ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ತೆಹ್ರಿ ಗರ್ವಾಲ್ ಕ್ಷೇತ್ರದ ಉತ್ತರಕಾಶಿ ಜಿಲ್ಲೆಯ ಸಂಸ್ಥಾಪನಾ ದಿನವನ್ನು ತೆಹ್ರಿ ಗರ್ವಾಲ್ ಡೆಹ್ರಾಡೂನ್ ಸಂಸದ ಮಾಲಾ ರಾಜ್ಯ ಲಕ್ಷ್ಮಿ ಶಾ ಅವರು ಆಚರಿಸಿದ ರೀತಿಯನ್ನು ಶ್ಲಾಘಿಸಿದ್ದಾರೆ.
ತೆಹ್ರಿ ಗರ್ವಾಲ್ ನ ಸಂಸತ್ ಸದಸ್ಯರ ಟ್ವೀಟ್ ಗಳಿಗೆ ಪ್ರತಿಕ್ರಿಯಿಸಿದ ಪ್ರಧಾನಿಯವರು;
"ನಿಮ್ಮ ಜಿಲ್ಲೆಯ ಸಂಸ್ಥಾಪನಾ ದಿನವನ್ನು ಆಚರಿಸುವ ಉಪಕ್ರಮ ಉತ್ತಮವಾಗಿದೆ! ಇಂತಹ ಪ್ರಯತ್ನಗಳು ವಿವಿಧ ಕ್ಷೇತ್ರಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲವನ್ನು ಜನರಲ್ಲಿ ಹೆಚ್ಚಿಸಲಿದೆ" ಎಂದು ಟ್ವೀಟ್ ಮಾಡಿದ್ದಾರೆ.
अपने जिले के स्थापना दिवस को मनाने की बेहतरीन पहल! ऐसे प्रयासों से लोगों में अलग-अलग क्षेत्रों के बारे में जानने की उत्सुकता बढ़ेगी। https://t.co/PZux0bf2Um
— Narendra Modi (@narendramodi) February 25, 2023