Quote‘‘ಜನರಿಗೆ ಸಮವಸ್ತ್ರದ ಮೇಲೆ ಹೆಚ್ಚಿನ ನಂಬಿಕೆ ಇದೆ. ಸಂಕಷ್ಟದಲ್ಲಿರುವ ಜನರು ನಿಮ್ಮನ್ನು ನೋಡಿದಾಗಲೆಲ್ಲಾ ಅವರು, ತಮ್ಮ ಜೀವನವು ಸುರಕ್ಷಿತವಾಗಿದೆ ಎಂದು ಅವರು ನಂಬುತ್ತಾರೆ, ಅವರಲ್ಲಿಹೊಸ ಭರವಸೆ ಮೂಡುತ್ತದೆ’’
Quoteಸಂಕಲ್ಪ ಮತ್ತು ತಾಳ್ಮೆಯಿಂದ ಸವಾಲುಗಳನ್ನು ಎದುರಿಸಿದಾಗ ಯಶಸ್ಸು ಖಚಿತ.
Quote‘‘ಈ ಸಂಪೂರ್ಣ ಕಾರ್ಯಾಚರಣೆಯು ಸೂಕ್ಷ ್ಮತೆ, ಸಂಪನ್ಮೂಲ ಮತ್ತು ಧೈರ್ಯದ ಪ್ರತಿಬಿಂಬವಾಗಿದೆ’’
Quoteಈ ಕಾರ್ಯಾಚರಣೆಯಲ್ಲಿ‘ಸಬ್ಕಾಪ್ರಯಾಸ್‌’ ಪ್ರಮುಖ ಪಾತ್ರ ವಹಿಸಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಿಯೋಘರ್‌ನ ರೋಪ್‌ ವೇ ಕೇಬಲ್‌ ಕಾರ್‌ ಅಪಘಾತದಲ್ಲಿರಕ್ಷ ಣಾ ಕಾರ್ಯಾಚರಣೆಯಲ್ಲಿತೊಡಗಿರುವ ಐಎಎಫ್‌, ಭಾರತೀಯ ಸೇನೆ, ಎನ್‌ಡಿಆರ್‌ಎಫ್‌, ಐಟಿಬಿಪಿ, ಸ್ಥಳೀಯ ಆಡಳಿತ ಮತ್ತು ನಾಗರಿಕ ಸಮಾಜದ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಕೇಂದ್ರ ಸಚಿವ ಅಮಿತ್‌ ಶಾ, ಸಂಸದ ನಿಶಿಕಾಂತ್‌ ದುಬೆ, ಎಂಎಚ್‌ಎ ಕಾರ್ಯದರ್ಶಿ, ಸೇನಾ ಮುಖ್ಯಸ್ಥರು, ವಾಯುಪಡೆಯ ಮುಖ್ಯಸ್ಥರು, ಎನ್‌ಡಿಆರ್‌ಎಫ್‌ ಡಿಜಿ, ಐಟಿಬಿಪಿ  ಡಿಜಿ ಈ ಸಂದರ್ಭದಲ್ಲಿಉಪಸ್ಥಿತರಿದ್ದರು.

ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್‌ ಶಾ ಅವರು, ರಕ್ಷ ಣೆಯಲ್ಲಿತೊಡಗಿರುವವರನ್ನು ಶ್ಲಾಘಿಸಿದರು. ಇದು ಸುಸಂಘಟಿತ ಕಾರ್ಯಾಚರಣೆಗೆ ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿವಿಪತ್ತು ನಿರ್ವಹಣೆಯು ಜೀವಹಾನಿಯನ್ನು ತಡೆಗಟ್ಟಲು ಒತ್ತು ನೀಡಲು ಹಿಂದಿನ ಪರಿಹಾರ ಆಧಾರಿತ ವಿಧಾನವನ್ನು ಮೀರಿದೆ ಎಂದು ಅವರು ಪ್ರತಿಪಾದಿಸಿದರು. ಇಂದು ಎಲ್ಲಾ ಸಮಯದಲ್ಲೂಪ್ರತಿಕ್ರಿಯಿಸಲು ಮತ್ತು ಜೀವಗಳನ್ನು ರಕ್ಷಿಸಲು ಪ್ರತಿ ಹಂತದಲ್ಲೂಒಂದು ಸಂಯೋಜಿತ ವ್ಯವಸ್ಥೆ ಇದೆ. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಸಶಸ್ತ್ರ ಪಡೆಗಳು, ಐಟಿಬಿಪಿ ಪೊಲೀಸ್‌ ಮತ್ತು ಸ್ಥಳೀಯ ಆಡಳಿತವು ಕಾರ್ಯಾಚರಣೆಯಲ್ಲಿಅನುಕರಣೀಯ ಸಮನ್ವಯದಿಂದ ಕೆಲಸ ಮಾಡಿದೆ ಎಂದು ಶ್ರೀ ಅಮಿತ್‌ ಶಾ ನುಡಿದರು.

ಈ ಸಂದರ್ಭದಲ್ಲಿಮಾತನಾಡಿದ ಪ್ರಧಾನಮಂತ್ರಿ ಅವರು, ‘‘ರಕ್ಷ ಣಾ ತಂಡಗಳನ್ನು ಶ್ಲಾಘಿಸಿದರು ಮತ್ತು ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ನಮ್ಮ ಸಶಸ್ತ್ರ ಪಡೆಗಳು, ವಾಯುಪಡೆ, ಐಟಿಬಿಪಿ, ಎನ್‌ಡಿಆರ್‌ಎಫ್‌ ಮತ್ತು ಪೊಲೀಸ್‌ ಸಿಬ್ಬಂದಿಗಳ ರೂಪದಲ್ಲಿನಾವು ನುರಿತ ಪಡೆಯನ್ನು ಹೊಂದಿದ್ದೇವೆ ಎಂಬುದರ ಬಗ್ಗೆ ರಾಷ್ಟ್ರ ಹೆಮ್ಮೆಪಡುತ್ತದೆ. ಅದು ಸಂಕಷ್ಟದ ಸಮಯದಲ್ಲಿನಾಗರಿಕರನ್ನು ರಕ್ಷಿಸುವ ಸಾಮರ್ಥ್ಯ‌ವನ್ನು ಹೊಂದಿದೆ ಎಂದು ಅವರು ಹೇಳಿದರು. ಮೂರು ದಿನಗಳ ಕಾಲ, ಗಡಿಯಾರದ ಸುತ್ತ, ನೀವು ಕಷ್ಟಕರವಾದ ರಕ್ಷ ಣಾ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದೀರಿ ಮತ್ತು ಅನೇಕ ದೇಶವಾಸಿಗಳ ಜೀವಗಳನ್ನು ಉಳಿಸಿದ್ದೀರಿ. ಇದು ಬಾಬಾ ವೈದ್ಯನಾಥ್‌ ಜಿಯವರ ಕೃಪೆ ಎಂದೂ ನಾನು ಭಾವಿಸುತ್ತೇನೆ,’’ ಎಂದು ಅವರು ಹೇಳಿದರು.

|

ತಮ್ಮ ಧೈರ್ಯ ಮತ್ತು ಕಠಿಣ ಪರಿಶ್ರಮದಿಂದ ಎನ್‌ಡಿಆರ್‌ಎಫ್‌ ತನ್ನನ್ನು ತಾನು ಅರ್ಪಿಸಿಕೊಂಡಿರುವ ಚಿತ್ರಣವನ್ನು ಪ್ರಧಾನಿ ಗಮನಿಸಿದರು. ಇನ್‌ಸ್ಪೆಕ್ಟರ್‌/ಜಿಡಿ ಶ್ರೀ ಓಂ ಪ್ರಕಾಶ್‌ ಗೋಸ್ವಾಮಿ ಅವರು, ಎನ್‌ಡಿಆರ್‌ಎಫ್‌ ಕಾರ್ಯಾಚರಣೆಯ ವಿವರಗಳನ್ನು ಪ್ರಧಾನ ಮಂತ್ರಿಗೆ ವಿವರಿಸಿದರು. ಸಂಕಷ್ಟದ ಪರಿಸ್ಥಿತಿಯ ಭಾವನಾತ್ಮಕ ಅಂಶವನ್ನು ಹೇಗೆ ನಿಭಾಯಿಸಿದರು ಎಂದು ಪ್ರಧಾನಮಂತ್ರಿ ಅವರು ಶ್ರೀ ಓಂ ಪ್ರಕಾಶ್‌ ಅವರನ್ನು ಕೇಳಿದರು. ಎನ್‌ಡಿಆರ್‌ಎಫ್‌ನ ಧೈರ್ಯವನ್ನು ಇಡೀ ದೇಶವೇ ಗುರುತಿಸಿದೆ ಎಂದು ಪ್ರಧಾನಿ ನುಡಿದರು.

ಭಾರತೀಯ ವಾಯುಪಡೆಯ ಗ್ರೂಪ್‌ ಕ್ಯಾಪ್ಟನ್‌ ವೈ. ಕೆ. ಕಂಡಲ್ಕರ್‌, ಬಿಕ್ಕಟ್ಟಿನ ಸಂದರ್ಭದಲ್ಲಿವಾಯುಪಡೆಯ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದರು. ವೈರ್‌ಗಳ ಬಳಿ ಹೆಲಿಕಾಪ್ಟರ್‌ ನ್ಯಾವಿಗೇಟ್‌ ಮಾಡುವ ಪೈಲಟ್‌ಗಳ ಕೌಶಲ್ಯವನ್ನು ಪ್ರಧಾನಿ ಈ ವೇಳೆ ಗಮನಿಸಿದರು. ಭಾರತೀಯ ವಾಯುಪಡೆಯ ಸಾರ್ಜೆಂಟ್‌ ಪಂಕಜ್‌ ಕುಮಾರ್‌ ರಾಣಾ ಅವರು, ಕೇಬಲ್‌ ಕಾರ್‌ನ ಪ್ರತಿಕೂಲ ಪರಿಸ್ಥಿತಿಗಳಲ್ಲಿಮತ್ತು ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಪ್ರಯಾಣಿಕರ ಸಂಕಷ್ಟದ ನಡುವೆ ಪ್ರಯಾಣಿಕರನ್ನು ರಕ್ಷಿಸುವಲ್ಲಿಗರುಣ ಕಮಾಂಡೋಗಳ ಪಾತ್ರವನ್ನು ವಿವರಿಸಿದರು. ಈ ಸಂದರ್ಭದಲ್ಲಿವಾಯುಪಡೆ ಸಿಬ್ಬಂದಿಯ ಅಸಾಧಾರಣ ಧೈರ್ಯವನ್ನು ಪ್ರಧಾನಿ ಶ್ಲಾಘಿಸಿದರು.


ಅನೇಕ ಪ್ರಯಾಣಿಕರನ್ನು ರಕ್ಷಿಸಿದ ದೇವಘರ್‌ನ ದಾಮೋದರ್‌ ರೋಪ್‌ವೇಯ ಶ್ರೀ ಪನ್ನಾಲಾಲ್‌ ಜೋಶಿ ಅವರು, ರಕ್ಷ ಣಾ ಕಾರ್ಯಾಚರಣೆಯಲ್ಲಿನಾಗರಿಕರ ಪಾತ್ರವನ್ನು ವಿವರಿಸಿದರು. ಇತರರಿಗೆ ಸಹಾಯ ಮಾಡುವುದು ನಮ್ಮ ಸಂಸ್ಕೃತಿಯ ಭಾಗವಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು ಈ ಜನರ ಸಂಪನ್ಮೂಲ ಮತ್ತು ಧೈರ್ಯವನ್ನು ಶ್ಲಾಘಿಸಿದರು.

 ಐಟಿಬಿಪಿಯ ಸಬ್‌ ಇನ್‌ಸ್ಪೆಕ್ಟರ್‌ ಶ್ರೀ ಅನಂತ ಪಾಂಡೆ, ಕಾರ್ಯಾಚರಣೆಯಲ್ಲಿಐಟಿಬಿಪಿ ಪಾತ್ರದ ಕುರಿತು ವಿವರಿಸಿದರು. ಐಟಿಬಿಪಿಯ ಆರಂಭಿಕ ಯಶಸ್ಸುಗಳು ಸಿಕ್ಕಿಬಿದ್ದ ಪ್ರಯಾಣಿಕರ ಸ್ಥೆ ೖರ್ಯವನ್ನು ಹೆಚ್ಚಿಸಿದವು. ಪ್ರಧಾನಮಂತ್ರಿ ಅವರು ಇಡೀ ತಂಡದ ತಾಳ್ಮೆಯನ್ನು ಶ್ಲಾಘಿಸಿದರು ಮತ್ತು ಸವಾಲುಗಳನ್ನು ಸಂಕಲ್ಪ ಮತ್ತು ತಾಳ್ಮೆಯಿಂದ ಎದುರಿಸಿದಾಗ ಯಶಸ್ಸು ಖಚಿತ ಎಂದು ಪ್ರತಿಪಾದಿಸಿದರು.

|

 ದಿಯೊಘರ್‌ನ ಜಿಲ್ಲಾಧಿಕಾರಿ ಮತ್ತು ಉಪ ಆಯುಕ್ತ ಶ್ರೀ ಮಂಜುನಾಥ್‌ ಭಜಂತಾರಿ ಅವರು, ಕಾರ್ಯಾಚರಣೆಯ ಸ್ಥಳೀಯ ಸಮನ್ವಯದ ವಿವರಗಳನ್ನು ವಿವರಿಸಿದರು ಮತ್ತು ವಾಯುಪಡೆಯ ಆಗಮನದವರೆಗೆ ಪ್ರಯಾಣಿಕರ ನೈತಿಕತೆಯನ್ನು ಹೇಗೆ ನಿರ್ವಹಿಸಲಾಯಿತು. ಜತೆಗೆ ಅವರು ಬಹು-ಏಜೆನ್ಸಿ ಸಮನ್ವಯ ಮತ್ತು ಸಂವಹನದ ಮಾರ್ಗಗಳ ವಿವರಗಳನ್ನು ಸಹ ಒದಗಿಸಿದರು. ಸಮಯೋಚಿತ ಸಹಾಯಕ್ಕಾಗಿ ಅವರು ಪ್ರಧಾನಿಯವರಿಗೆ ಧನ್ಯವಾದ ಅರ್ಪಿಸಿದರು. ಕಾರ್ಯಾಚರಣೆಯ ಸಮಯದಲ್ಲಿತಮ್ಮ ವಿಜ್ಞಾನ ಮತ್ತು ತಂತ್ರಜ್ಞಾನದ ಹಿನ್ನೆಲೆಯನ್ನು ಹೇಗೆ ಬಳಸಲಾಯಿತು ಎಂದು ಪ್ರಧಾನ ಮಂತ್ರಿ ಅವರು ಜಿಲ್ಲಾಧಿಕಾರಿಯನ್ನು ಕೇಳಿದರು. ಹಾಗೆಯೇ ಇಂತಹ ಅವಘಡಗಳು ಮರುಕಳಿಸುವುದನ್ನು ತಪ್ಪಿಸಲು ಘಟನೆಯ ಸೂಕ್ತ ದಾಖಲೆಗಳನ್ನು ನೀಡುವಂತೆ ಪ್ರಧಾನಿ ಕೋರಿದರು.

ಬ್ರಿಗ್‌ ಅಶ್ವಿನಿ ನಯ್ಯರ್‌ ಅವರು, ಕಾರ್ಯಾಚರಣೆಯಲ್ಲಿಸೇನೆಯ ಪಾತ್ರವನ್ನು ವಿವರಿಸಿದರು. ಅವರು ಕೇಬಲ್‌ ಕಾರ್‌ಗಳಿಂದ ಪಾರುಗಾಣಿಕಾ ಕುರಿತು ಮಾತನಾಡಿದರು. ಕೆಳಮಟ್ಟದಲ್ಲಿತಂಡದ ಕೆಲಸದ ಸಮನ್ವಯ, ವೇಗ ಮತ್ತು ಯೋಜನೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.

ಇಂತಹ ಘಟನೆ ಅಥವಾ ಪ್ರಕರಣಗಳಲ್ಲಿ, ಪ್ರತಿಕ್ರಿಯೆ ಸಮಯವು ಯಶಸ್ಸಿಗೆ ನಿರ್ಣಾಯಕವಾಗಿದೆ ಎಂದು ಪ್ರಧಾನಿ ಹೇಳಿದರು. ಸಮವಸ್ತ್ರವನ್ನು ನೋಡಿದ ನಂತರ ಜನರಲ್ಲಿಭರವಸೆ ಮೂಡುತ್ತದೆ ಎಂದು ಹೇಳಿದ ಪ್ರಧಾನಮಂತ್ರಿಯವರು ಮುಂದುವರಿದು, ‘‘ ಜನರಿಗೆ ಸಮವಸ್ತ್ರದಲ್ಲಿಹೆಚ್ಚಿನ ನಂಬಿಕೆಯಿದೆ. ಕಷ್ಟದಲ್ಲಿರುವ ಜನರು ನಿಮ್ಮನ್ನು ನೋಡಿದಾಗಲೆಲ್ಲಾ ಅವರು ತಮ್ಮ ಜೀವನವು ಸುರಕ್ಷಿತವಾಗಿದೆ, ಎಂದು ಅವರು ನಂಬುತ್ತಾರೆ, ಅವರಲ್ಲಿಹೊಸ ಭರವಸೆಯು ಜಾಗೃತಗೊಳ್ಳುತ್ತದೆ,’’  ಎಂದರು.

ಕಾರ್ಯಾಚರಣೆಯ ಸಮಯದಲ್ಲಿಮಕ್ಕಳು ಮತ್ತು ವೃದ್ಧರ ಅಗತ್ಯಗಳನ್ನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಂಡ ಕುರಿತು ಪ್ರಧಾನಮಂತ್ರಿ ಅವರು ತೃಪ್ತಿ ವ್ಯಕ್ತಪಡಿಸಿದರು. ಅಂತಹ ಪ್ರತಿಯೊಂದು ಅನುಭವದೊಂದಿಗೆ ಪಡೆಗಳಲ್ಲಿನ ನಿರಂತರ ಸುಧಾರಣೆಯನ್ನು ಅವರು ಶ್ಲಾಘಿಸಿದರು. ಅವರು ರಕ್ಷ ಣಾ ಪಡೆಗಳ ದೃಢತೆ ಮತ್ತು ತಾಳ್ಮೆಯನ್ನು ಶ್ಲಾಘಿಸಿದರು. ಸಂಪನ್ಮೂಲಗಳು ಮತ್ತು ಸಲಕರಣೆಗಳ ವಿಷಯದಲ್ಲಿರಕ್ಷ ಣಾ ಪಡೆಗಳನ್ನು ನವೀಕರಿಸಲು ಸರ್ಕಾರದ ಬದ್ಧತೆಯನ್ನು ಅವರು ಈ ಸಂದರ್ಭದಲ್ಲಿಪುನರುಚ್ಚರಿಸಿದರು. ‘‘ಈ ಸಂಪೂರ್ಣ ಕಾರ್ಯಾಚರಣೆಯು ಸೂಕ್ಷ  ್ಮತೆ, ಸಂಪನ್ಮೂಲ ಮತ್ತು ಧೈರ್ಯದ ಪ್ರತಿಬಿಂಬವಾಗಿದೆ,’’ ಎಂದು ಅವರು ಹೇಳಿದರು.

|

ತಾಳ್ಮೆ ಮತ್ತು ಧೈರ್ಯ ತೋರಿದ ಪ್ರಯಾಣಿಕರ  ಸ್ಥೈರ್ಯವನ್ನು ಪ್ರಧಾನಮಂತ್ರಿ ಗಮನಿಸಿದರು. ಸ್ಥಳೀಯ ನಾಗರಿಕರ ಸಮರ್ಪಣಾ ಮನೋಭಾವ ಮತ್ತು ಸೇವಾ ಮನೋಭಾವನೆಯನ್ನು ವಿಶೇಷವಾಗಿ ಶ್ಲಾಘಿಸಿದರು. ರಕ್ಷಿಸಲ್ಪಟ್ಟ ಪ್ರಯಾಣಿಕರನ್ನು ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು. ‘‘ಯಾವುದೇ ವಿಪತ್ತು ರಾಷ್ಟ್ರಕ್ಕೆ ಹಠಾತ್‌ ಎದುರಾದಾಗ, ನಾವು ಸವಾಲಿನ ವಿರುದ್ಧ ಒಗ್ಗಟ್ಟಿನಿಂದ ಮುಂಚೂಣಿಯಲ್ಲಿರುತ್ತೇವೆ ಮತ್ತು ವಿಜಯಶಾಲಿಯಾಗುತ್ತೇವೆ ಎಂಬುದನ್ನು ಈ ಬಿಕ್ಕಟ್ಟು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಈ ಕಾರ್ಯಾಚರಣೆಯಲ್ಲಿ‘ಸಬ್ಕಾಪ್ರಯಾಸ್‌’ ಪ್ರಮುಖ ಪಾತ್ರ ವಹಿಸಿದೆ,’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ ಅವರು, ಗಾಯಾಳುಗಳು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದರು. ಕಾರ್ಯಾಚರಣೆಯಲ್ಲಿತೊಡಗಿರುವ ಎಲ್ಲರಿಗೂ ವಿವರಗಳನ್ನು ದಾಖಲಿಸಲು ಮತ್ತು ಭವಿಷ್ಯದ ಬಳಕೆಗಾಗಿ ನಿಖರವಾಗಿ ಕಲಿಯಲು ವಿನಂತಿಸುವ ಮೂಲಕ ಅವರು ಸಂವಾದವನ್ನು ಮುಕ್ತಾಯಗೊಳಿಸಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
India’s green infra surge could spark export wave, says Macquarie’s Dooley

Media Coverage

India’s green infra surge could spark export wave, says Macquarie’s Dooley
NM on the go

Nm on the go

Always be the first to hear from the PM. Get the App Now!
...
Lieutenant Governor of Jammu & Kashmir meets Prime Minister
July 17, 2025

The Lieutenant Governor of Jammu & Kashmir, Shri Manoj Sinha met the Prime Minister Shri Narendra Modi today in New Delhi.

The PMO India handle on X wrote:

“Lieutenant Governor of Jammu & Kashmir, Shri @manojsinha_ , met Prime Minister @narendramodi.

@OfficeOfLGJandK”