ತಾಯಿಯ ಗರ್ಭದಲ್ಲಿರುವ ದ್ರಾಕ್ಷಿ ಗಾತ್ರದ ಭ್ರೂಣದ ಹೃದಯಕ್ಕೆ 90 ಸೆಕೆಂಡಿನಲ್ಲಿ ಯಶಸ್ವಿಯಾಗಿ ಸರ್ಜರಿ ಮಾಡಿದ ವೈದ್ಯರ ಸಾಧನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೊಂಡಾಡಿದ್ದಾರೆ. ಭಾರತೀಯ ವೈದ್ಯರ ಕೌಶಲ್ಯ ಮತ್ತು ನಾವೀನ್ಯತೆಯನ್ನು ಅವರು ಶ್ಲಾಘಿಸಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರ ಟ್ವೀಟ್ ನ್ನು ಹಂಚಿಕೊಂಡ ಪ್ರಧಾನಿ ಅವರು ಟ್ವೀಟ್ ಮಾಡಿ;
"ಭಾರತೀಯ ವೈದ್ಯರ ಕೌಶಲ್ಯ ಮತ್ತು ನಾವೀನ್ಯತೆ ನೋಡಿದರೆ ಹೆಮ್ಮೆಯುಂಟಾಗುತ್ತದೆ" ಎಂದು ಬರೆದುಕೊಂಡಿದ್ದಾರೆ.
Proud of India’s doctors for their dexterity and innovation. https://t.co/Rud6hMY7OG
— Narendra Modi (@narendramodi) March 15, 2023