ಭಾರತದ ನಾಗರಿಕ ವಿಮಾನಯಾನ ಕ್ಷೇತ್ರವು ಪ್ರತಿದಿನ 4 ಲಕ್ಷ ಪ್ರಯಾಣಿಕರ ಸಂಚಾರವನ್ನು ತಲುಪಿರುವುದಕ್ಕೆ ಹಾಗೂ ಕೋವಿಡ್ -19 ಸಾಂಕ್ರಾಮಿಕಕ್ಕೂ ಮೊದಲಿನ ಹೆಚ್ಚಿನ ಸಂಖ್ಯೆಯನ್ನು ಸಾಧಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಸುಗಮ ಜೀವನ' ಮತ್ತು ಆರ್ಥಿಕ ಪ್ರಗತಿಗೆ ಮುಖ್ಯವಾಗಿರುವ ಸಂಪರ್ಕ ಕ್ಷೇತ್ರವನ್ನು ಭಾರತದಾದ್ಯಂತ ಇನ್ನಷ್ಟು ಸುಧಾರಿಸಲು ಗಮನಹರಿಸಲಾಗಿದೆ ಎಂದು ಶ್ರೀ ಮೋದಿ ಹೇಳಿದ್ದಾರೆ.
ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಟ್ವೀಟ್ ಅನ್ನು ಉಲ್ಲೇಖಿಸಿರುವ ಪ್ರಧಾನಿಯವರು,
"ಇದೊಂದು ಉತ್ತಮ ಸೂಚನೆ. 'ಸುಗಮ ಜೀವನ' ಮತ್ತು ಆರ್ಥಿಕ ಪ್ರಗತಿಗೆ ಮುಖ್ಯವಾಗಿರುವ ಸಂಪರ್ಕ ಕ್ಷೇತ್ರವನ್ನು ಭಾರತದಾದ್ಯಂತ ಇನ್ನಷ್ಟು ಸುಧಾರಿಸಲು ಗಮನಹರಿಸಲಾಗಿದೆ” ಎಂದು ಹೇಳಿದ್ದಾರೆ.
Great sign. Our focus is to further improve connectivity across India, which is important for ‘Ease of Living’ and economic progress. https://t.co/HiNEn0ozXq
— Narendra Modi (@narendramodi) October 11, 2022