ಶ್ರೀ ಆದಿ ಶಂಕರಾಚಾರ್ಯರ ಸಮಾಧಿ ಉದ್ಘಾಟನೆ ಮತ್ತು ಶ್ರೀ ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣ
“ಬಾಬ ಕೇದಾರನಾಥ ಧಾಮದಲ್ಲಿ ನನಗೆ ಕೆಲವು ಅನುಭವಗಳು ತುಂಬಾ ಅಲೌಕಿಕವಾಗಿವೆ, ಅವುಗಳನ್ನು ಪದಗಳನ್ನು ಅಭಿವ್ಯಕ್ತಪಡಿಸಲು ಸಾಧ್ಯವಿಲ್ಲದಷ್ಟು ಅಪರಿಮಿತವಾಗಿವೆ ಎಂಬ ಭಾವನೆಯಾಗುತ್ತಿದೆ”
“ಆದಿ ಶಂಕರಾಚಾರ್ಯರ ಜೀವನ ಅಸಾಧಾರಣವಾದುದು, ಏಕೆಂದರೆ ಅದನ್ನು ಸಾಮಾನ್ಯ ಜನರ ಕಲ್ಯಾಣಕ್ಕಾಗಿ ಮೀಸಲಿಡಲಾಗಿತ್ತು”
“ಭಾರತೀಯ ತತ್ವಶಾಸ್ತ್ರವು ಮಾನವ ಕಲ್ಯಾಣದ ಬಗ್ಗೆ ಮಾತನಾಡುತ್ತದೆ ಮತ್ತು ಜೀವನವನ್ನು ಸಮಗ್ರವಾಗಿ ನೋಡುತ್ತದೆ. ಈ ಸತ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಆದಿ ಶಂಕರಾಚಾರ್ಯರು ಮಾಡಿದರು”
“ನಮ್ಮ ಸಾಂಸ್ಕೃತಿಕ ಪರಂಪರೆಯ ನಂಬಿಕೆಯು ಸಾಧ್ಯವಾದಷ್ಟೂ ವಿಶ್ವಾಸಾರ್ಹ ಮತ್ತು ಹೆಮ್ಮೆಯಿಂದ ನೋಡಲಾಗುತ್ತದೆ”
“ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಅಯೋಧ್ಯೆಯ ಗತ ವೈಭವ ಮರಳಿ ಪಡೆಯುತ್ತಿದೆ”
“ಭಾರತವು ಇಂದು ತನಗೆ ತಾನೇ ಕಠಿಣ ಗುರಿ ಮತ್ತು ಗಡುವುಗಳನ್ನು ಹಾಕಿಕೊಳ್ಳುತ್ತದೆ. ಇಂದು ಭಾರತವು ಗಡುವು ಮತ್ತು ಗುರಿಗಳ ಬಗ್ಗೆ ಅಂಜುಬುರಕವಾಗಿದೆ ಎಂಬುದನ್ನು ಒಪ್ಪಲಾಗದು”
“ಉತ್ತರಾಖಂಡ್ ಜನರ ಅಪಾರ ಸಾಮರ್ಥ್ಯ ಮತ್ತು ಅವರ ಸಾಮರ್ಥ್ಯದಲ್ಲಿರುವ ಸಂಪೂರ್ಣ ನಂಬಿಕೆಯನ್ನು ಗಮನದಲ್ಲಿರಿಸಿಕೊಂಡು, ರಾಜ್ಯ ಸರ್ಕಾರ ಉತ್ತರಾಖಂಡ್ ದ ಅಭಿವೃದ್ಧಿ ‘ಮಹಾಯಜ್ಞ’ ದಲ್ಲಿ ತೊಡಗಿಸಿಕೊಂಡಿದೆ”

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇದಾರನಾಥದಲ್ಲಿಂದು ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು ಮತ್ತು ಪೂರ್ಣಗೊಂಡಿರುವ ಹಲವು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಅವರು ಶ್ರೀ ಆದಿ ಶಂಕರಾಚಾರ್ಯರ ಸಮಾಧಿಯನ್ನು ಉದ್ಘಾಟಿಸಿದರು ಮತ್ತು ಶ್ರೀ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಅಲ್ಲದೆ, ಅವರು ಹಾಲಿ ನಡೆಯುತ್ತಿರುವ ಹಾಗೂ ಪೂರ್ಣಗೊಂಡಿರುವ ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಿದರು.

ಪ್ರಧಾನಮಂತ್ರಿ ಅವರು ಕೇದಾರನಾಥದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕೇದಾರನಾಥದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಜೊತೆಗೆ 12 ಜ್ಯೋತಿರ್ಲಿಂಗಗಳು ಮತ್ತು 4 ಧಾಮಗಳು ಮತ್ತು ದೇಶಾದ್ಯಂತ ಅನೇಕ ನಂಬಿಕೆಯ ಸ್ಥಳಗಳಲ್ಲಿ ಪ್ರಾರ್ಥನೆಗಳು ಹಾಗೂ ಆಚರಣೆಗಳನ್ನು ನಡೆಸಲಾಯಿತು. 

ನಂತರ ಅಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಭಾರತದ ಶ್ರೇಷ್ಠ ಆಧ್ಯಾತ್ಮಿಕ ಖುಷಿ ಸಂಪ್ರದಾಯವನ್ನು ಮೆಲುಕು ಹಾಕಿದರು ಮತ್ತು ಕೇದಾರನಾಥ ಧಾಮಕ್ಕೆ ಬಂದಿದ್ದಕ್ಕಾಗಿ  ಆಗಿರುವ ವರ್ಣನಾತೀತ ಸಂತೋಷವನ್ನು ವ್ಯಕ್ತಪಡಿಸಿದರು. ನಿನ್ನೆ ನೌಶೇರಾದಲ್ಲಿ ಯೋಧರೊಂದಿಗೆ ನಡೆಸಿದ ಸಂವಾದವನ್ನು ನೆನಪು ಮಾಡಿಕೊಂಡ ಅವರು, ನಿನ್ನೆ ದೀಪಾವಳಿಯಂದು 130 ಕೋಟಿ ಭಾರತೀಯರ ಭಾವನೆಗಳನ್ನು ಯೋಧರಿಗೆ ಕೊಂಡೊಯ್ಯಲಾಗಿತ್ತು, ಇಂದು ಗೋವರ್ಧನ ಪೂಜೆಯಂದು ನಾನು ಯೋಧರ ನಾಡಿನಲ್ಲಿದ್ದೇನೆ ಮತ್ತು ಬಾಬ ಕೇದಾರರ ದಿವ್ಯ ಸಾನಿಧ್ಯದಲ್ಲಿದ್ದೇನೆ ಎಂದರು. ಪ್ರಧಾನಮಂತ್ರಿ ಅವರು ರಾಮಚರಿತ ಮಾನಸದಿಂದ ಪದ್ಯವನ್ನು  'अबिगत अकथ अपार, नेति-नेति नित निगम कह'      ಉಲ್ಲೇಖಿಸಿ ಕೆಲವು ಅನುಭವಗಳು ಅಲೌಕಿಕವಾಗಿರುತ್ತವೆ. ಮತ್ತು ಅವುಗಳನ್ನು ಪದಗಳಲ್ಲಿ ವರ್ಣಿಸಲಾಗದು . ಅಂತಹ ಅನುಭವ ತನಗೆ ಬಾಬಾ ಕೇದಾರನಾಥನ ದಿವ್ಯ ಸನ್ನಿಧಿಯಲ್ಲಿ ಆಗುತ್ತಿದೆ ಎಂದರು.

ಆಶ್ರಯ, ಸಹಾಯ ಕೇಂದ್ರಗಳಂತಹ ಸೌಲಭ್ಯಗಳು ಅರ್ಚಕರು ಮತ್ತು ಭಕ್ತಾದಿಗಳ ಜೀವನವನ್ನು ಸುಗಮಗೊಳಿಸಲಿವೆ ಮತ್ತು ಅವರು ತೀರ್ಥಯಾತ್ರೆಯ ಸಂಪೂರ್ಣ ಅನುಭವವನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಕೇದಾರನಾಥದಲ್ಲಿ 2013ರಲ್ಲಿ ಉಂಟಾಗಿದ್ದ ಪ್ರವಾಹವನ್ನು ನೆನಪು ಮಾಡಿಕೊಂಡ ಪ್ರಧಾನಮಂತ್ರಿ, ವರ್ಷಗಳ ಹಿಂದೆ ಉಂಟಾದ ಪ್ರವಾಹದಿಂದ ಆದ ಹಾನಿಯನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಹೇಳಿದರು. “ಇಲ್ಲಿಗೆ ಬರುತ್ತಿದ್ದ ಜನರು ಈ ನಮ್ಮ ಕೇದಾರ ಎದ್ದು ನಿಲ್ಲುತ್ತದೆಯೇ? ಎಂದು ಕೇಳುತ್ತಿದ್ದರು. ಆದರೆ ನನ್ನೊಳಗಿನ ಧ್ವನಿ ಹೇಳುತ್ತಿತ್ತು, ಕೇದಾರನಾಥ ಮೊದಲಿಗಿಂತಲೂ ಹೆಚ್ಚು ಹೆಮ್ಮೆಯಿಂದ ಎದ್ದು ನಿಲ್ಲುತ್ತದೆ” ಎಂದು.

ಕೇದಾರ ಭಗವಂತನ ಕೃಪೆ ಮತ್ತು ಆದಿ ಶಂಕರಾಚಾರ್ಯರ ಪ್ರೇರಣೆ ಹಾಗೂ ಭುಜ್ ಭೂಕಂಪದ ನಂತರ ಪರಿಣಾಮಗಳನ್ನು ನಿರ್ವಹಿಸಿದ ಅನುಭವದಿಂದಾಗಿ ಸಂಕಷ್ಟ ಸಮಯದಲ್ಲಿ ಸಹಾಯ ಮಾಡಬಹುದು ಎಂದೆನಿಸಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡ ಅವರು, ತಮ್ಮ ಜೀವನದ ಆರಂಭದಲ್ಲಿ ತಮ್ಮನ್ನು ಪೋಷಿಸಿದ ಸ್ಥಳಕ್ಕೆ ಸೇವೆ ಸಲ್ಲಿಸಲು ಇದು ಒಂದು ಅದೃಷ್ಟ ಎಂದರು. ಧಾಮದ ಅಭಿವೃದ್ಧಿ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿರುವ ಎಲ್ಲ ಕಾರ್ಯಕರ್ತರು, ಅರ್ಚಕರು, ಅರ್ಚಕರ ಕುಟುಂಬಗಳು ಮತ್ತು ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಪ್ರಧಾನಮಂತ್ರಿ ಧನ್ಯವಾದಗಳನ್ನು ಹೇಳಿದರು. ನಾನು ಡ್ರೋಣ್ ಮತ್ತಿತರ ತಂತ್ರಜ್ಞಾನದ ವಿಧಾನಗಳ ಮೂಲಕ ಕಾಮಗಾರಿಯ ಮೇಲೆ ನಿಗಾ ಇರಿಸಿದ್ದೆ ಎಂದರು. “ಈ ಪ್ರಾಚೀನ ತಪೋಭೂಮಿಯಲ್ಲಿ ಶಾಶ್ವತವಾದ ಆಧುನಿಕತೆಯ ಸಂಯೋಜನೆಯಿಂದಾಗಿ ನಡೆದ ಅಭಿವೃದ್ಧಿ ಕಾರ್ಯಗಳಿಗೆ ಭಗವಾನ್ ಶಂಕರನ ನೈಸರ್ಗಿಕ ಅನುಗ್ರಹದ ಫಲಿತಾಂಶವಾಗಿದೆ “ಎಂದು ಹೇಳಿದರು.

ಆದಿ ಶಂಕರಾಚಾರ್ಯರ ಕುರಿತು ಮಾತನಾಡಿದ ಶ್ರೀ ನರೇಂದ್ರ ಮೋದಿ, ಸಂಸ್ಕೃತದಲ್ಲಿ ಶಂಕರ ಎಂದರೆ “ಶಂ ಕರೋತಿ ಸಃ ಶಂಕರಃ”  ಎಂದು. ಅಂದರೆ ಕಲ್ಯಾಣ ಮಾಡುವವನು ಶಂಕರ. ಈ ವಾಕ್ಯರಣವನ್ನು ಸ್ವತಃ ಆಚಾರ್ಯ ಶಂಕರರೇ ನಿರೂಪಿಸಿದ್ದಾರೆ. ಅವರ ಜೀವನ ಅಸಾಧಾರಣವಾದುದು ಏಕೆಂದರೆ ಅವರು ಸಾಮಾನ್ಯ ಜನರ ಕಲ್ಯಾಣಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಅವರು ಹೇಳಿದರು. ಆಧುನಿಕತೆ ಮತ್ತು ಧರ್ಮವು ಏಕತಾನತೆ ಮತ್ತು ಹಳತಾದ ಆಚರಣೆಗಳೊಂದಿಗೆ ಸಂಬಂಧ ಹೊಂದಲು ಸಮಯವಿತ್ತು ಎಂದು ಪ್ರಧಾನಮಂತ್ರಿ ಸ್ಮರಿಸಿದರು. ಆದರೆ ಭಾರತೀಯ ತತ್ವಶಾಸ್ತ್ರ ಮಾನವ ಕಲ್ಯಾಣದ ಬಗ್ಗೆ ಮಾತನಾಡುತ್ತದೆ ಮತ್ತು ಜೀವನವನ್ನು ಸಮಗ್ರವಾಗಿ ನೋಡುತ್ತದೆ. ಸಮಾಜಕ್ಕೆ ಈ ಸತ್ಯದ ಅರಿವನ್ನು ಮೂಡಿಸುವ ಕಾರ್ಯವನ್ನು ಆದಿ ಶಂಕರಾಚಾರ್ಯರು ಮಾಡಿದ್ದಾರೆ ಎಂದರು. 

ಇಂದು ನಮ್ಮ ಸಾಂಸ್ಕೃತಿಕ ಪರಂಪರೆಯ ನಂಬಿಕೆಯ ಕೇಂದ್ರಗಳನ್ನು ಸಾಧ್ಯವಾದಷ್ಟೂ  ವಿಶ್ವಾಸಾರ್ಹ ಮತ್ತು ಹೆಮ್ಮೆಯಿಂದ ನೋಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ, ಅಯೋಧ್ಯೆಗೆ ತನ್ನ ಗತ ವೈಭವ ಮರಳುತ್ತಿದೆ. ಎರಡು ದಿನಗಳ ಹಿಂದೆ, ಅಯೋಧ್ಯೆಯಲ್ಲಿನ ಅದ್ದೂರಿ ದೀಪೋತ್ಸವದ ಆಚರಣೆಯನ್ನು ಇಡೀ ಜಗತ್ತು ನೋಡಿದೆ ಎಂದರು. ಇಂದು ನಾವು ಭಾರತದ ಪ್ರಾಚೀನ ಸಾಂಸ್ಕೃತಿಕ ರೂಪ ಹೇಗಿದ್ದೀರಬಹುದೆಂದು ಊಹಿಸಿಕೊಳ್ಳಬಹುದು ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಇಂದಿನ ಭಾರತಕ್ಕೆ ತನ್ನ ಪರಂಪರೆಯ ಬಗ್ಗೆ ವಿಶ್ವಾಸವಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ಭಾರತ ಇಂದು ತಾನೇ ಕಠಿಣ ಗುರಿಗಳನ್ನು ಮತ್ತು ಗಡುವುಗಳನ್ನು ಹಾಕಿಕೊಳ್ಳುತ್ತದೆ. ಇಂದು ಭಾರತ ಗಡುವುಗಳು ಮತ್ತು ಗುರಿಗಳಿಗೆ ಅಂಜುತ್ತದೆ ಎಂಬುದು ಸ್ವೀಕಾರಾರ್ಹವಲ್ಲ “ಎಂದು ಪ್ರಧಾನಮಂತ್ರಿ ಹೇಳಿದರು.

ಸ್ವಾತಂತ್ರ್ಯ ಸಂಗ್ರಾಮದ ವೀರರ ಕೊಡುಗೆ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು “ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ವೈಭವದ ಸ್ಥಳಗಳಿಗೆ ಮತ್ತು ಧಾರ್ಮಿಕ ಯಾತ್ರಾ ಸ್ಥಳಗಳಿಗೆ  ಭೇಟಿ ನೀಡಬೇಕು ಮತ್ತು ಭಾರತದ ಆತ್ಮವನ್ನು ಪರಿಚಯ ಮಾಡಿಕೊಳ್ಳಬೇಕು” ಎಂದು ದೇಶವಾಸಿಗಳನ್ನು ಕೋರಿದರು.

21ನೇ ಶತಮಾನದ ಮೂರನೇ ದಶಕ ಉತ್ತರಾಖಂಡ್ ಗೆ ಸಂಬಂಧಿಸಿದ್ದು ಎಂದು ಪ್ರಧಾನಮಂತ್ರಿ ಹೇಳಿದರು. ಚಾರ್ ಧಾಮ್ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಚಾರ್ ಧಾಮ್ ರಸ್ತೆ ಯೋಜನೆಯ ಕಾಮಗಾರಿ ಅತ್ಯಂತ ವೇಗವಾಗಿ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಭವಿಷ್ಯದಲ್ಲಿ ಕೇಬಲ್ ಕಾರ್ ಮೂಲಕ ಕೇದಾರನಾಥ ಜಿ ದರ್ಶನಕ್ಕೆ ಇಲ್ಲಿಗೆ ಬರುವಂತೆ ಕೆಲಸ ಆರಂಭಿಸಲಾಗಿದೆ ಎಂದರು. ಇಲ್ಲಿ ಪವಿತ್ರ ಹೇಮಕುಂಡ್ ಸಾಹಿಬ್ ಜಿ ಕೂಡ ಇದೆ. ಹೇಮಕುಂಡ್ ಸಾಹೀಬ್ ಜಿ ಯಲ್ಲಿ ದರ್ಶನವನ್ನು ಸುಲಭವಾಗಿಸಲು ರೋಪ್ ವೇ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. “ಉತ್ತರಾಖಂಡ್ ಜನರ ಅಪಾರ ಸಾಮರ್ಥ್ಯ ಮತ್ತು ಅವರ ಸಾಮರ್ಥ್ಯದಲ್ಲಿರುವ ಸಂಪೂರ್ಣ ನಂಬಿಕೆಯನ್ನು ಗಮನದಲ್ಲಿರಿಸಿಕೊಂಡು, ರಾಜ್ಯ ಸರ್ಕಾರ ಉತ್ತರಾಖಂಡ್ ದ ಅಭಿವೃದ್ಧಿ ‘ಮಹಾಯಜ್ಞ’ ದಲ್ಲಿ ತೊಡಗಿಸಿಕೊಂಡಿದೆ” ಎಂದು ಹೇಳಿದರು.

ಕೊರೊನಾ ವಿರುದ್ಧದ ಹೋರಾಟದಲ್ಲಿ ಉತ್ತರಾಖಂಡ್ ತೋರಿದ ಶಿಸ್ತನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಭೌಗೋಳಿಕ ಸಮಸ್ಯೆಗಳನ್ನು ನಿವಾರಿಸಿಕೊಂಡು ಇಂದು ಉತ್ತರಾಖಂಡ್ ಮತ್ತು ಅದರ ಜನರು ಶೇ.100ರಷ್ಟು ಒಂದು ಡೋಸ್ ಲಸಿಕೆ ನೀಡಿಕೆ ಗುರಿಯನ್ನು ಸಾಧಿಸಿದೆ.  ಇದು ಉತ್ತರಾಖಂಡ್ ನ ಸಾಮರ್ಥ್ಯ ಮತ್ತು ಶಕ್ತಿಯಾಗಿದೆ ಎಂದರು. “ಉತ್ತರಾಖಂಡ್ ಅತಿ ಎತ್ತರದಲ್ಲಿ ನೆಲೆಗೊಂಡಿದೆ. ನನ್ನ ಉತ್ತರಾಖಂಡವು ತನ್ನದೇ ಆದ ಎತ್ತರಕ್ಕಿಂತ ಹೆಚ್ಚಿನ ಎತ್ತರವನ್ನು ತಲುಪುತ್ತದೆ”ಎಂದು ಪ್ರಧಾನಮಂತ್ರಿ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

ಶ್ರೀ ಆದಿ ಶಂಕರಾಚಾರ್ಯರ ಸಮಾಧಿ 2013ರ ಪ್ರವಾಹದಲ್ಲಿ ಸಂಪೂರ್ಣ ಹಾಳಾಗಿತ್ತು, ನಂತರ ಅದನ್ನು ಪುನರ್ ನಿರ್ಮಿಸಲಾಗಿದೆ. ಇಡೀ ಪುನರ್ ನಿರ್ಮಾಣ ಕಾಮಗಾರಿಯನ್ನು ಪ್ರಧಾನಮಂತ್ರಿಯವರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿದೆ, ಅವರೇ ಖುದ್ದು ಯೋಜನೆಯನ್ನು ನಿರಂತರವಾಗಿ ಪರಾಮರ್ಶಿಸುತ್ತಿದ್ದರು ಮತ್ತು ಪ್ರಗತಿಯ ಮೇಲ್ವಿಚಾರಣೆ ನಡೆಸಿದರು. ಇಂದೂ ಕೂಡ ಪ್ರಧಾನಮಂತ್ರಿ ಅವರು ಸರಸ್ವತಿ ಅಷ್ಟಪಥದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ತಪಾಸಣೆ ಮಾಡಿದರು ಮತ್ತು ಪರಿಶೀಲಿಸಿದರು. ಸರಸ್ವತಿ ತಡೆ ಗೋಡೆ, ಅಷ್ಟಪಥ ಮತ್ತು ಘಾಟ್ ಗಳು, ಮಂದಾಕಿನಿ ತಡೆ ಗೋಡೆ ಅಷ್ಟಪಥ, ತೀರ್ಥ ಪುರೋಹಿತರ ಮನೆಗಳು ಮತ್ತು ಮಂದಾಕಿನಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಗರುಡ್ ಛಟ್ಟಿ ಸೇತುವೆ ಕಾಮಗಾರಿಗಳು ಸೇರಿ ಪ್ರಮುಖ ಮೂಲಸೌಕರ್ಯ ಕಾಮಗಾರಿಗಳು ಮುಕ್ತಾಯಗೊಂಡಿವೆ.

130 ಕೋಟಿ ರೂ.ಗೂ ಅಧಿಕ ವೆಚ್ಚದ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಅಲ್ಲದೆ, ಪ್ರಧಾನಿ ಅವರು 180 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಸಂಗಮ್ ಘಾಟ್ ಮರು ಅಭಿವೃದ್ಧಿ, ಪ್ರಾಥಮಿಕ ಚಿಕಿತ್ಸಾ ಮತ್ತು ಪ್ರವಾಸಿಗರ ಸಹಾಯ ಕೇಂದ್ರ, ಆಡಳಿತ ಕಚೇರಿ ಮತ್ತು ಆಸ್ಪತ್ರೆ, ಎರಡು ಅತಿಥಿ ಗೃಹಗಳು, ಪೊಲೀಸ್ ಠಾಣೆ, ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ, ಮಂದಾಕಿನಿ ಅಷ್ಟಪಥ ಸರದಿ ವ್ಯವಸ್ಥೆ ಮತ್ತು ಮಳೆಯಿಂದ ಆಶ್ರಯತಾಣಗಳು ಮತ್ತು ಸರಸ್ವತಿ ನಾಗರಿಕ ಸೌಕರ್ಯ ಕಟ್ಟಡ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

 

 



ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Making Digital India safe, secure and inclusive

Media Coverage

Making Digital India safe, secure and inclusive
NM on the go

Nm on the go

Always be the first to hear from the PM. Get the App Now!
...
Chairman and CEO of Microsoft, Satya Nadella meets Prime Minister, Shri Narendra Modi
January 06, 2025

Chairman and CEO of Microsoft, Satya Nadella met with Prime Minister, Shri Narendra Modi in New Delhi.

Shri Modi expressed his happiness to know about Microsoft's ambitious expansion and investment plans in India. Both have discussed various aspects of tech, innovation and AI in the meeting.

Responding to the X post of Satya Nadella about the meeting, Shri Modi said;

“It was indeed a delight to meet you, @satyanadella! Glad to know about Microsoft's ambitious expansion and investment plans in India. It was also wonderful discussing various aspects of tech, innovation and AI in our meeting.”