ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಅಟ್ ಹೋಮ್ ಕಾರ್ಯಕ್ರಮದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ 71ನೇ ಗಣರಾಜ್ಯೋತ್ಸವ ಪರೇಡ್ ನ ಭಾಗವಾಗಿರುವ 1730 ಬುಡಕಟ್ಟು ಅತಿಥಿಗಳು, ಎನ್.ಸಿ.ಸಿ. ಕೆಡೆಟ್ ಗಳು, ಎನ್.ಎಸ್. ಎಸ್. ಸ್ವಯಂ ಸೇವಕರು ಮತ್ತು ಸ್ತಬ್ಧ ಚಿತ್ರ ಕಲಾವಿದರುಗಳೊಂದಿಗೆ ಸಂವಾದ.

ಉತ್ಸಾಹಭರಿತ ಬೃಹತ್ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಅವರೆಲ್ಲರೂ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕಿರು ಭಾರತವನ್ನು ಪ್ರದರ್ಶಿಸುತ್ತಿದ್ದಾರೆ ಎಂದರು. ಈ ಪರೇಡ್ ವೇಳೆ ಇಡೀ ವಿಶ್ವವೇ ಭಾರತದ ಸಾರವನ್ನು ಕಾಣಲಿದೆ ಎಂದ ಪ್ರಧಾನಮಂತ್ರಿಯವರು, ಭಾರತ ಕೇವಲ ಭೌಗೋಳಿಕ ಅಥವಾ ಜನಸಂಖ್ಯೆಯ ಕಾಯವಲ್ಲ ಎಂದರು.

ಭಾರತ ಒಂದು ಜೀವನ ಮಾರ್ಗ ಎಂದ ಪ್ರಧಾನಮಂತ್ರಿಯವರು ಏಕ ಭಾರತ ಶ್ರೇಷ್ಠ ಭಾರತ ಕುರಿತಂತೆ ಮಾತನಾಡಿ, ಭಾರತ ಕೇವಲ 130 ಕೋಟಿ ಜನರ ನೆಲೆಯಷ್ಟೇ ಅಲ್ಲ ಅದು ಚಲನಶೀಲ ಸಂಪ್ರದಾಯದ ರಾಷ್ಟ್ರ ಎಂದರು.

ಭಾರತವು ಒಂದು ಜೀವನ ಮಾರ್ಗ, ಒಂದು ಕಲ್ಪನೆ, ಹಲವು ತತ್ತ್ವಗಳ ಸಂಗಮ ಮತ್ತು ಶ್ರೀಮಂತ ಜಾಗತಿಕ ಮತ್ತು ಸಾರ್ವತ್ರಿಕ ದೃಷ್ಟಿಕೋನಕ್ಕೆ ಒಂದು ರೂಪಕ ಎಂದು ಹೇಳಿದರು. ಭಾರತ ಎಂದರೆ ಜಗತ್ತೇ ಒಂದು ಕುಟುಂಬ, ಭಾರತ ಎಂದರೆ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವುದು, ಭಾರತ ಎಂದರೆ ಸತ್ಯದ ವಿಜಯ, ಭಾರತ ಎಂದರೆ ಒಂದು ಸತ್ಯವನ್ನು ವಿವಿಧ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಅನುಮತಿಸುವ ಒಂದು ಕಲ್ಪನೆ, ಭಾರತ ಎಂದರೆ ಸಸ್ಯ ಸಂಕುಲ ಮತ್ತು ಪ್ರಾಣಿ ಸಂಕುಲಗಳನ್ನು ಪ್ರೀತಿಸುವ ಮತ್ತು ರಕ್ಷಿಸುವುದು, ಭಾರತ ಎಂದರೆ ಸ್ವಾವಲಂಬನೆ, ಭಾರತ ಯಾರು ತ್ಯಾಗ ಮಾಡುತ್ತಾರೋ ಅವರು ಆನಂದವಾಗಿರುತ್ತಾರೆಂದು ಭಾರತ ಭಾವಿಸುತ್ತದೆ, ಭಾರತ ಎಂದರೆ ಯಾವುದು ಎಲ್ಲರ ಕಲ್ಯಾಣದಲ್ಲಿ ನಂಬಿಕೆ ಇಟ್ಟಿದೆಯೋ ಅದು, ಭಾರತ ಎಂದರೆ ಮಹಿಳೆಯರನ್ನು ಆರಾಧಿಸುವುದು, ಭಾರತ ಎಂದರೆ ತಾಯ್ನಾಡು ಚಿನ್ನಕ್ಕಿಂತ ಹೆಚ್ಚು ಸದ್ಗುಣ ಎಂದು ನಂಬುವುದು’’, ಏಕತೆಯ ಬಗ್ಗೆ ನಂಬಿಕೆಯೇ ಹೊರತು ಏಕರೂಪತೆಯಲ್ಲಲ್ಲ ಎಂದ ಪ್ರಧಾನ ಮಂತ್ರಿಯವರು ಭೌಗೋಳಿಕ ಮತ್ತು ಸಾಮಾಜಿಕ ವೈವಿಧ್ಯತೆಯಲ್ಲಿ ಏಕತೆಯೇ ಭಾರತದ ಶಕ್ತಿ ಎಂದು ಹೇಳಿದರು. ಭಾರತವನ್ನು ಒಂದು ಹೂ ಮಾಲೆಗೆ ಹೋಲಿಸಿದ ಅವರು, ಇಲ್ಲಿ ಭಾರತೀಯತೆ ಎಂಬ ಒಂದೇ ದಾರದಲ್ಲಿ ವಿವಿಧ ಹೂವುಗಳನ್ನು ಪೋಣಿಸಲಾಗಿದೆ ಎಂದರು. ಭಾರತವು ಏಕತೆಯಲ್ಲಿ ನಂಬಿಕೆ ಇಟ್ಟಿದೆಯೇ ಹೊರತು ಏಕರೂಪತೆಯಲ್ಲಲ್ಲ ಎಂದು ಅವರು ಹೇಳಿದರು. ಏಕತೆಯ ದಾರವನ್ನು ಬಲಪಡಿಸಲು ನಮ್ಮ ನಿರಂತರ ಪ್ರಯತ್ನ ಮತ್ತು ಪರಿಶ್ರಮ ಎಂದರು. ನವ ಭಾರತ ಮುಂದುವರೆದಂತೆ, ಯಾರೂ ಹಿಂದೆ ಉಳಿಯುವುದಿಲ್ಲ ಮತ್ತು ಯಾವುದೇ ಪ್ರದೇಶವನ್ನು ಬಿಡುವುದಿಲ್ಲ ಎಂಬುದನ್ನು ಮನಗಾಣುವ ಪ್ರಯತ್ನನಡೆದಿದೆ ಎಂದು ಅವರು ಹೇಳಿದರು. ಮೂಲಭೂತ ಕರ್ತವ್ಯಗಳಿಗಾಗಿ ಶ್ರಮಿಸುವ, ನಮ್ಮ ಮೂಲಭೂತ ಕರ್ತವ್ಯಗಳಿಗೆ ಪ್ರಾಮುಖ್ಯತೆ ನೀಡುವ ಸಮಯ ಇದೀಗ ಎಂದು ಪ್ರಧಾನಿ ಹೇಳಿದರು. “ನಾವು ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮಾಡಿದರೆ, ನಮ್ಮ ಹಕ್ಕುಗಳಿಗಾಗಿ ಹೋರಾಡುವ ಅವಶ್ಯಕತೆಯಿರುವುದಿಲ್ಲ” ಎಂದು ಅವರು ಹೇಳಿದರು.

ಪ್ರಧಾನಮಂತ್ರಿಯವರು ಬುಡಕಟ್ಟು ಅತಿಥಿಗಳು, ಎನ್.ಸಿ.ಸಿ. ಕೆಡೆಟ್ ಗಳು, ಎನ್.ಎಸ್.ಎಸ್. ಸ್ವಯಂಸೇವಕರು ಮತ್ತು ಸ್ತಬ್ಧಚಿತ್ರ ಕಲಾವಿದರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ವೀಕ್ಷಿಸಿದರು.

 

 

Click here to read PM's speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Economic Survey: India leads in mobile data consumption/sub, offers world’s most affordable data rates

Media Coverage

Economic Survey: India leads in mobile data consumption/sub, offers world’s most affordable data rates
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 1 ಫೆಬ್ರವರಿ 2025
February 01, 2025

Budget 2025-26 Viksit Bharat’s Foundation Stone: Inclusive, Innovative & India-First Policies under leadership of PM Modi