ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೈಹಿಕ ಸದೃಢತೆಯನ್ನು ಕಾಯ್ದುಕೊಳ್ಳುವುದರ ಮಹತ್ವವನ್ನು ಒತ್ತಿ ಹೇಳಿದ್ದು, 75 ಲಕ್ಷ ಸೂರ್ಯ ನಮಸ್ಕಾರ ಸವಾಲನ್ನು ಶ್ಲಾಘಿಸಿದ್ದಾರೆ.
ಭಾರತದ ಗಣ್ಯ ಕ್ರೀಡಾಪಟುಗಳೊಂದಿಗೆ 75 ಲಕ್ಷ ಸೂರ್ಯ ನಮಸ್ಕಾರ ಸವಾಲು ಕುರಿತು ಭಾರತೀಯ ಕ್ರೀಡಾ ಪ್ರಾಧಿಕಾರದ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಿ, ಹೀಗೆ ಟ್ವೀಟ್ ಮಾಡಿದ್ದಾರೆ:
"ಪ್ರಸ್ತುತ ಆವರಿಸಿರುವ ಜಾಗತಿಕ ಸಾಂಕ್ರಾಮಿಕರೋಗವು ದೈಹಿಕವಾಗಿ ಸದೃಢವಾಗಿರಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರ ಮಹತ್ವವನ್ನು ಪುನರುಚ್ಚರಿಸಿದೆ. ಹಾಗೆ ಮಾಡಲು ಇದು ಉತ್ತಮ ಪ್ರಯತ್ನವಾಗಿದೆ,” ಎಂದಿದ್ದಾರೆ.
“ಇದೇ ವೇಳೆ, ಕೋವಿಡ್-19 ಸಂಬಂಧಿತ ಎಲ್ಲಾ ಶಿಷ್ಟಾಚಾರಗಳನ್ನು ಅನುಸರಿಸಿ, ಮಾಸ್ಕ್ ಧರಿಸಿ ಮತ್ತು ಅರ್ಹರಾಗಿದ್ದರೆ ಲಸಿಕೆಯನ್ನು ಪಡೆಯಿರಿ ಎಂದು ನಾನು ನಿಮ್ಮೆಲ್ಲರಿಗೂ ಮತ್ತೆ ಮನವಿ ಮಾಡುತ್ತೇನೆ.”
The ongoing global pandemic has reaffirmed the importance of keeping fit and boosting immunity. This is a great effort to do so.
— Narendra Modi (@narendramodi) January 14, 2022
At the same time, I again appeal to you all to follow all COVID-19 related protocols, wear masks and get vaccinated if eligible. https://t.co/IOQtMwJT3c