ಉತ್ತರ ಪ್ರದೇಶದ ಝಾನ್ಸಿಯಲ್ಲಿ ಜಲ ಸಂರಕ್ಷಣೆ ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸಹಭಾಗಿತ್ವದ ಮೂಲಕ ಮಾಡುತ್ತಿರುವ ಪ್ರಯತ್ನಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಈ ಉದಾತ್ತ ಕಾರ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನು ಅವರು ಅಭಿನಂದಿಸಿದ್ದಾರೆ.
ಅಳಿವಿನಂಚಿನಲ್ಲಿರುವ ನದಿಗಳ ಪುನರುಜ್ಜೀವನ ಮತ್ತು ಕ್ಷೇತ್ರದಲ್ಲಿ ವಿವಿಧ ಅಮೃತ್ ಸರೋವರಗಳ ನಿರ್ಮಾಣದ ಕುರಿತು ಝಾನ್ಸಿ ಸಂಸದರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಪ್ರಧಾನ ಮಂತ್ರಿಗಳು,
"ಉತ್ತರ ಪ್ರದೇಶದ ಝಾನ್ಸಿ ಕ್ಷೇತ್ರದಲ್ಲಿ ನೀರಿನ ಸಂರಕ್ಷಣೆ ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಈ ಸಾರ್ವಜನಿಕ ಸಹಭಾಗಿತ್ವದ ಪ್ರಯತ್ನಗಳಿಂದ ಸಿಕ್ಕಿರುವ ಫಲಿತಾಂಶಗಳನ್ನು ನೋಡಿದರೆ ಬಹಳ ಉತ್ತೇಜನಕಾರಿಯಾಗಿದೆ ಮತ್ತು ಇಡೀ ದೇಶಕ್ಕೆ ಉದಾಹರಣೆಯಾಗಿದೆ. ಈ ಉದಾತ್ತ ಉದ್ದೇಶದಲ್ಲಿ ಕೈಜೋಡಿಸಿರುವ ಎಲ್ಲರಿಗೂ ನನ್ನ ಅಭಿನಂದನೆಗಳು! ” ಎಂದು ಬರೆದುಕೊಂಡಿದ್ದಾರೆ
उत्तर प्रदेश के झांसी में जल संरक्षण और भूजल स्तर को बढ़ाने के लिए जनभागीदारी से हो रहे इन प्रयासों के परिणाम बेहद उत्साहवर्धक होने के साथ ही देशभर के लिए एक मिसाल हैं। इस नेक कार्य से जुड़े हर किसी को मेरी बहुत-बहुत बधाई! https://t.co/sJobCxLMda
— Narendra Modi (@narendramodi) September 5, 2023