ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಈ ವರ್ಷದ "ಪರೀಕ್ಷಾ ಪೆ ಚರ್ಚಾ" ಸಂವಾದಕ್ಕೆ ಎಲ್ಲರಿಂದಲೂ ವಿಚಾರ, ಒಳನೋಟಗಳನ್ನು ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ತಮ್ಮ ಒಳನೋಟ, ವಿಚಾರಗಳನ್ನು ಹಂಚಿಕೊಳ್ಳುವಂತೆ ಕೋರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು,
"ಪರೀಕ್ಷಾ ಪೆ ಚರ್ಚಾ" ಸಂವಾದವು ಸಮಾಜದ ಎಲ್ಲ ವರ್ಗ, ಹಂತದ ಜನರಿಂದ ಒಳ ನೋಟ, ವಾಸ್ತವ ವಿಚಾರಗಳನ್ನು ಸ್ವೀಕರಿಸುವ ಮೂಲಕ ಹೆಚ್ಚು ಸ್ಮರಣೀಯವೆನಿಸುತ್ತಿದೆ. ಆ ಹಿನ್ನೆಲೆಯಲ್ಲಿ ಈ ವರ್ಷದ ಸಂವಾದಕ್ಕೆ ಎಲ್ಲ ಜನರಿಂದ ಅದರಲ್ಲೂ ಪ್ರಮುಖವಾಗಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ತಮ್ಮ ವಿಚಾರಗಳನ್ನು ಹಂಚಿಕೊಳ್ಳುವಂತೆ ಆಹ್ವಾನಿಸುತ್ತೇನೆ #PPC2023 innovateindia.mygov.in/ppc-2023/,ʼʼ ಎಂದು ಹೇಳಿದ್ದಾರೆ.
Pariksha Pe Charcha is made even more memorable by the extensive inputs received from people across all walks of life. I invite you all, particularly the #ExamWarriors, parents and teachers to share their inputs for this year's interaction. #PPC2023 https://t.co/sX6JVWvYUo https://t.co/Huo522eZV4
— Narendra Modi (@narendramodi) January 5, 2023