ರೇಡಿಯೋ ಮೂಲಕ ದೇಶವನ್ನುದ್ದೇಶಿಸಿ “ಮನ್ ಕಿ ಬಾತ್ “ ಮೂಲಕ ಭಾಷಣ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಂಡಿಘರ್ ಮೂಲದ ಆಹಾರ ಮಳಿಗೆ ಮಾಲೀಕರು ಕೋವಿಡ್ – 19 ವಿರುದ್ಧ ಲಸಿಕೆ ಪಡೆಯಲು ಇತರರನ್ನು ಪ್ರೇರೇಪಿಸುತ್ತಿರುವ ಉಪಕ್ರಮದ ಬಗ್ಗೆ ಶ್ಲಾಘಿಸಿದ್ದಾರೆ.
#चंडीगढ़ के संजय राणा जी की प्रेरणादायक और नेक कहानी
— PIB in Chandigarh (@PIBChandigarh) July 25, 2021
संजय राणा जी के छोले-भटूरे मुफ़्त में खाने के लिए आपको दिखाना पड़ेगा कि आपने उसी दिन vaccine लगवाई है | Vaccine का message दिखाते ही वे आपको स्वादिष्ट छोले–भटूरे दे देंगे
- पीएम श्री @narendramodi#MannKiBaat @vpsbadnore pic.twitter.com/r5QGypN8ao
ತಮ್ಮ ಮಗಳು ಮತ್ತು ಸೋದರ ಸೊಸೆಯ ಸಲಹೆ ಮೇರೆಗೆ ಆಹಾರ ಮಳಿಗೆ ಮಾಲೀಕ ಶ್ರೀ ಸಂಜಯ್ ರಾಣಾ ಅವರು ಕೋವಿಡ್ ಲಸಿಕೆ ಪಡೆದವರಿಗೆ ಉಚಿತವಾಗಿ ಚೋಲೆ ಭತೂರೆ ನೀಡುವ ಕೆಲಸ ಆರಂಭಿಸಿರುವ ಕ್ರಮದ ಬಗ್ಗೆ ಪ್ರಧಾನಮಂತ್ರಿ ಅವರು ತಮ್ಮ ಭಾಷಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಂಡಿಘರ್ ನ 29 ನೇ ವಿಭಾಗದಲ್ಲಿ ಬೈಸಿಕಲ್ ಮೂಲಕ ಈ ಮಾಲೀಕರು ಚೋಲೆ ಭತೂರೆ ಮಾರಾಟ ಮಾಡುತ್ತಿದ್ದಾರೆ ಮತ್ತು ಪ್ರತಿದಿನ ಲಸಿಕೆ ಹಾಕಿಸಿಕೊಂಡಿರುವ ದಾಖಲೆ ತೋರಿಸಿದರೆ ಉಚಿತವಾಗಿ ಊಟ ನೀಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ. ಈ ಪ್ರಯತ್ನ ಶ್ಲಾಘನೀಯ. ಸಮಾಜದ ಕಲ್ಯಾಣಕ್ಕಾಗಿ ಸೇವಾ ಸ್ಫೂರ್ತಿ ಮತ್ತು ಕರ್ತವ್ಯ ಪ್ರಜ್ಞೆ, ಹಣಕ್ಕಿಂತ ಹೆಚ್ಚಿನದನ್ನು ಬಯಸುತ್ತದೆ ಎಂಬುದನ್ನು ಅವರ ಈ ಕೆಲಸ ನಿರೂಪಿಸುತ್ತದೆ ಎಂದು ಹೇಳಿದ್ದಾರೆ.