ಆಯುಷ್ಮಾನ್ ಭವ ಅಭಿಯಾನದ ಅಡಿಯಲ್ಲಿ 80,000 ಕ್ಕೂ ಹೆಚ್ಚು ಜನರು ತಮ್ಮ ಅಂಗಾಂಗಗಳನ್ನು ದಾನ ಮಾಡುವ ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದು ಅಂಗಾಂಗ ದಾನ ಅಭಿಯಾನದ ಯಶಸ್ಸನ್ನು ತೋರಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದರು.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:
"ಈ ಪ್ರಯತ್ನಕ್ಕೆ ದೊರಕಿದ ಅಗಾಧ ಪ್ರತಿಕ್ರಿಯೆಯಿಂದ ಸಂತೋಷವಾಗಿದೆ! ಇದು ನಿಜಕ್ಕೂ ಜೀವ ಉಳಿಸುವ ನಿಟ್ಟಿನಲ್ಲಿ ಗಮನಾರ್ಹ ಹೆಜ್ಜೆಯಾಗಿದೆ. ಭವಿಷ್ಯದಲ್ಲಿ ಈ ಉದಾತ್ತ ಉಪಕ್ರಮಕ್ಕೆ ಹೆಚ್ಚಿನ ಜನರು ಸೇರುತ್ತಾರೆ ಎಂದು ನಾನು ಭಾವಿಸುತ್ತೇನೆ."
Gladdened by the overwhelming response to this effort! This is indeed a remarkable step towards saving lives. I do hope more people join this noble initiative in the future. https://t.co/q5pTv9Xeza
— Narendra Modi (@narendramodi) October 16, 2023