ರೈತರು ತಮ್ಮ ಉತ್ಪನ್ನ ಮಾರಾಟ ಮಾಡಲು ನೆರವಾಗಿ ಕೃಷಿ ಆದಾಯವನ್ನು ಹೆಚ್ಚಿಸುವ ಗುರಿಯೊಂದಿಗೆ ಪ್ರಧಾನಮಂತ್ರಿ ಮೋದಿ ಅವರು ದೇಶಾದ್ಯಂತ 10 ಸಾವಿರ ರೈತರ ಉತ್ಪಾದನಾ ಸಂಘ (ಎಫ್.ಪಿ.ಓ.)ಗಳಿಗೆ ಚಾಲನೆ ನೀಡಿದರು.
ಕೇಂದ್ರ ಸರ್ಕಾರ 6,865 ಕೋಟಿ ರೂ. ಹಂಚಿಕೆ ಮಾಡಿದ್ದು, ಪ್ರತಿ ಎಫ್.ಪಿ.ಓ.ಗೆ 15 ಲಕ್ಷ ನಿಧಿ ಒದಗಿಸಲಿದೆ, ಇವು ರೈತರಿಗೆ ಅತ್ಯಂತ ಹೆಚ್ಚು ಉಪಯುಕ್ತವಾಗಿದೆ. ಎಫ್‌ಪಿಒ ಸದಸ್ಯರು ತಮ್ಮ ಆದಾಯವನ್ನು ವೇಗವಾಗಿ ಹೆಚ್ಚಿಸಿಕೊಳ್ಳಲು ತಂತ್ರಜ್ಞಾನ, ಇನ್ ಪುಟ್, ಹಣಕಾಸು ಮತ್ತು ಮಾರುಕಟ್ಟೆಗೆ ಉತ್ತಮ ಪ್ರವೇಶವನ್ನು ಪಡೆಯಲು ಸಂಘದಲ್ಲಿ ತಮ್ಮ ಚಟುವಟಿಕೆಗಳನ್ನು ಒಟ್ಟಾಗಿ ನಿರ್ವಹಿಸುತ್ತಾರೆ. ಚಿತ್ರಕೂಟದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಮೋದಿ, ರೈತರು ಸದಾ ಉತ್ಪಾದಕರೆ, ಆದರೆ ಅವರು ಎಫ್.ಪಿ.ಓ. ನೆರವಿನೊಂದಿಗೆ ಈಗ ತಮ್ಮ ಕೃಷಿ ಉತ್ಪನ್ನವನ್ನು ಮಾರಾಟ ಮಾಡಬಹುದು. ಅವರು ಬೆಳೆ ಬೆಳೆದು ತಾವೇ ಸ್ವಯಂ ಕುಶಲ ಮಾರಾಟಗಾರರಂತೆ ಸೂಕ್ತ ಬೆಲೆಗೆ ಮಾರಾಟಮಾಡಬಹುದು.” ಎಂದರು.