ಜುಲೈ ತಿಂಗಳಲ್ಲಿ 6 ಬಿಲಿಯನ್ ಯುಪಿಐ ವಹಿವಾಟುಗಳನ್ನು ನಡೆಸಿರುವ ಅಸಾಧಾರಣ ಸಾಧನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ಲಾಘಿಸಿದ್ದಾರೆ, ಇದು 2016 ರ ನಂತರದ ಅತ್ಯಧಿಕ ಸಾಧನೆಯಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿ ಅವರು:
"ಇದೊಂದು ಅಸಾಧಾರಣ ಸಾಧನೆ. ಇದು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮತ್ತು ಆರ್ಥಿಕತೆಯನ್ನು ಸ್ವಚ್ಛವಾಗಿಸುವ ನಿಟ್ಟಿನಲ್ಲಿ ಭಾರತದ ಜನತೆಯ ಸಾಮೂಹಿಕ ಸಂಕಲ್ಪವನ್ನು ಸೂಚಿಸುತ್ತದೆ. ಕೋವಿಡ್-19 ಜಾಗತಿಕ ಸಾಂಕ್ರಾಮಿಕದ ಸಮಯದಲ್ಲಿ ಡಿಜಿಟಲ್ ಪಾವತಿಗಳು ವಿಶೇಷ ಸಹಾಯ ಮಾಡಿದ್ದವು”
ಎಂದು ಹೇಳಿದ್ದಾರೆ.
This is an outstanding accomplishment. It indicates the collective resolve of the people of India to embrace new technologies and make the economy cleaner. Digital payments were particularly helpful during the COVID-19 pandemic. https://t.co/roR2h89LHv
— Narendra Modi (@narendramodi) August 2, 2022