ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿಂಹಗಳ ಆವಾಸಸ್ಥಾನಗಳ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎಲ್ಲರಿಗೂ ವಿಶ್ವ ಸಿಂಹ ದಿನವನ್ನು ಸಮರ್ಪಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು,
"ವಿಶ್ವ ಸಿಂಹ ದಿನವು ಸಿಂಹದ ಅಗಾಧ ಶಕ್ತಿ ಹಾಗೂ ಗಾಂಭೀರ್ಯವನ್ನು ಮನಪೂರಕವಾಗಿ ಆಚರಿಸುವ ಸಂದರ್ಭವಾಗಿದೆ. ಭಾರತವು ಏಷ್ಯಾ ಸೀಮೆಯ ಸಿಂಹಗಳ ತವರು ಎಂಬ ಹೆಗ್ಗಳಿಕೆ ಗಳಿಸಿರುವ ಜತೆಗೆ ಕೆಲವು ವರ್ಷಗಳಿಂದ ಭಾರತದಲ್ಲಿ ಸಿಂಹಗಳ ಜನಸಂಖ್ಯೆಯಲ್ಲಿ ಸ್ಥಿರವಾದ ಏರಿಕೆಯಾಗುತ್ತಿರುವುದು ಆಶಾದಾಯಕವಾಗಿದೆ. ಈ ಸಂದರ್ಭದಲ್ಲಿ ನಾನು ಸಿಂಹಗಳ ಆವಾಸಸ್ಥಾನವನ್ನು ರಕ್ಷಿಸಲು ಶ್ರಮಿಸುತ್ತಿರುವ ಎಲ್ಲರ ಪ್ರಯತ್ನವನ್ನೂ ಶ್ಲಾಘಿಸುತ್ತೇನೆ. ನಾವು ಅವುಗಳ ಸಂರಕ್ಷಣೆ ಕಾರ್ಯವನ್ನು ಮುಂದುವರಿಸುವ ಮೂಲಕ ಮುಂದಿನ ಪೀಳಿಗೆಗೆ ಪ್ರವರ್ಧಮಾನಕ್ಕೆ ಬರಲು ಉತ್ತೇಜಿಸೋಣ,ʼʼ ಎಂದು ಆಶಿಸಿದ್ದಾರೆ.
World Lion Day is an occasion to celebrate the majestic lions that captivate our hearts with their strength and magnificence. India is proud to be home to the Asiatic Lions and over the last few years there has been a steady rise in the lion population in India. I laud all those… pic.twitter.com/ohWcPP2Ofe
— Narendra Modi (@narendramodi) August 10, 2023