QuoteThe human face of 'Khaki' uniform has been engraved in the public memory due to the good work done by police especially during this COVID-19 pandemic: PM
QuoteWomen officers can be more helpful in making the youth understand the outcome of joining the terror groups and stop them from doing so: PM
QuoteNever lose the respect for the 'Khaki' uniform: PM Modi to IPS Probationers

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ನಡೆದ “ದೀಕ್ಷಾಂತ್ ಪೆರೇಡ್ ಕಾರ್ಯಕ್ರಮ’’ದ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರೊಬೆಷನರಿ ಐಪಿಎಸ್ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಅಕಾಡೆಮಿಯಿಂದ ಯಶಸ್ವಿಯಾಗಿ ಹೊರಬರುವ ಯುವ ಐಪಿಎಸ್ ಅಧಿಕಾರಿಗಳೊಂದಿಗೆ ನಿಯಮಿತವಾಗಿ ತಾವು ಸಂವಹನ ನಡೆಸುತ್ತಿರುವುದಾಗಿ ತಿಳಿಸಿದರು, ಆದರೆ ಈ ವರ್ಷ ಕೊರೋನಾ ವೈರಾಣುವಿನ ಕಾರಣ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದರು.”ಆದರೆ ನಾನು ಅಧಿಕಾರಾವಧಿಯಲ್ಲಿ, ಖಂಡಿತವಾಗಿಯೂ ನಿಮ್ಮೆಲ್ಲರನ್ನೂ ಒಂದಲ್ಲಾ ಒಂದು ಹಂತದಲ್ಲಿ ಭೇಟಿಯಾಗುತ್ತೇನೆ ಎಂಬ ಖಾತ್ರಿಯಿದೆ” ಎಂದು ಅವರು ಹೇಳಿದರು.

ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಐಪಿಎಸ್ ಪ್ರೊಬೆಷನರಿಗಳಿಗೆ ಪ್ರಧಾನಿ ಶುಭ ಕೋರಿದರು. ಪ್ರೊಬೆಷನರಿಗಳು ತಮ್ಮ ಸಮವಸ್ತ್ರದ ಬಗ್ಗೆ ಹೆಮ್ಮೆ ಪಡಬೇಕೇ ಹೊರತು ಅದರ ಅಧಿಕಾರ ಚಲಾಯಿಸುವುದಲ್ಲ ಎಂದರು. “ನಿಮ್ಮ ಖಾಕಿ ಸಮವಸ್ತ್ರಕ್ಕೆ ಗೌರವವಿದೆ ಎಂದ ಅವರು, ಕೋವಿಡ್ -19ರ ಸಮಯದಲ್ಲಿ ಪೊಲೀಸರು ಮಾಡಿದ ಉತ್ತಮ ಕಾರ್ಯ ಜನರ ಮನದಲ್ಲಿ ಅಚ್ಚಳಿಯದೇ ಉಳಿಯಲಿದ್ದು, ಖಾಕಿಯ ಮತ್ತೊಂದು ಮಾನವೀಯ ಮುಖ ಬೆಳಕಿಗೆ ಬಂದಿತು” ಎಂದರು.

|

ಐಪಿಎಸ್ ಪ್ರೊಬೆಷನರ್ ಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ,“ಇಲ್ಲಿಯವರೆಗೆ ನೀವು ರಕ್ಷಣಾತ್ಮಕ ವಾತಾವರಣದಲ್ಲಿ ಇಲ್ಲಿ ತರಬೇತಿ ಪಡೆದಿದ್ದೀರಿ. ಆದರೆ ನೀವು ಅಕಾಡಮಿಯಿಂದ ಹೊರಬಂದ ತಕ್ಷಣ ಬೆಳಗಾಗುವುದರಲ್ಲಿ ಪರಿಸ್ಥಿತಿ ಬದಲಾಗುತ್ತದೆ,. ನಿಮ್ಮ ಬಗೆಗಿನ ವರ್ತನೆ ಬದಲಾಗುತ್ತದೆ. ಹೆಚ್ಚು ಜಾಗೃತರಾಗಿರಿ, ಮೊದಲ ಅನಿಸಿಕೆ ಕೊನೆಯ ಅನಿಸಿಕೆಯಾಗುತ್ತದೆ. ನಿಮ್ಮನ್ನು ಎಲ್ಲಿಗೆ ವರ್ಗವಾದರೂ ಅಲ್ಲಿ ನಿಮ್ಮ ಛಾಪು ಹಿಂಬಾಲಿಸುತ್ತದೆ.” ಎಂದರು.

ಕಸದಿಂದ ರಸ ತೆಗೆಯುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕೆಂದು ಪ್ರಧಾನ ಮಂತ್ರಿ ಪ್ರೊಬೆಷನರ್‌ ಗಳಿಗೆ ಸಲಹೆ ಮಾಡಿದರು. ಕಿವಿಗಳನ್ನು ಮುಚ್ಚಿಕೊಳ್ಳದಂತೆ ತಿಳಿಸಿದ ಅವರು, ಆದರೆ ಕೇಳಿದ ವಿಷಯಗಳನ್ನು ಶೋಧಿಸುವ ಕಾರ್ಯ ಮಾಡುವುದು ಸಾಧ್ಯವೇ ನೋಡಿ. “ನಿಮ್ಮ ಕಿವಿಗಳಿಗೆ ಬೀಗ ಹಾಕಬೇಡಿ  ಬದಲಾಗಿ ಫಿಲ್ಟರ್ ಹಾಕಿ. ಹೀಗೆ ಶೋಧಿಸಿದ ವಿಷಯಗಳು ನಿಮ್ಮ ಮೆದುಳಿಗೆ ಹೋದಾಗ ಮಾತ್ರ, ಅದು ನಿಮಗೆ ಸಹಾಯ ಮಾಡುತ್ತದೆ, ಕಸವನ್ನು ಹೊರತೆಗೆಯುತ್ತದೆ ಮತ್ತು ನಿಮ್ಮ ಹೃದಯವನ್ನು ಸ್ವಚ್ಛವಾಗಿರಿಸುತ್ತದೆ.” ಎಂದರು.

ನಿಯುಕ್ತಿಗೊಳ್ಳುವ ಪ್ರತಿಯೊಂದು ತಾಣದಲ್ಲೂ ಆತ್ಮೀಯತೆ ಮತ್ತು ಹೆಮ್ಮೆಯ ಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಪ್ರಧಾನ ಮಂತ್ರಿ ಪ್ರೊಬೆಷನರ್‌ಗಳಿಗೆ ಆಗ್ರಹಿಸಿದರು. ಸಾಮಾನ್ಯ ಜನರ ಮೇಲೆ ಸಹಾನುಭೂತಿ ತೋರಿಸಬೇಕೆಂದೂ ಅವರು ಪ್ರೊಬೆಷನರ್‌ ಗಳಿಗೆ ಆಗ್ರಹಿಸಿದರು. ಭಯದಿಂದ ಅವರನ್ನು ನಿಯಂತ್ರಿಸುವ ಬದಲು ಜನರ ಹೃದಯವನ್ನು ಸಹಾನುಭೂತಿಯ ಮೂಲಕ ಗೆಲ್ಲುವುದು ದೀರ್ಘಕಾಲ ಉಳಿಯುತ್ತದೆ ಎಂದು ಅವರು ಹೇಳಿದರು.

|

ಕೋವಿಡ್ -19 ಮಹಾಮಾರಿಯ ಸಂದರ್ಭದಲ್ಲಿ ಪೊಲೀಸರ ಮಾನವೀಯ ಮುಖ ಬೆಳಕಿಗೆ ಬಂದಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಪರಾಧವನ್ನು ಇತ್ಯರ್ಥಪಡಿಸುವಲ್ಲಿ ಕಾನ್‌ ಸ್ಟಾಬ್ಯುಲರಿ ಬೇಹುಗಾರಿಕೆ ನೆರವಿನ ಮಹತ್ವವನ್ನು ಪ್ರಧಾನಿ ಒತ್ತಿ ಹೇಳಿದರು. ನೆಲಮಟ್ಟದ ಗುಪ್ತಚರ ಮಾಹಿತಿಯ ಮಹತ್ವವನ್ನು ಮರೆಯದೆ ತಂತ್ರಜ್ಞಾನವನ್ನು ಗರಿಷ್ಠ ಮಟ್ಟಕ್ಕೆ ಬಳಸಬೇಕೆಂದು ಅವರು ಪ್ರೊಬೆಷನರ್‌ ಗಳನ್ನು ಆಗ್ರಹಿಸಿದರು. ಮಾಹಿತಿ, ಬೃಹತ್ ದತ್ತಾಂಶ ಮತ್ತು ಕೃತಕ ಬುದ್ಧಿಮತ್ತೆಗೆ ಯಾವುದೇ ಕೊರತೆಯಿಲ್ಲ ಎಂದು ಅವರು ಹೇಳಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಲಭ್ಯವಿರುವ ಮಾಹಿತಿಯು ಒಂದು ಆಸ್ತಿ ಎಂದು ಪ್ರಧಾನಿ ಹೇಳಿದರು.

ಕಳೆದ ಕೆಲವು ವರ್ಷಗಳಲ್ಲಿ ವಿಪತ್ತಿನ ಸಂದರ್ಭದಲ್ಲಿ ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್.ಗಳು ಕಾರ್ಯ ನಿರ್ವಹಿಸುತ್ತಿರುವ ರೀತಿ ಪೊಲೀಸ್ ಸೇವೆಗೆ ಹೊಸ ಮಾನ್ಯತೆ ನೀಡಿದೆ ಎಂದರು. ಎನ್‌.ಡಿಆರ್‌.ಎಫ್ ಗುಂಪುಗಳನ್ನು ಆಯಾ ಪ್ರದೇಶಗಳಲ್ಲಿ ಸಂಘಟಿಸಲು ಮತ್ತು ನೈಸರ್ಗಿಕ ವಿಪತ್ತಿನ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ಅವರು ಆಗ್ರಹಿಸಿದರು. ಅವರ ತರಬೇತಿಯನ್ನು ಎಂದಿಗೂ ಕಡೆಗಣಿಸಬೇಡಿ ಎಂದು ಅವರು ಒತ್ತಿ ಹೇಳಿದರು. ತರಬೇತಿಯನ್ನು ಶಿಕ್ಷೆಯ ನಿಯುಕ್ತಿ ಎಂಬ  ಮನಸ್ಥಿತಿಯಿಂದ ಹೊರಬರಲು ಅವರು ಆಗ್ರಹಿಸಿದರು.

|

ಕರ್ಮಯೋಗಿ ಯೋಜನೆಯನ್ನು ಎರಡು ದಿನಗಳ ಹಿಂದಷ್ಟೇ ಆರಂಭಿಸಿದ್ದೇವೆ. ಇದು 7 ದಶಕಗಳ ಹಳೆಯ ನಮ್ಮ ನಾಗರಿಕ ಸೇವೆಯ ಸಾಮರ್ಥ್ಯವರ್ಧನೆ ಮತ್ತು ಕೆಲಸದ ಬಗೆಗಿನ ದೃಷ್ಟಿಕೋನ ಎರಡೂ ವಿಚಾರದಲ್ಲಿ ಅತಿ ದೊಡ್ಡ ಸುಧಾರಣೆಯಾಗಿದೆ ಎಂದರು. ಇದು ನಿಯಮ ಆಧಾರಿತ ನಿಲುವಿನಿಂದ ಪಾತ್ರ ಆಧಾರಿತ ನಿಲುವಿನ ಬದಲಾವಣೆಯಾಗಿದೆ ಎಂದರು.

ಇದು ಪ್ರತಿಭೆಯನ್ನು ಶೋಧಿಸಲು ಮತ್ತು ತರಬೇತಿ ನೀಡಲು ನೆರವಾಗುತ್ತದೆ ಎಂದು ಪ್ರಧಾನಿ ಹೇಳಿದರು. ಸೂಕ್ತ ವ್ಯಕ್ತಿಯನ್ನು ಸೂಕ್ತ ಸ್ಥಳದಲ್ಲಿ ನಿಯುಕ್ತಿಗೊಳಿಸಲು ಇದು ನೆರವಾಗಲಿದೆ ಎಂದರು.

“ನಿಮ್ಮದು ಒಂದು ವೃತ್ತಿಯಾಗಿದ್ದು, ಅಲ್ಲಿ ಅನಿರೀಕ್ಷಿತವಾದದ್ದನ್ನು ಎದುರಿಸುವ ಅಂಶವು ತುಂಬಾ ಹೆಚ್ಚಾಗಿರುತ್ತದೆ, ಮತ್ತು ನೀವೆಲ್ಲರೂ ಜಾಗರೂಕರಾಗಿರಬೇಕು ಮತ್ತು ಇದಕ್ಕಾಗಿ ಸಿದ್ಧರಾಗಿರಬೇಕು. ಹೆಚ್ಚಿನ ಮಟ್ಟದ ಒತ್ತಡವಿರುತ್ತದೆ, ಮತ್ತು ಅದಕ್ಕಾಗಿಯೇ ನಿಮ್ಮ ಹತ್ತಿರದ ಮತ್ತು ಆತ್ಮೀಯರೊಂದಿಗೆ ಮಾತನಾಡುತ್ತಿರುವುದು ಮುಖ್ಯವಾಗುತ್ತದೆ. ಕಾಲಕಾಲಕ್ಕೆ, ಬಹುಶಃ ವಾರದ ರಜಾ ದಿನಗಳಲ್ಲಿ, ನಿಮ್ಮ ಶಿಕ್ಷಕರು ಅಥವಾ ನಿಮಗೆ ಸಲಹೆ ನೀಡುವ ಯಾರನ್ನಾದರೂ ಭೇಟಿ ಮಾಡಿ.”ಎಂದು ಪ್ರಧಾನಿ ಹೇಳಿದರು.

|

ಪೊಲೀಸ್ ಕೆಲಸದಲ್ಲಿ ಸದೃಢತೆಯ ಮಹತ್ವವನ್ನು ಪ್ರಧಾನಿ ಪ್ರತಿಪಾದಿಸಿದರು. ತರಬೇತಿ ಸಮಯದಲ್ಲಿ ಪಡೆದುಕೊಂಡ ಸದೃಢತೆಯನ್ನು ನಿರಂತರವಾಗಿ ಕಾಪಾಡಿಕೊಳ್ಳಬೇಕು ಎಂದರು. ನೀವು ಸದೃಢರಾಗಿದ್ದರೆ, ನಿಮ್ಮ ಸುತ್ತಮುತ್ತ ಇರುವವರೂ ಸದೃಢರಾಗಿರುತ್ತಾರೆ, ಅವರು ನಿಮ್ಮನ್ನು ನೋಡಲು ಹಾತೊರೆಯುತ್ತಾರೆ ಎಂದರು.

ಶ್ರೇಷ್ಠರು ರೂಪಿಸಿದ ದೃಷ್ಟಾಂತವನ್ನು ಜನರು ಅನುಸರಿಸುತ್ತಾರೆ ಎಂಬ ಭಗವದ್ಗೀತೆಯ ಶ್ಲೋಕವನ್ನು ಮನದಲ್ಲಿಟ್ಟುಕೊಳ್ಳುವಂತೆ ಪ್ರಧಾನಿ ಆಗ್ರಹಿಸಿದರು.

“यत्, यत् आचरति, श्रेष्ठः,

तत्, तत्, एव, इतरः, जनः,

सः, यत्, प्रमाणम्, कुरुते, लोकः,

तत्, अनुवर्तते।

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
For PM Modi, women’s empowerment has always been much more than a slogan

Media Coverage

For PM Modi, women’s empowerment has always been much more than a slogan
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 8 ಮಾರ್ಚ್ 2025
March 08, 2025

Citizens Appreciate PM Efforts to Empower Women Through Opportunities