ನು ತಂದರೂ ಸರ್ವರ ಹಿತದಲ್ಲಿಯೇ ಯೋಜನೆಗಳನ್ನು ಪರಿಚಯಿಸುತ್ತೇವೆ. ಯಾವುದೇ ತರತಮವಿಲ್ಲದೆ, ಯೋಜನೆಗಳನ್ನು ನೀಡುತ್ತೇವೆ. ನಾವೆಂದಿಗೂ ಮತಬ್ಯಾಂಕಿನ ತಳಹದಿಯ ಮೇಲೆ ರಾಜಕೀಯ ಮಾಡಲಿಲ್ಲ. ಆದರೆ ಸರ್ವರ ಹಿತಾಸಕ್ತಿ, ಸರ್ವರ ಸೇವೆಯನ್ನು ಗಮನದಲ್ಲಿರಿಸಿಕೊಂಡೇ ಆಡಳಿತವನ್ನು ನೀಡುತ್ತಿದ್ದೇವೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡೆಹರಾಡೂನ್‌ನಲ್ಲಿ 18ಸಾವಿರ ಕೋಟಿಯ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ದೆಹಲಿ ಡೆಹರಾಡೂನ್‌ ಆರ್ಥಿಕ ಕಾರಿಡಾರ್‌ ಯೋಜನೆಯೂ ಇದರಲ್ಲಿ ಒಳಗೊಂಡಿದೆ. (ಪೂರ್ವದ ಹೊರವಲಯದ ಎಕ್ಸ್‌ಪ್ರೆಸ್‌ ವೇ ಜಂಕ್ಷನ್‌ನಿಂದ ಡೆಹರಾಡುನ್‌ವರೆಗಿನ ದೂರ). ದೆಹಲಿ ಡೆಹರಾಡುನ್‌ ಆರ್ಥಿಕ ಕಾರಿಡಾರ್‌ ಹಲಗೋವಾಗೆ ಸಂಪರ್ಕ ಸೇತು ಕಲ್ಪಿಸುವ ಯೋಜನೆ, ಸಹರನ್‌ಪುರದಿಂದ ಭದ್ರಾಬಾದ್‌, ಹರಿದ್ವಾರ, ಹರಿದ್ವಾರ್‌ ವರ್ತುಲ ರಸ್ತೆ ಯೋಜನೆ, ಡೆಹರಾಡುನ್‌ ಫಾವೊಂತಾ ಸಾಹಿಬ್‌ (ಹಿಮಾಚಲ್‌ ಪ್ರದೇಶ್‌) ರಸ್ತೆ ಯೋಜನೆ, ನಾಜಿಬಾಬಾದ್‌–ಕೋಡದ್ವಾರ್‌ ರಸ್ತೆ ಅಗಲೀಕರಣ ಯೋಜನೆ, ಲಕ್ಷ್ಮಣ ಝೂಲಾದ ಮುಂದೆ ಗಂಗೆಯನ್ನು ಹಾದುಹೋಗುವ ಸೇತುವೆ ಮುಂತಾದ ಯೋಜನೆಗಳ ಆರಂಭೋತ್ಸವದ ಉದ್ಘಾಟನೆ ಮಾಡಿದರು. ಜೊತೆಗೆ ಮಕ್ಕಳ ಸ್ನೇಹಿ ನಗರ ಯೋಜನೆ ಡೆಹರಾಡುನ್‌ ನೀರು ಪೂರೈಕೆ ಅಭಿವೃದ್ಧಿ, ಡೆಹರಾಡುನ್‌ ರಸ್ತೆ ಮತ್ತು ಚರಂಡಿ ವ್ಯವಸ್ಥೆ, ಬದರಿನಾಥ್‌ ಧಾಮ್‌ ಮತ್ತು ಗಂಗೋತ್ರಿ, ಯಮುನೋತ್ರಿ ಧಾಮ್‌ ಮತ್ತು ಹರಿದ್ವಾರದಲ್ಲಿ ವೈದ್ಯಕೀಯ ಕಾಲೇಜು ಸೇರಿದಂತೆ ನಿರ್ಮಾಣ ಕಾಮಗಾರಿಗಳ ಅಭಿವೃದ್ಧಿಗಳಿಗೂ ಶಿಲಾನ್ಯಾಸ ನೆರವೇರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟು ಏಳು ಯೋಜನೆಗಳನ್ನು ಉದ್ಘಾಟಿಸಿದರು. ಈ ಯೋಜನೆಗಳ ಮುಖ್ಯ ಉದ್ದೇಶ ಸುರಕ್ಷಿತ ಪ್ರಾಯಣವೇ ಆಗಿದೆ. ಈ ಭೂಪ್ರದೇಶದಲ್ಲಿ ಆಗುವ ಭೂ ಕುಸಿತವನ್ನು ತಡೆಹಿಡಿಯಲು ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ದೇವಪ್ರಯಾಗದಿಂದ ಶ್ರೀಕೋಟದವರೆಗೆ ರಸ್ತೆ ಅಗಲೀಕರಣ, ಬ್ರಹ್ಮಪುರಿಯಿಂದ ಕೋಡಿಯಾಳ ರಾಷ್ಟ್ರೀಯ ಹೆದ್ದಾರಿ 58ರ ಅಗಲೀಕರಣ, 120 ಮೆಗಾವಾಟ್ಸ್‌ ಸಾಮರ್ಥ್ಯದ ಜಲವಿದ್ಯುತ್‌ ಯೋಜನೆಯನ್ನು ಯಮುನಾ ನದಿಯ  ಮೇಲಿನ ನಿರ್ಮಾಣಗಳು, ಡೆಹರಾಡುನ್‌ನಲ್ಲಿ ಹಿಮಾಲಯನ್‌ ಸಾಂಸ್ಕೃತಿಕ ಕೇಂದ್ರ, ರಾಜ್ಯದ ಸುಗಂಧದ್ರವ್ಯ ಕಲೆಯ ರಾಜ್ಯದಲ್ಲಿ ಸುಗಂಧ ಮತ್ತು ಸುಗಂಧ ದ್ರವ್ಯ ಸಸ್ಯಗಳ ಅಭಿವೃದ್ಧಿಗೆ ಪ್ರಯೋಗಾಲಯ ಸ್ಥಾಪನೆಗಳೂ ಒಳಗೊಂಡಿವೆ.

ಈ ಕಾರ್ಯಕ್ರಮದಲ್ಲಿ ಮಾತನಾಡುತ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉತ್ತರಾಖಂಡವು ಕೇವಲ ಭಕ್ತಿ ಮತ್ತು ಶ್ರದ್ಧೆಯ ಕೇಂದ್ರವಾಗಿರುವ ರಾಜ್ಯವಾಗಿಲ್ಲ. ಇದು ಪರಿಶ್ರಮದ ಆಧಾರದ ಮೇಲೆ ನಿರ್ಮಿತವಾದ ರಾಜ್ಯವೂ ಆಗಿದೆ. ದೃಢ ನಿರ್ಧಾರ ಈ ರಾಜ್ಯದ ಇನ್ನೊಂದು ಗುಣ. ಹಾಗಾಗಿಯೇ ರಾಜ್ಯದ ಅಭಿವೃದ್ಧಿಯೇ ಈ ಡಬಲ್‌ ಎಂಜಿನ್‌ ಸರ್ಕಾರದ ಪ್ರಮುಖ ಆಧ್ಯತೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಡಬಲ್‌ ಎಂಜಿನ್‌ ರಾಜ್ಯವನ್ನು ಅಭಿವೃದ್ಧಿಯತ್ತ ಮುನ್ನಡೆಸುತ್ತದೆ.  ಈ ಶತಮಾನದ ಆರಂಭದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರು ನಮ್ಮ ರಾಷ್ಟ್ರದ ನಡುವೆ ಸಂಪರ್ಕ ರಸ್ತೆಗಳ ಜೋಡಣೆಗೆ ಹೆಚ್ಚಿನ ಮಹತ್ವ ನೀಡುವ ಅಭಿಯಾನವನ್ನು ಆರಂಭಿಸಿದರು. ಅದಾದ ನಂತರ ಎರಡು ದಶಕಗಳ ಕಾಲ ದೇಶದ ಆಡಳಿತ ಚುಕ್ಕಾಣಿ ಹಿಡಿದ ಪಕ್ಷವು ಅದೆಷ್ಟು ನಿಷ್ಕ್ರಿಯವಾಗಿತ್ತು ಎಂದರೆ ಒಂದು ದಶಕದ ಅವಧಿಯನ್ನು ದೇಶದಲ್ಲಿ ಹಾಗೂ ಉತ್ತರಾಖಂಡದ ಬೆಳವಣಿಗೆಯಲ್ಲಿ ನಿರುಪಯುಕ್ತವಾದವು. ಹತ್ತು ವರ್ಷಗಳ ಕಾಲ ದೇಶದಲ್ಲಿ ಕೇವಲ ಹಗರಣಗಳಾದವು. ಕಾಮಗಾರಿಗಳ ಹೆಸರಿನಲ್ಲಿ ಹಗರಣಗಳಾದವು. ಆ ಸಮಯದಲ್ಲಿ ಆದ ಹಾನಿಯನ್ನು ಸರಿದೂಗಿಸಲು ನಾವು ದುಡಿಯುವ ಅವಧಿಯನ್ನು ದ್ವಿಗುಣಗೊಳಿಸಿ ಶ್ರಮಿಸಿದೆವು. ಈಗಲೂ ಪರಿಶ್ರಮಿಸುತ್ತಿದ್ದೇವೆ. ಈಗ ದುಡಿಮೆಯ ಶೈಲಿಯೇ ಬದಲಾಗಿದೆ. ಇಂದು ಭಾರತವು ಎಲ್ಲರಿಗಿಂತಲೂ ಮುಂದೆ ಹೆಜ್ಜೆ ಹಾಕುತ್ತಿದೆ. ದೇಶದಲ್ಲಿ ನೂರು ಲಕ್ಷ ಕೋಟಿ ರೂಪಾಯಿಯ ಅತ್ಯಾಧುನಿಕ ನಿರ್ಮಾಣ ಕಾಮಗಾರಿಯಲ್ಲಿ ಬಂಡವಾಳ ಹೂಡುವ ಉದ್ದೇಶ ಹೊಂದಿದೆ. ಭಾರತದ ಪ್ರಸಕ್ತ ನೀತಿ ’ಗತಿಶಕ್ತಿ’ ಎಂಬುದಾಗಿದೆ. ಅಂದರೆ ದ್ವಿಗುಣ ಅಥವಾ ತ್ರಿಗುಣ ವೇಗದಲ್ಲಿ ಕೆಲಸ ಮಾಡುವುದೇ ಆಗಿದೆ ಎಂದು ಹೇಳಿದರು.

ದೇಶದಲ್ಲಿ ಸಾರಿಗೆ ಸಂಪರ್ಕ ಕ್ರಾಂತಿಯ ಮಹತ್ವದ ಕುರಿತು ಗಮನ ಸೆಳೆಯುತ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇದಾರ್‌ನಾಥ ದುರಂತದ ಮೊದಲು 2012ರಲ್ಲಿ 5 ಲಕ್ಷ 70 ಸಾವಿರ ಜನ ಭಕ್ತರು ಭೇಟಿ ನೀಡಿ ದರ್ಶನ ಪಡೆದಿದ್ದರು. ಅದು ಆ ಕಾಲದ ದಾಖಲೆಯಾಗಿದೆ. ಕೊರೊನಾ ಅವಧಿಗೂ ಮುನ್ನ, 2019ರಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನ ಕೇದಾರನಾಥ ದರ್ಶನ ಪಡೆದಿದ್ದರು. ಕೇದಾರನಾಥ್‌ದ ಕೇದಾರಧಾಮದ ಮರು ನಿರ್ಮಾಣದಿಂದಾಗಿ  ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅಷ್ಟೇ ಅಲ್ಲ, ಅಲ್ಲಿಯ ಸ್ಥಳೀಯ ವಾಸಿಗಳಿಗೆ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಸ್ವಯಂ ಉದ್ಯೋಗಕ್ಕೂ ಸಾಕಷ್ಟು ಉತ್ತೇಜನ ನೀಡಿದೆ. 

ದೆಹಲಿ ಮತ್ತು ಡೆಹರಾಡೂನ್‌ ಆರ್ಥಿಕ ಕಾರಿಡಾರ್‌ಗೆ ಶಿಲಾನ್ಯಾಸ ಕೈಗೊಂಡು ಸಂತಸ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಕಾರಿಡಾರ್‌ ಸಿದ್ಧವಾದಾಗ ಡೆಹರಾಡುನ್‌ ಹಾಗೂ ದೆಹಲಿ ನಡುವಿನ ಅಂತರ ತೆಗೆದುಕೊಳ್ಳುವ ‍ಪ್ರಯಾಣದ ಅವಧಿ ಅರ್ಧಕ್ಕೆ ಇಳಿಯುತ್ತದೆ ಎಂದು ತಿಳಿಸಿದರು. ನಮ್ಮ ಪರ್ವತಗಳು ಕೇವಲ ನಮ್ಮ ನಂಬಿಕೆ ಮತ್ತು ಸಂಸ್ಕೃತಿಯ ಪ್ರತೀಕಗಳಾಗಿಲ್ಲ. ಅವು ನಮ್ಮದೇಶದ ಸುರಕ್ಷೆಯನ್ನು ಕಾಪಾಡುವ ಗಡಿಗಳೂ ಆಗಿವೆ. ನಮ್ಮ ದೇಶದ ಪ್ರಮುಖ ಆದ್ಯತೆ ಸದ್ಯಕ್ಕೆ ಪರ್ವತ ಪ್ರದೇಶದ ವಾಸಿಗಳಿಗೆ ಅಗತ್ಯ ಇರುವ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸುವುದಾಗಿದೆ. ದುರದೃಷ್ಟದ ಸಂಗತಿಯೆಂದರೆ ದಶಕಗಳ ಕಾಲ ಆಡಳಿತದಲ್ಲಿದ್ದ ಪಕ್ಷವೊಂದಕ್ಕೆ ಸರ್ಕಾರಕ್ಕೆ ಈ ಬಗ್ಗೆ ಕಿಂಚಿತ್ತೂ ಕಾಳಜಿ ಇರಲಿಲ್ಲ. ಆ ನೀತಿಗಳಲ್ಲಿ ಈ ಭಾಗದ ಜನರಿಗೆ ಅನುಕೂಲವಾಗುವ ಯಾವುದೇ ಯೋಜನೆಗಳನ್ನೂ ತರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಅಭಿವೃದ್ಧಿಯ ವೇಗವನ್ನು ವಿಷದೀಕರಿಸುತ್ತ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು 2007 ಹಾಗೂ 2014ರ ಅವಧಿಯಲ್ಲಿ ಕೇಂದ್ರ ಸರ್ಕಾರವು ಕೇವಲ 288 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಉತ್ತರಾಖಂಡದಲ್ಲಿ ನಿರ್ಮಿಸಿತ್ತು. ಏಳು ವರ್ಷಗಳ ಅವಧಿಯಲ್ಲಿ ವೇಗ ಇಷ್ಟೇ ಸಾಧ್ಯವಾಗಿದ್ದು.   ಸದ್ಯದ ಸರ್ಕಾರವು ಈ ಏಳು ವರ್ಷಗಳಲ್ಲಿ 2000 ಕಿ.ಮೀ.ಗಳ ಹೆದ್ದಾರಿಯನ್ನು ನಿರ್ಮಿಸಿದೆ ಎಂದು ವಿವರಿಸಿದರು. 

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಹಿಂದಿನ ಸರ್ಕಾರವು ಪರ್ವತ ಪ್ರದೇಶದ ಗಡಿಭಾಗಗಳಲ್ಲಿ  ಕಟ್ಟಡ ಕಾಮಗಾರಿಗಳಂತಹ ನಿರ್ಮಾಣಾತ್ಮಕ ಮೂಲಸೌಲಭ್ಯಗಳತ್ತ ಹೆಚ್ಚು ಒಲವು ತೋರಲಿಲ್ಲ. ಈ ಭಾಗದ ಅಭಿವೃದ್ಧಿಗೆ ಗಾಂಭೀರ್ಯವಾದ ಪ್ರಯತ್ನಗಳೇ ಸಾಗಲಿಲ್ಲ. ಗಡಿಪ್ರದೇಶದ ಸಮೀಪದಲ್ಲಿ ರಸ್ತೆಗಳನ್ನು ನಿರ್ಮಿಸಬೇಕು ಎಂಬ ಕಡೆ ಅವರು ಗಮನ ಕೊಡಲಿಲ್ಲ.  ಒಂದು ಶ್ರೇಣಿ, ಒಂದೇ ಪಿಂಚಣಿ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಭಯೋತ್ಪಾದಕರಿಗೆ ಬಲವಾದ ಉತ್ತರ ನೀಡುವುದು, ಇಂಥ ವಿಷಯಗಳನ್ನು ಸಮರ್ಪಕವಾಗಿ ನಿಭಾಯಿಸಲು ಆಗಲಿಲ್ಲ. ಹಾಗಾಗಿ ಸೇನೆಯಲ್ಲಿ ನೈತಿಕ ಸ್ಥೈರ್ಯ ಕುಸಿದಂತೆ ಮಾಡಿತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗಮನ ಸೆಳೆದರು.   ಇಂದಿನ ಸರ್ಕಾರವು ಯಾವುದೇ ದೇಶದ ಒತ್ತಡಗಳೀಗೆ ಮಣಿಯುವುದಿಲ್ಲ. ಜಗತ್ತಿನ ಯಾವುದೇ ದೇಶವು ನಮ್ಮ ಮೇಲೆ ಒತ್ತಡ ಹಾಕಲಾಗುವುದಿಲ್ಲ. ನಮ್ಮ ದೇಶದ ಜನರು ದೇಶ ಮೊದಲು, ದೇಶವೇ ಆದ್ಯ ಎಂಬ ಮಂತ್ರವನ್ನು ಉಚ್ಚರಿಸುವವರೇ ಆಗಿದ್ದಾರೆ ಎಂದು ಹೇಳಿದರು. 

ದೇಶದ ಜನತೆಯಲ್ಲಿ ಒಂದೇ ಧರ್ಮದ ಜಾತಿಯ ಜನರ ಮೆಚ್ಚುಗೆಗಳಿಸಲೆಂದೇ ವರ್ತಿಸುವಂಥ ಯೋಜನೆಗಳ ಕುರಿತು ಟೀಕಿಸಿದರು. ಈ ತರತಮದ ನೀತಿಗಳ ಕುರಿತು ಕಟುವಾಗಿ ಮಾತನಾಡಿದ ಅವರು ಜನರನ್ನು ಸದೃಢರಾಗಿಸದೇ, ಸರ್ಕಾರದ ಮೇಲೆ ಅವಲಂಬಿತರಾಗಿಸುವಂಥ ಸರ್ಕಾರಿ ಯೋಜನೆಗಳ ಕುರಿತೂ ವಿಮರ್ಶೆ ಮಾಡಿದರು. ಜನರು ತಮ್ಮ ಅಗತ್ಯಗಳಿಗೆ ಸರ್ಕಾರವನ್ನು ಅವಲಂಬಿಸಬೇಕಾದ ಆಡಳಿತವು ಜನಪರವಾಗಿರುವುದಿಲ್ಲ ಎಂದು ಹೇಳಿದರು. ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಾವು ಆರಂಭಿಸಿದ ವಿಭಿನ್ನ ಮಾರ್ಗದ ಕುರಿತು ಗಮನಸೆಳೆದರು.  ಇದೊಂದು ಕಷ್ಟಸಾಧ್ಯವಾದ ಮಾರ್ಗ. ನಿಜವಾಗಲೂ ಕಷ್ಟವಾದುದು. ಆದರೆ ದೇಶದ ಹಿತಾಸಕ್ತಿಯ ವಿಷಯ ಬಂದಾಗ ಜನರ ಹಿತಾಸಕ್ತಿಯ ವಿಷಯ ಬಂದಾಗ ಇದು ಎಲ್ಲರ ಜೊತೆಗೆ, ಎಲ್ಲರ ವಿಕಾಸ ಎಂಬ ಮಾರ್ಗ ಇದು. ನಾವು ಈ ವರೆಗೆ ಯಾವುದೇ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಎಲ್ಲರಿಗಾಗಿ ತರಲಾಯಿತು. ತರತಮ ನೀತಿಯನ್ನು ಎಲ್ಲಿಯೂ ಪಾಲಿಸಲಿಲ್ಲ. ಮತ ಬ್ಯಾಂಕ್‌ನಂಥ ಕೀಳುಮಟ್ಟದ ರಾಜಕಾರಣ ಮಾಡಲಿಲ್ಲ. ಜನಹಿತಕ್ಕಾಗಿ ಜನ ಸೇವೆಗಾಗಿ ಮೊದಲ ಆದ್ಯತೆ ನೀಡಲಾಯಿತು. ದೇಶವನ್ನು ಬಲಪಡಿಸುವುದೇ ನಮ್ಮ ಗುರಿ ಉದ್ದೇಶವಾಗಿದೆ ಎಂದು ಒತ್ತಿ ಹೇಳಿದರು.

ಅಮೃತ ಕಾಲದ ಈ ಅವಧಿಯಲ್ಲಿ ದೇಶವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ವೇಗ ತೀವ್ರಗೊಂಡಿದೆ. ನಾವಿನ್ನು ನಿಲ್ಲುವುದಿಲ್ಲ. ಯಾವ ಅಡೆತಡೆಗಳೂ ನಮ್ಮ ಮತ್ತು ಅಭಿವೃದ್ಧಿಯ ನಡುವೆ ಬರುವುದಿಲ್ಲ. ವಿಶ್ವಾಸ ಮತ್ತು ದೃಢ ನಿಶ್ಚಯದ ಹೆಜ್ಜೆಗಳು ನಮ್ಮವು ಆಗಲಿವೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶ್ವಾಸ ಮೂಡಿಸುವ ಈ ಕವನ ವಾಚನ ಮಾಡಿದರು.

“जहाँ पवन बहे संकल्प लिए,

जहाँ पर्वत गर्व सिखाते हैं,

जहाँ ऊँचे नीचे सब रस्ते

बस भक्ति के सुर में गाते हैं

उस देव भूमि के ध्यान से ही

उस देव भूमि के ध्यान से ही

मैं सदा धन्य हो जाता हूँ

है भाग्य मेरा,

सौभाग्य मेरा,

मैं तुमको शीश नवाता हूँ


तुम आँचल हो भारत माँ का

जीवन की धूप में छाँव हो तुम

बस छूने से ही तर जाएँ

सबसे पवित्र वो धरा हो तुम

बस लिए समर्पण तन मन से

मैं देव भूमि में आता हूँ

मैं देव भूमि में आता हूँ

है भाग्य मेरा

सौभाग्य मेरा

मैं तुमको शीश नवाता हूँ


जहाँ अंजुली में गंगा जल हो

जहाँ हर एक मन बस निश्छल हो

जहाँ गाँव गाँव में देश भक्त

जहाँ नारी में सच्चा बल हो

उस देवभूमि का आशीर्वाद लिए

मैं चलता जाता हूँ

उस देवभूमि का आशीर्वाद

मैं चलता जाता हूँ

है भाग्य मेरा

सौभाग्य मेरा

मैं तुमको शीश नवाता हूँ


मंडवे की रोटी

हुड़के की थाप

हर एक मन करता

शिवजी का जाप

ऋषि मुनियों की है

ये तपो भूमि

कितने वीरों की

ये जन्म भूमि

मैं तुमको शीश नवाता हूँ और धन्य धन्य हो जाता हूँ

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
PM Modi congratulates hockey team for winning Women's Asian Champions Trophy
November 21, 2024

The Prime Minister Shri Narendra Modi today congratulated the Indian Hockey team on winning the Women's Asian Champions Trophy.

Shri Modi said that their win will motivate upcoming athletes.

The Prime Minister posted on X:

"A phenomenal accomplishment!

Congratulations to our hockey team on winning the Women's Asian Champions Trophy. They played exceptionally well through the tournament. Their success will motivate many upcoming athletes."