ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 1.5 ಲಕ್ಷ ಆಯುಷ್ಮಾನ್ ಭಾರತ್ - ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ ಸ್ಥಾಪನೆಯ ಗುರಿ ಸಾಧನೆಯು ನವ ಭಾರತದಲ್ಲಿ ಹೊಸ ಶಕ್ತಿಯನ್ನು ತುಂಬುತ್ತದೆ ಎಂದು ಹೇಳಿದ್ದಾರೆ. ಭಾರತದ ಸಮೃದ್ಧಿ ಆರೋಗ್ಯವಂತ ನಾಗರಿಕರಲ್ಲಿ ಅಡಗಿದೆ ಎಂದರು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಮಾಂಡವೀಯಾ ಅವರ ಟ್ವೀಟ್‌ಗೆ ಪ್ರಧಾನಿ ಪ್ರತ್ಯುತ್ತರವಾಗಿ ಟ್ವೀಟ್ ಮಾಡಿದ್ದಾರೆ:
"ಭಾರತದ ಏಳಿಗೆಯು ಆರೋಗ್ಯವಂತ ನಾಗರಿಕರಲ್ಲಿದೆ. ದಾಖಲೆ ಸಂಖ್ಯೆಯಲ್ಲಿ ಸ್ಥಾಪಿಸಲಾದ ಈ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳು ಈ ದಿಕ್ಕಿನಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತವೆ. ಈ ಸಾಧನೆಯು ನವ ಭಾರತದಲ್ಲಿ ಹೊಸ ಶಕ್ತಿಯನ್ನು ತುಂಬಲಿದೆ."
स्वस्थ नागरिकों में ही भारतवर्ष की समृद्धि निहित है। इस दिशा में रिकॉर्ड संख्या में बने ये हेल्थ एंड वेलनेस सेंटर्स बड़ी भूमिका निभाएंगे। यह उपलब्धि न्यू इंडिया में एक नई ऊर्जा भरने वाली है। https://t.co/OfBsRIorsR
— Narendra Modi (@narendramodi) December 29, 2022