ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಅರುಣಾಚಲ ಪ್ರದೇಶದ ಕುರುಂಗ್ ಕುಮೆ ಜಿಲ್ಲೆಯ ಅತ್ಯಂತ ದುರ್ಗಮ ಮತ್ತು ದೂರದ ಸ್ಥಳಗಳಲ್ಲಿ ಒಂದಾದ ಹುರಿಗೆ ಹೋಗುವ 278 ಕಿ.ಮೀ ಹಪೋಲಿ-ಸರ್ಲಿ-ಹುರಿ ರಸ್ತೆಯನ್ನು ಡಾಂಬರು ಮೇಲ್ಮೈ ಹೊದಿಕೆಯ ರಸ್ತೆಯನ್ನಾಗಿಸಿರುವ ಗಡಿ ರಸ್ತೆಗಳ ಸಂಘಟನೆಯ ಸಾಧನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ಲಾಘಿಸಿದ್ದಾರೆ.
ಗಡಿ ರಸ್ತೆಗಳ ಸಂಘಟನೆಯ (ಬಾರ್ಡರ್ ರೋಡ್ಸ್ ಆರ್ಗನೈಸೇಶನ್ನಿನ) ಟ್ವೀಟ್ ಎಳೆಯನ್ನು ಹಂಚಿಕೊಂಡಿರುವ ಪ್ರಧಾನ ಮಂತ್ರಿ,ಅವರು ತಮ್ಮ ಟ್ವೀಟ್ ನಲ್ಲಿ
"ಶ್ಲಾಘನೀಯ ಸಾಧನೆ!"
ಎಂದು ಬಣ್ಣಿಸಿದ್ದಾರೆ.
Commendable feat! https://t.co/UBKahiTmqz
— Narendra Modi (@narendramodi) March 23, 2023